ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ಗೆಲುವಿನ ಹಾದಿ ಸುಗಮವಾಗಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಎಬಿಪಿ-ಸಿವೋಟರ್ ಸಮೀಕ್ಷೆಯಲ್ಲಿ ಹೇಳಿದೆ.
ಪಂಜಾಬ್ ನಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಶೂನ್ಯ ಫಲಿತಾಂಶ ಲಭ್ಯವಾಗಲಿದೆ. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ನಡುವೆ ತೀವ್ರ ಪೈಪೋಟಿ ಏರ್ಪಡಲಿದ್ದು ಯಾರಿಗೂ ಸ್ಪಷ್ಟಬಹುಮತ ದೊರೆಯುವುದಿಲ್ಲ ಎಂದು ಎಬಿಪಿ-ಸಿವೋಟರ್ ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ+217 ಸ್ಥಾನಳು, ಸಮಾಜವಾದಿ ಪಕ್ಷ 156 ಸ್ಥಾನಗಳು, ಬಿಎಸ್.ಪಿ 18 ಸ್ಥಾನ ಮತ್ತು ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಬಿಜೆಪಿ+213-221 ಮತ್ತು ಎಸ್ಪಿ+152-160 ಸೀಟುಗಳನ್ನು ಪಡೆಯಲಿವೆ.
ಪಂಜಾಬ್ ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ. ಕಾಂಗ್ರೆಸ್ 46, ಎಸ್.ಎಡಿ 20, ಎಎಪಿ 51 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇದೆ. ಬಿಜೆಪಿಗೆ ಶೂನ್ಯ ಫಲಿತಾಂಶ ಎಂದು ಅಂದಾಜಿಸಿದೆ. ಕಾಂಗ್ರೆಸ್ 42-50, ಎಎಪಿ 47-53 ಸೀಟುಗಳು ಪಡೆಲಿದೆ.
ಉತ್ರರಖಂಡದಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಸಿವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ.ಬಿಜೆಪಿ 38, ಕಾಂಗ್ರೆಸ್ 32, ಎಎಪಿ ಮತ್ತು ಇತರರು 0 ಸ್ಥಾನಗಳನ್ನು ಗಳಿಸುವ ನಿರೀಕ್ಷೆ ಇದೆ.
ಗೋವಾದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ 21, ಎಎಪಿ 5 ಮತ್ತು ಕಾಂಗ್ರೆಸ್ 4 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಬಿಜೆಪಿ ಶೇ.35.7, ಎಪಿಪಿ ಶೇ.23.6 ಮತ್ತು ಕಾಂಗ್ರೆಸ್ ಶೇ.18.6 ಮತಗಳನ್ನು ಗಳಿಸುವ ನಿರೀಕ್ಷೆ ಇದೆ ಎಂದು ಸಮೀಕ್ಷೆ ತಿಳಿಸಿದೆ.
ಮಣಿಪುರದಲ್ಲಿ ಬಿಜೆಪಿ ಗೆಲ್ಲಲಿದ್ದು ಬಿಜೆಪಿ 25-29, ಕಾಂಗ್ರೆಸ್20-24, ನಾಗಾ ಪೀಪಲ್ಸ್ ಫ್ರಂಟ್ 4-9 ಮತ್ತು ಇತರರು 3-7 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆ ತಿಳಿಸಿದೆ.