Thursday, November 21, 2024
Google search engine
Homeಮುಖಪುಟಜನರ ಕೊರತೆ - ತುಮಕೂರಿನಲ್ಲಿ ಮುಖ್ಯಮಂತ್ರಿಗಳ ರೋಡ್ ಶೋ ಪ್ಲಾಪ್

ಜನರ ಕೊರತೆ – ತುಮಕೂರಿನಲ್ಲಿ ಮುಖ್ಯಮಂತ್ರಿಗಳ ರೋಡ್ ಶೋ ಪ್ಲಾಪ್

ತುಮಕೂರು ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಬಿ.ಜ್ಯೋತಿಗಣೇಶ್ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಮಕೂರು ನಗರದ ಎಸ್.ಐಟಿ ಮುಖ್ಯರಸ್ತೆಯಲ್ಲಿ ನಡೆಸಬೇಕಿದ್ದ ರೋಡ್ ಶೋ ನಡೆಯದೆ ಪ್ಲಾಪ್ ಆಯಿತು. ಜನರ ಹಾಜರಾತಿ ಕೊರತೆ ರೋಡ್ ಶೋ ರದ್ದುಪಡಿಸಲು ಕಾರಣ ಎಂದು ಹೇಳಲಾಗುತ್ತಿದೆ.

ಏಪ್ರಿಲ್ 23ರಂದು ತುಮಕೂರಿನಲ್ಲಿ ಮುಖ್ಯಮಂತ್ರಿ ರೋಡ್ ಶೋ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ಹೀಗಾಗಿ ಇಂದು ಮಧ್ಯಾಹ್ನ 2 ಗಂಟೆಯಿಂದಲೇ ಎಸ್.ಐ.ಟಿ ಮತ್ತು ಸೋಮೇಶ್ವರಪುರಂ ಮುಖ್ಯರಸ್ತೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಪೊಲೀಸರು ಬಿರು ಬಿಸಿಲಿನಲ್ಲೇ ಸೋಮೇಶ್ವರ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಕೊಡಲಿಲ್ಲ.

ಬಿಜೆಪಿಯ ಬೆಂಬಲಿಗರು ಈ ಎರಡು ಬಡಾವಣೆಗಳಲ್ಲಿ ಹೆಚ್ಚಾಗಿ ಇದ್ದರೂ ಬಿಸಿಲಿನ ಝಳಕ್ಕೆ ರಸ್ತೆಯ ಕಡೆ ಮುಖ ಹಾಕಲಿಲ್ಲ. ಇದರಿಂದ ರಸ್ತೆಯಲ್ಲಿ ಜನ ಸಂಚಾರ ಮತ್ತು ವಾಹನ ಸಂಚಾರ ವಿಲ್ಲದೆ ಸೋಮೇಶ್ವರ ಮತ್ತು ಎಸ್ಐಟಿ ಮುಖ್ಯರಸ್ತೆ ಬಿಕೋ ಎನ್ನುತ್ತಿತ್ತು. ಸಂಜೆ 5.30ಕ್ಕೆ ಈ ರಸ್ತೆಯಲ್ಲಿ ಮುಖ್ಯಮಂತ್ರಿಗಳು ಸಾಗಬೇಕಿದ್ದ ವಾಹನಗಳು ಸಾಗಿ ಹೋದವು. ಈ ಸಂದರ್ಭದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಜನರೇ ಇಲ್ಲದಿರುವುದು ಕಂಡು ಬಂತು.

ತುಮಕೂರಿನ ಗಂಗೋತ್ರಿ ನಗರದ (ಎಸ್.ಐ.ಟಿ ಮುಖ್ಯದ್ವಾರ) ಭಾಗದಿಂದ ಮೆರವಣಿಗೆ ನಡೆಸಿದರೆ ಜನರ ಸ್ಪಂದನೆ ಚನ್ನಾಗಿ ಸಿಗಬಹುದು ಮತ್ತು ಇಲ್ಲಿಂದ ಮೆರವಣಿಗೆ ನಡೆಸಿದರೆ ಗೆಲುವು ಸಿಗುತ್ತದೆ ಎಂಬುದು ಬಿಜೆಪಿಯ ಸ್ಥಳೀಯ ಮುಖಂಡರ ನಂಬಿಕೆಯಾಗಿದೆ. ಹಾಗಾಗಿ ಅಲ್ಲಿಂದಲೇ ಮೆರವಣಿಗೆ ನಡೆಸಲು ಸಮಯ ನಿಗದಿಯಾಗಿತ್ತು. ಆದರೆ ಮುಖ್ಯಮಂತ್ರಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳದೆ ಹೋಗಿದ್ದು ಕಾರ್ಯಕರ್ತರ ಬೇಸರಕ್ಕೆ ಕಾರಣವಾಯಿತು.

ಮುಖ್ಯಮಂತ್ರಿಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳದಿದ್ದರೂ ಸ್ಥಳೀಯ ಬಿಜೆಪಿ ಮುಖಂಡರು ನಾಮಕಾವಸ್ಥೆಗೆ ಮೆರವಣಿಗೆ ನಡೆಸಿದರು. ಈ ಮೆರವಣಿಗೆಯಲ್ಲಿ ಸುಮಾರು 200 ಜನರು ಪಾಲ್ಗೊಂಡಿದ್ದರು. ನಮ್ಮೂರ ಆಹಾರದ ಬಳಿ ಮೆರವಣಿಗೆ ಬರುತ್ತಿದ್ದಂತೆಯೇ ಜನರು ತಮ್ಮ ತಮ್ಮ ಮನೆಗಳಿಗೆ ತೆರಳಿದ ಪ್ರಸಂಗವೂ ನಡೆಯಿತು.

RELATED ARTICLES

1 COMMENT

  1. TUMAKURU MUKYA MANTRI GALA ROAD SHOW FLAP AYTU HAGE RAJYADALLI ADHIKARADA GADDUGE ERUVA KELASAVU FLAP AGUVA MUNSOOCHANEYANTIDE KARANA ELE ERIKE MITIMEERIDA BRASTACHARAA BESATTA JANA -😱🫣😪😡

LEAVE A REPLY

Please enter your comment!
Please enter your name here

- Advertisment -
Google search engine

Most Popular