ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರೋಡ್ ಶೋ ನಡೆಸುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆಲ್ಲೂರು ಜಿಲ್ಲೆಯ ಕಂದುಕೂರಿನಲ್ಲಿ ನಡೆದಿದೆ.
ಬುಧವಾರ ರಾತ್ರಿ ಸಂಭವಿಸಿದ ಕಾಲ್ತುಳಿತದಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಘಟನೆಯ ನಂತರ ಚಂದ್ರಬಾಬು ನಾಯ್ಡು ರೋಡ್ ಶೋ ಅನ್ನು ರದ್ದುಗೊಳಿಸಿದರೆಂದು ತಿಳಿದುಬಂದಿದೆ.
ವೈಎಸ್.ಆರ್. ಕಾಂಗ್ರೆಸ್ ಸರ್ಕಾರದ ವಿರುದ್ಧ ಇದೇಂ ಕರ್ಮ ಮನರಾಷ್ಟ್ರಾನಿಕಿ ಘೋಷಣೆಯಡಿ ಹಮ್ಮಿಕೊಂಡಿದ್ದ ರೋಡ್ ಶೋ ಅನ್ನು ನೆಲ್ಲೂರು ಜಿಲ್ಲೆಯಲ್ಲಿ ಮೂರು ದಿನಗಳ ಪ್ರವಾಸದಲ್ಲಿದ್ದರು. ಕಂದುಕೂರು ಪಟ್ಟಣದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿದ್ದರು.
ರೋಡ್ ಶೋ ಎನ್.ಟಿ.ಆರ್ ಸರ್ಕಲ್ ತಲುಪುತ್ತಿದ್ದಂತೆಯೇ ನಾಯ್ಡು ಸಭೆಯನ್ನು ಉದ್ದೇಶಿಸಿ ಮಾತನಾಡಲು ಆರಂಭಿಸಿದರು. ಈ ವೇಳೆ ಜನ ಸಮೂಹವು ನಾಯ್ಡು ಅವರ ವಾಹನಕ್ಕೆ ಹತ್ತಿರವಾಗಲು ನೂಕುನುಗ್ಗಲು ಉಂಟಾಯಿತು. ಗುಂಡಮಕಟ್ಟಾ ತೆರೆದ ಒಳಚರಂಡಿ ಕಾಲುವೆ ಬಳಿ ಕಿಕ್ಕಿರಿದು ತುಂಬಿದ್ದ ಜನರಲ್ಲಿ ಹಲವರು ಚರಂಡಿಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚರಂಡಿ ಆಳವಿಲ್ಲದಿದ್ದರೂ ಜನರು ಒಬ್ಬರ ಮೇಲೊಬ್ಬರು ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಪಕ್ಷದ ಕಾರ್ಯಕರ್ತರು ಚರಂಡಿಗೆ ಬಿದ್ದವರನ್ನು ಹೊರೆಗೆ ಎಳೆದರು ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಘಟನೆಯಿಂದ ರೋಡ್ ಶೋ ನಿಲ್ಲಿಸಿದ ನಾಯ್ಡು ಆಸ್ಪತ್ರೆಗೆ ಧಾವಿಸಿ ವೈದ್ಯರೊಂದಿಗೆ ಮಾತುಕತೆ ನಡೆಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಧನಸಹಾಯವನ್ನು ಘೋಷಿಸಿದರು ಎಂದು ಮಾಧ್ಯಮಗಳು ತಿಳಿಸಿವೆ.
ವಡ್ಡಗೆರೆ, ಕಾಮರೂಪಿ ಅವರೊಂದಿಗಿನ ತಮ್ಮ ಒಡನಾಟ ಹಂಚಿಕೊಂಡದ್ದು ಆಪ್ತವಾಗಿದೆ. ನನಗೆ, ಆ ಹಿರಿಯರೊಂದಿಗೆ ಮಾತನಾಡುವ ಸದವಕಾಶ ಒದಗಲಿಲ್ಲವಲ್ಲ ಎಂಬ ಬೇಸರ.