Friday, November 22, 2024
Google search engine
Homeಮುಖಪುಟನೂತನ ಶಿಕ್ಷಣ ನೀತಿ ರಾಜ್ಯದ ಸ್ವಾಯತ್ತತೆಗೆ ಮಾರಕ - ಧ್ರುವನಾರಾಯಣ್

ನೂತನ ಶಿಕ್ಷಣ ನೀತಿ ರಾಜ್ಯದ ಸ್ವಾಯತ್ತತೆಗೆ ಮಾರಕ – ಧ್ರುವನಾರಾಯಣ್

ಶ್ರೇಣೀಕೃತ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಮನುವಾದಿ ಬಿಜೆಪಿ ದೇಶದ ಶಿಕ್ಷಣವನ್ನು ಕೇಸರೀಕರಣ ಮಾಡುವ ಜೊತೆಗೆ ಖಾಸಗಿಕರಣ ಮಾಡಲು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ಮುಂದಾಗಿದೆ. ಇದು ರಾಜ್ಯದ ಸ್ವಾಯತ್ತತೆ ಮತ್ತು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಆರೋಪಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ನೂತನ ಶಿಕ್ಷಣ ನೀತಿ ನಗರ-ಗ್ರಾಮಾಂತರ ಮತ್ತು ಬಡವ-ಶ್ರೀಮಂತರ ನಡುವೆ ಸಾಕಷ್ಟು ಕಂದಕವನ್ನು ನಿರ್ಮಾಣ ಮಾಡಲಿದೆ. ಹಾಗಾಗಿ ಇದರ ಸಾಧಕ-ಬಾಧಕಗಳ ಬಗ್ಗೆ ಸವಿವರವಾಗಿ ಚರ್ಚೆ ನಡೆಸಬೇಕಿತ್ತು. ಆದರೆ ಚರ್ಚೆ ಮಾಡದೇ ಜಾರಿಗೊಳಿಸುತ್ತಿರುವುದು ಅವೈಜ್ಞಾನಿವಾಗಿದೆ ಎಂದು ದೂರಿದರು.

ನೂತನ ಶಿಕ್ಷಣ ನೀತಿಯನ್ನು ಡಾ.ಕಸ್ತೂರಿರಂಗನ್ ಸಮಿತಿ ಆಧಾರದ ಮೇಲೆ ಜಾರಿಗೆ ತರಲಾಗುತ್ತಿದೆ. ಅವರು ಇಸ್ರೋ ಹಾಗೂ ಎಜುಸ್ಯಾಟ್ ಶಿಕ್ಷಣದ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾಋಎ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ ಸಮಿತಿಯಲ್ಲಿ ಬಹುತೇಕ ಸದಸ್ಯರು ಆರ್.ಎಸ್.ಎಸ್. ಮೂಲದವರು. ಶ್ರೀಧರನ್ ಆರ್.ಎಸ್.ಎಸ್ ಸಂಚಾಲಕರು. ನಡ್ಡಾ ಜೊತೆ ಕೆಲಸ ಮಾಡಿದ್ದ ರಾಜೇಂದ್ರ ಪ್ರತಾಪ್ ಗುಪ್ತಾ ಸದಸ್ಯರಾಗಿದ್ದರು. ಆದ್ದರಿಂದ ಶಿಕ್ಷಣವನ್ನು ಕೇಸರೀಕರಣ ಮಾಡುವುದೇ ಬಿಜೆಪಿಯ ಹುನ್ನಾರ ಆಗಿದೆ ಎಂದು ಟೀಕಿಸಿದರು.

ನೂತನ ಶಿಕ್ಷಣ ನೀತಿಗೆ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿವೆ. ತ್ರಿಭಾಷಾ ನೀತಿ ಮೂಲಕ ಹಿಂದಿ ಮತ್ತು ಸಂಸ್ಕೃತ ಭಾಷೆ ಹೇರುವ ಪ್ರಯತ್ನ ನಡೆಯುತ್ತಿದೆ. ದೇಶದಲ್ಲಿ 10 ಲಕ್ಷ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಕಂಪ್ಯೂಟರ್ ಮತ್ತು ತರಬೇತಿ ನೀಡುವ ಶಿಕ್ಷಕರ ಕೊರತೆ ಇದೆ. ಇಂಟರ್ ನೆಟ್ ಸಮಸ್ಯೆಯೂ ಇದೆ. ಇಂತಹ ಸಮಸ್ಯೆಗಳ ನಡುವೆ ಆನ್ ಲೈನ್ ಶಿಕ್ಷಣವನ್ನು ಶೇ,50ರಷ್ಟು ಹೆಚ್ಷಿಸುವುದಾಗಿ ಹೇಳಿದೆ. ಇದು ವಿದ್ಯಾರ್ಥಿಗಳ ನಡುವೆ ಕಂದಕ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ತಿಳಿಸಿದರು.

ಹೊಸ ಶಿಕ್ಷಣ ನೀತಿಯಲ್ಲಿ ಎಸ್.ಸಿ, ಎಸ್.ಟಿ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಾತಿ, ವಿದ್ಯಾರ್ಥಿ ವೇತನದ ಬಗ್ಗೆ ಉಲ್ಲೇಖ ಮಾಡಿಲ್ಲ. ಇದು ಖಾಸಗೀ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಿದೆ. ಡೊನೇಷನ್ ಹಾವಳಿ ಹೆಚ್ಚಿರುವ ಸಂದರ್ಭದಲ್ಲಿ ಶಿಕ್ಷಣದ ಹೆಸರಿನಲ್ಲಿ ಮತ್ತಷ್ಟು ಸುಲಿಗೆಗೆ ಅವಕಾಶ ನೀಡಲಿದೆ. ಶುಲ್ಕ ನಿಯಂತ್ರಕ್ಕೆ ಅವಕಾಶವಿಲ್ಲ. ಇದು ವಿದ್ಯಾರ್ಥಿಗಳಿಗೆ ಅನನುಕೂಲವಾಗಲಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular