Thursday, September 19, 2024
Google search engine
Homeಜಿಲ್ಲೆಆಶಾಢಭೂತಿತನದ ಜಂಗಮರಿಂದ ಬಸವಣ್ಣನ ಆಶಯಗಳಿಗೆ ಧಕ್ಕೆ - ಲೇಖಕಿ ಡಾ.ಮಂಜುಳ ಅಭಿಮತ

ಆಶಾಢಭೂತಿತನದ ಜಂಗಮರಿಂದ ಬಸವಣ್ಣನ ಆಶಯಗಳಿಗೆ ಧಕ್ಕೆ – ಲೇಖಕಿ ಡಾ.ಮಂಜುಳ ಅಭಿಮತ

ಆಶಾಡಭೂತಿತನದ ಜಂಗಮರಿಂದ ಬಸವಣ್ಣನ ಆಶಯಗಳಿಗೆ ಧಕ್ಕೆಯುಂಟಾಗಿದೆ ಎಂದು ಲೇಖಕಿ ಡಾ.ಮಂಜುಳ ಅಭಿಪ್ರಾಯಪಟ್ಟಿದ್ದಾರೆ.

ತುಮಕೂರಿನಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ವಚನ-ನಿರ್ವಚನ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ದುರಾಸೆ ಬಿಡಬೇಕು. ಆತ್ಮಶುದ್ಧಿಯಿಂದ ಇರಬೇಕು ಎಂದು ಹೇಳಿದರು.

ಶರಣರು ಸಕಲ ಜೀವಿಗಳಿಗೂ ಲೇಸನೇ ಬಯಸಿದರು. ಹಾಗಾಗಿ ವಚನಕಾರರ ವಚನಗಳು ಇಂದಿಗೂ ಪ್ರಸ್ತುತವಾಗಿವೆ. ವಚನಕಾರರು ನುಡಿದಂತೆ ನಡೆದವರು. ಜಾತಿ, ಕುಲ, ವರ್ಣಗಳನ್ನು ಮೀರಿ ನಡೆದರು ಎಂದು ತಿಳಿಸಿದರು.

ದೈನಂದಿನ ಜೀವನದ ಅನುಭವಗಳನ್ನು, ಅನುಭವ ಮಂಟಪದಲ್ಲಿ ಹಂಚಿಕೊಂಡರು. ಅನುಭವ ಮಂಟಪ ಎಂಬ ಹೆಸರೇ ವಿಶಿಷ್ಟವಾದುದು. ಅಕ್ಕ ಮಹಾದೇವಿಯಂತೆ ಓದು ಬರಹ ಕಲಿತವರ ಜೊತೆಗೆ, ಓದು ಬರಹ ಗೊತ್ತಿಲ್ಲದ ಎಷ್ಟೊ ಮಂದಿ ವಚನಗಳನ್ನು ರಚಿಸಿರುವರು. ವಚನಕಾರರಿಗೆ ಮನಸ್ಸೇ ಕಾನೂನಾಗಿ, ಸಹಕಾರತತ್ವ ಮೂಲವಾಗಿತ್ತು ಎಂದು ವಿವರಿಸಿದರು.

ಲೇಖಕಿ ಸಿ.ಎಲ್.ಸುನಂದಮ್ಮ ಮಾತನಾಡಿ ನಿರ್ವಚನ ಪದವು ವಾಚ್ಯಾರ್ಥ, ಸೂಚ್ಯಾರ್ಥ ಮತ್ತು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸುವುದನ್ನು ಒಳಗೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಲೇಸಂ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ವಚನಗಳು ಎಲ್ಲಾ ಕಾಲಕ್ಕೂ ಪ್ರಸ್ತುತ. ಸಮಕಾಲೀನ ಸವಾಲುಗಳಿಗೆ ವಚನಗಳಲ್ಲಿ ನಾವು ಉತ್ತರ ಕಂಡುಕೊಳ್ಳಬಹುದಾಗಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular