10 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರೆಂದು ರಾಜ್ಯ ಮಟ್ಟದಲ್ಲಿ ಗುರುತಿಸಲು ಮಾರ್ಗಸೂಚಿಗಳನ್ನು ರೂಪಿಸಲು ನಿರ್ದೇಶನ ಕೋರಿ ಸಲ್ಲಿಸಿರುವ ಮನವಿ ಬಗ್ಗೆ ಕೇಂದ್ರ ಸರ್ಕಾರ ಸ್ಪಷ್ಟ ನಿಲುವು ವ್ಯಕ್ತಪಡಿಸಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಸಂಬಂಧ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಲು ಬಯಸಿದರೆ ಅಲ್ಲಿ ಅವರು ಇತರ ಸಮುದಾಯಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಸುಪ್ರೀಂಕೋರ್ಟ್ ಕೇಂದ್ರಕ್ಕೆ ತಿಳಿಸಿದೆ.
ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠವು ಭಾರತ ಒಕ್ಕೂಟವು ತಾನು ಏನು ಮಾಡಬೇಕೆಂದು ನಿರ್ಧರಿಸಿಲ್ಲ. ಹೀಗಾಗಿ ಪರಿಹಾರ ಸಂಕೀರ್ಣವಾಗಿರಲು ಸಾಧ್ಯವಿಲ್ಲ. ನೀವು ಸಮಾಲೋಚಿಸಲು ಬಯಸಿದರೆ ರಾಜ್ಯ ಸರ್ಕಾರಗಳನ್ನು ಸಂಪರ್ಕಿಸಿ ಎಂದು ನ್ಯಾಯ ಮೂರ್ತಿ ಕೌಲ್ ಕೇಂದ್ರದ ಪರ ವಕೀಲರಿಗೆ ಹೇಳಿದರು.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಸ್.ವೈದ್ಯನಾಥನ್, ಕೇಂದ್ರ ತನ್ನ ಹಿಂದಿನ ಅಫಿಡವಿಡ್ ಅನ್ನು ರದ್ದುಗೊಳಿಸಿ ಹೊಸ ಅಫಿಡವಿಟ್ ಸಲ್ಲಿಸಿದೆ ಎಂದು ಹೇಳಿದರು. ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲು ಬಯಸುತ್ತದೆ ಎಂದು ಹೇಳಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಬೇರೆ ವಿಚಾರದಲ್ಲಿ ನಿರತರಾಗಿರುವ ಕಾರಣ ಕೇಂದ್ರದ ವಕೀಲರು ಈ ವಿಷಯವನ್ನು ಅಂಗೀಕರಿಸುವಂತೆ ಪೀಠವನ್ನು ಕೋರಿದರು.
ನ್ಯಾಯಾಮೂರ್ತಿ ಕೌಲ್ ಅವರು, ವಿಷಯಗಳಿವೆ. ನಿರ್ಣಯದ ಅಗತ್ಯವಿರುತ್ತದೆ. ವಿಭಿನ್ನ ನಿಲುವುಗಳನ್ನು ತೆಗೆದುಕೊಳ್ಳುವುದು ಸಹಾಯ ಮಾಡುವುದಿಲ್ಲ ಎಂದು ಹೇಳಿ ಪೀಠವು ನಂತರ ವಿಷಯವನ್ನು ಕೈಗೆತ್ತಿಕೊಳ್ಳಲು ಒಪ್ಪಿಕೊಂಡಿತು. ಸಾಲಿಸಿಟರ್ ಜನರಲ್ ಬರಲಿ ಎಂದು ಪೀಠ ಸೂಚಿಸಿತು.
ಇತ್ತೀಚಿನ ಅಫಿಡವಿಟ್ ನಲ್ಲಿ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಸುಪ್ರೀಂಕೋರ್ಟ್ ಗೆ ತಿಳಿಸಿದ್ದು, ಅಲ್ಪಸಂಖ್ಯಾತರಿಗೆ ಸೂಚಿಸುವ ಅಧಿಕಾಋವನ್ನು ಕೇಂದ್ರಕ್ಕೆ ನೀಡಲಾಗಿದೆ. ಆದರೆ ಅರ್ಜಿಯಲ್ಲಿ ಎದ್ದಿರುವ ವಿವಾದಗಳ ದೃಷ್ಟಿಯಿಂದ ರಾಜ್ಯಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಲು ಒತ್ತು ನೀಡಿದೆ ಎಂದು ನ್ಯಾಷನಲ್ ಹೆರಾಲ್ಡ್.ಕಾಮ್ ವರದಿ ಮಾಡಿದೆ.
10 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದು ಅವರಿಗೆ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಮನವಿಗೆ ಅಲ್ಪಸಂಖ್ಯಾತರಿಗೆ ಮೀಸಲಾದ ಯೋಜನೆಗಳ ಪ್ರಯೋಜನ ಪಡೆಯಲು ಸಚಿವಾಲಯದ ಪ್ರತಿಕ್ರಿಯೆ ಬಂದಿದೆ.