Monday, December 23, 2024
Google search engine
Homeಮುಖಪುಟಕಾನೂನು, ರಾಜಕಾರಣ ಮರುವ್ಯಾಖ್ಯಾನ ಅಗತ್ಯ

ಕಾನೂನು, ರಾಜಕಾರಣ ಮರುವ್ಯಾಖ್ಯಾನ ಅಗತ್ಯ

ದೇಶದ ಪ್ರಜಾಪ್ರಭುತ್ವವು ವಿವಿಧ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತಿರುವುದು ದುರದೃಷ್ಟಕರ. ಗಾಂಧಿ, ಅಂಬೇಡ್ಕರ್ ಅವರ ಕೊಡುಗೆಗಳನ್ನು ಬಯಸುವ ನಾಗರಿಕನಿಗೆ, ಅವರ ಆದರ್ಶ, ನಿಷ್ಠೆ, ತತ್ವಗಳನ್ನೂ ಪಾಲಿಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲವಾಗಿದೆ ಎಂದು ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರೊ.ಆರ್.ಎಲ್. ಎಂ. ಪಾಟೀಲ್ ಬೇಸರ ವ್ಯಕ್ತಪಡಿಸಿದರು.

ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ‘ಭಾರತೀಯ ಪ್ರಜಾಪ್ರಭುತ್ವದ ಕಾಳಜಿಗಳು: ಅಸ್ಮಿತೆ, ಬಹುತ್ವ ಹಾಗೂ ಸಂಯುಕ್ತ ರಾಜಕಾರಣ’ ವಿಷಯದ ಕುರಿತ ಎರಡು ದಿನಗಳ 20ನೆಯ ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಭಾರತ ಸ್ವತಂತ್ರವಾದ ಸಂದರ್ಭದಲ್ಲಿ- ರಾಜಕೀಯವೆಂದರೆ ಪ್ರಜೆಗಳ ಸೇವೆ. ಅಭಿವೃದ್ಧಿಯೇತರ ಆಡಳಿತದಿಂದ ರಾಷ್ಟ್ರ ನಿರ್ಮಾಣ ಸಾಧ್ಯ. ದೇಶವನ್ನು ಮುನ್ನಡೆಸಲು ಸಂವಿಧಾನ, ಕಾನೂನಿನ ಅಗತ್ಯವಿದೆ. ಎಲ್ಲರೂ ಭಾರತವನ್ನು ಮರುನಿರ್ಮಿಸಲು ಶ್ರಮಿಸೋಣ ಎಂಬುದಾಗಿತ್ತು. ಈಗಿನ ಕಾಲಘಟ್ಟದ ಕಾನೂನು, ರಾಜಕಾರಣವನ್ನು ಮರು ವ್ಯಾಖ್ಯಾನಿಸಬೇಕಿದೆ ಎಂದರು.

ಮೈಸೂರು ವಿವಿಯ ರಾಜ್ಯಶಾಸ್ತç ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಎಚ್.ಎಂ.ರಾಜಶೇಖರ್ ದಿಕ್ಸೂಚಿ ಭಾಷಣ ಮಾಡಿ, ರಾಜಕೀಯ ಭ್ರಷ್ಟಾಚಾರದಿಂದ ಆಡಳಿತಾತ್ಮಕ ಭ್ರಷ್ಟಾಚಾರ, ಜನರ ತೆರಿಗೆಯ ಹಣದ ದುರುಪಯೋಗ, ಧಾರ್ಮಿಕ, ಜಾತಿ ಮತ್ತು ಸಮುದಾಯಗಳ ಧ್ರುವೀಕರಣದಿಂದ ರಾಜಕೀಯ ಧ್ರುವೀಕರಣ, ಕುಟುಂಬ ಆಧಾರಿತ ರಾಜಕೀಯದಿಂದ ಸ್ವಾರ್ಥ. ಇದರಿಂದ ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಪೆಟ್ಟಾಗಿದೆ. ಸಂಯುಕ್ತ ರಾಜಕಾರಣ ಮತ್ತು ಪ್ರಜಾಪ್ರಭುತ್ವ ಸಂವಿಧಾನದ ಎರಡು ಮುಖಗಳಾಗಿ ಕಾರ್ಯನಿರ್ವಹಿಸಬೇಕು ಎಂದರು.

ಕರ್ನಾಟಕ ರಾಜ್ಯ ರಾಜ್ಯಶಾಸ್ತ್ರ ಶಿಕ್ಷಕರ ಸಂಘದ ಸಂಸ್ಥಾಪಕ ಕಾರ್ಯದರ್ಶಿ ಪ್ರೊ.ಜಯಪ್ರಕಾಶ್ ಮಾವಿನಕುಳಿ,, ತುಮಕೂರು ವಿವಿ ರಾಜ್ಯಶಾಸ್ತ್ರ ಶಿಕ್ಷಕರ ಅಕಾಡೆಮಿಯ ಅಧ್ಯಕ್ಷ ಡಾ. ಟಿ. ಜಿ. ನಾಗಭೂಷಣ, ಕುಲಸಚಿವೆ ನಾಹಿದಾ ಜಮ್‌ಜಮ್, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್, ಬೆಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಪ್ರೊ. ಪಿ.ಎಸ್. ಜಯರಾಮು, ಸಮ್ಮೇಳದ ಅಧ್ಯಕ್ಷ ಪ್ರೊ.ಬಸವರಾಜ, ಸಂಘಟನಾ ಕಾರ್ಯದರ್ಶಿಗಳಾದ ಡಾ.ನಾಗರಾಜು, ಡಾ. ಕೆ. ಸಿ. ಸುರೇಶ, ಕೋಶಾಧಿಕಾರಿ ಡಾ. ಮಂಜುನಾಥ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular