ಸಣ್ಣ ಸಣ್ಣ ಸಮುದಾಯಗಳು ಸಹ ಸಹಕಾರಿ ಸಂಘಗಳನ್ನು ಸ್ಥಾಪಿಸಿ, ಅರ್ಥಿಕವಾಗಿ ಬಲಿಷ್ಠರಾಗುವತ್ತ ಹೆಜ್ಜೆ ಇರಿಸಿದ್ದು, ಸಹಕಾರಿ ಸಂಸ್ಥೆಗಳಿಂದ ಕುಲ ಕಸುಬ ಮಾಡುವವರಿಗೆ ಹೆಚ್ಚಿನ ಸಾಲ ಸೌಲಭ್ಯ ದೊರೆತ್ತಿರುವುದು, ಅವರ ಅರ್ಥಿಕ ಸದೃಢತೆಗೆ ಬುನಾದಿ ಹಾಕಿದೆ ಎಂದು ಅಡಿಟರ್ ಟಿ.ಅರ್.ಅಂಜನಪ್ಪ ತಿಳಿಸಿದ್ದಾರೆ.
ತುಮಕೂರು ನಗರದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಸ್ವಾಮಿವಿವೇಕಾನಂದ ಸಹಕಾರ ಸಂಘದ ಸಿಲ್ವರ್ ಜ್ಯುಬಲಿ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ಮಾಜಿ ಮಂತ್ರಿ ದಿವಂಗತ ಲಕ್ಷ್ಮೀನರಸಿಂಹಯ್ಯ ಅವರ 24ನೇ ಸಂಸ್ಮರಣೆ, ಸಹಕಾರರತ್ನ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ಬ್ಯಾಂಕುಗಳು ತಮ್ಮಲ್ಲಿರುವ ಜನರ ಹಣವನ್ನು ಉಳಿಸಿ,ಬೆಳೆಸಲು ಒಳ್ಳೆಯ ಸಾಲಗಾರರ ಹುಡುಕಾಟದಲ್ಲಿವೆ. ಜನರ ಬಳಿ ಅಗತ್ಯಕ್ಕಿಂತಲೂ ಹೆಚ್ಚು ಹಣ ಇರುವ ಕಾರಣ ಹಣದುಬ್ಬರ ಕಾಡುತ್ತಿದ್ದರೆ, ಆರ್.ಬಿ.ಐ ರೇಪೋದರ ಹೆಚ್ಚಳ ಮಾಡದೆ, ಬ್ಯಾಂಕುಗಳು ಠೇವಣಿ ಇರಿಸುವ ಹಣದಲ್ಲಿ ಶೇ.50ರಷ್ಟು ಕಡಿಮೆ ಮಾಡುವ ಮೂಲಕ ಹಣದ ಒಳ ಹರಿವು ಹೆಚ್ಚಾಗಿ, ಸಣ್ಣ ಸಣ್ಣ ಸಮುದಾಯಗಳ ಸಹಕಾರಿ ಬ್ಯಾಂಕುಗಳು ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಪೈಪೋಟಿ ನಡೆಸಲಾಗದ ಸ್ಥಿತಿ ತಂದೊಡ್ಡಿದೆ. ಇದು ಸಹಕಾರ ಚಳವಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡಲಿದೆ ಎಂದು ಹೇಳಿದರು.
ಸ್ವಾಮಿ ವಿವೇಕಾನಂದ ಸಹಕಾರ ಸಂಘದ ಅಧ್ಯಕ್ಷ ಪಿ.ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಪಿ.ಮೂರ್ತಿ ಮಾತನಾಡಿದರು. ಸಹಕಾರ ರತ್ನಪ್ರಶಸ್ತಿ ಪಡೆದ ವೀರಶೈವ ಬ್ಯಾಂಕಿನ ಮಲ್ಲಿಕಾರ್ಜುನ್, ಆಡಿಟರ್ ಅಂಜನಪ್ಪ, ಲಕ್ಷ್ಮೀನಾರಾಯಣ್, ಮೆಹಬೂಬ್ ಪಾಷ, ಗುರುಪ್ರಸಾದ್, ಶಿವಕುಮಾರ್ ಅಣ್ಣೇನಹಳ್ಳಿ, ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಬಿ.ಜಿ.ಕೃಷ್ಣಪ್ಪ ಅಭಿನಂದಿಸಲಾಯಿತು.