Saturday, October 19, 2024
Google search engine
Homeಮುಖಪುಟಏಳು ರಾಜ್ಯಗಳಲ್ಲಿ 14 ಮಹಿಳೆಯರ ಮದುವೆಯಾದ ಭೂಪ ಕೊನೆಗೂ ಸಿಕ್ಕಿಬಿದ್ದ

ಏಳು ರಾಜ್ಯಗಳಲ್ಲಿ 14 ಮಹಿಳೆಯರ ಮದುವೆಯಾದ ಭೂಪ ಕೊನೆಗೂ ಸಿಕ್ಕಿಬಿದ್ದ

ದೆಹಲಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದ ತನ್ನ ಕೊನೆಯ ಪತ್ನಿಯೊಂದಿಗೆ ಒಡಿಶಾ ರಾಜಧಾನಿಯಲ್ಲಿ ವಾಸವಾಗಿದ್ದ. ಆದರೆ ಕೊನೆಯ ಪತ್ನಿಗೆ ತನ್ನ ಗಂಡನ ಬಗ್ಗೆ ಅನುಮಾನ ಮೂಡಿ ಮಾಹಿತಿ ಸಂಗ್ರಹಿಸುತ್ತಾ ಹೋದಂತೆ ಹಿಂದೆ ಈತ ವಿವಾಹವಾಗಿ ಮೋಸ ಮಾಡಿರುವುದು ಪತ್ತೆಯಾಗಿದೆ. ಜೊತೆಗೆ ಕೊನೆಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಲವತ್ತೆಂಟು ವರ್ಷಗಳಲ್ಲಿ ಏಳು ರಾಜ್ಯಗಳಲ್ಲಿ 14 ಮಹಿಳೆಯರನ್ನು ಮದುವೆಯಾಗಿದ್ದ ಲಿಂಗಾಯತ ಸಮುದಾಯದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಒಡಿಶಾದ ಕೇಂದ್ರಪಾರ ಜಿಲ್ಲೆಯ ಷಟ್ಕುರಾ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮಹಿಳೆಯಿಂದ ಹಣವನ್ನು ಪಡೆದು ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಆದರೆ ಪೊಲೀಸರ ಆರೋಪವನ್ನು ಆರೋಪಿ ನಿರಾಕರಿಸಿದ್ದಾನೆ

ಆರೋಪಿಯು 1982ರಲ್ಲಿ ಮೊದಲ ಬಾರಿಗೆ ಮದುವೆಯಾಗಿ 2002ರಲ್ಲಿ ಎರಡನೇ ಮಹಿಳೆಯನ್ನು ಮದುವೆಯಾಗಿದ್ದನು. ಈ ಇಬ್ಬರು ಪತ್ನಿಯರಿಗೆ ಒಟ್ಟು ಐದು ಮಕ್ಕಳ ತಂದೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

2002 ಮತ್ತು 2020ರ ನಡುವೆ ಈತ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಮೂಲಕ ಮಹಿಳೆಯರ ಸ್ನೇಹ ಬೆಳೆಸಿ ಮೊದಲು ಮದುವೆಯಾಗಿದ್ದ ಮಹಿಳೆಯರಿಗೆ ಗೊತ್ತಿಲ್ಲದಂತೆ ಭೂಪ ಮದುವೆಯಾಗುತ್ತಿದ್ದ ಎಂದು ಪೊಲೀಸ್ ಉಪ ಆಯುಕ್ತ ಉಮಾಶಂಕರ್ ದಾಸ್ ಹೇಳಿಕೆಯನ್ನ ಉಲ್ಲೇಖಿಸಿ ಎನ್.ಡಿ.ಟಿವಿ ವರದಿ ಮಾಡಿದೆ.

ದೆಹಲಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದ ತನ್ನ ಕೊನೆಯ ಪತ್ನಿಯೊಂದಿಗೆ ಒಡಿಶಾ ರಾಜಧಾನಿಯಲ್ಲಿ ವಾಸವಾಗಿದ್ದ. ಆದರೆ ಕೊನೆಯ ಪತ್ನಿಗೆ ತನ್ನ ಗಂಡನ ಬಗ್ಗೆ ಅನುಮಾನ ಮೂಡಿ ಮಾಹಿತಿ ಸಂಗ್ರಹಿಸುತ್ತಾ ಹೋದಂತೆ ಹಿಂದೆ ಈತ ವಿವಾಹವಾಗಿ ಮೋಸ ಮಾಡಿರುವುದು ಪತ್ತೆಯಾಗಿದೆ. ಜೊತೆಗೆ ಕೊನೆಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಡಿಗೆ ಮನೆಯಲ್ಲಿದ್ದ ಆತನನ್ನು ಬಂಧಿಸಲಾಗಿದೆ. ಆರೋಪಿಯ ಪ್ರಕಾರ ಮಧ್ಯವಯಸ್ಕ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮದುವೆ ಮಾಡಿಕೊಳ್ಳುತ್ತಿದ್ದ. ಹೆಚ್ಚಾಗಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ಗಳಲ್ಲಿ ವಿಚ್ಛೇದಿತರು, ಒಂಟಿ ಮಹಿಳೆಯರನ್ನು ವಿವಾಹವಾಗಿ ಹಣ ಪಡೆದು ಪರಾರಿಯಾಗುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿ, ಪಂಜಾಬ್, ಅಸ್ಸಾಂ, ಜಾರ್ಖಂಡ್ ಮತ್ತು ಒಡಿಶಾ ಸೇರಿದಂತೆ ಏಳು ರಾಜ್ಯಗಳಲ್ಲಿ ಮದುವೆಯಾಗಿ 14 ಮಂದಿ ಮಹಿಳೆಯರಿಗೆ ವಂಚಿಸಿದ್ದಾನೆ. ಮೊದಲ ಇಬ್ಬರು ಪತ್ನಿಯರು ಒಡಿಶಾದವರು ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular