Saturday, October 19, 2024
Google search engine
Homeಮುಖಪುಟಹಿಜಾಬ್ ಪ್ರಕರಣ ನಾಳೆಗೆ ವಿಚಾರಣೆ ಮುಂದೂಡಿಕೆ

ಹಿಜಾಬ್ ಪ್ರಕರಣ ನಾಳೆಗೆ ವಿಚಾರಣೆ ಮುಂದೂಡಿಕೆ

ಈ ಪ್ರಕರಣವು ಸಮವಸ್ತ್ರ ಬಗ್ಗೆ ಅಲ್ಲ, ನಮ್ಮ ಸಂವಿಧಾನವು ಸಕಾರಾತ್ಮಕ ಜಾತ್ಯತೀತತೆಯನ್ನು ಅನುಸರಿಸುತ್ತದೆ. ಟರ್ಕಿಯ ಸೆಕ್ಯುಲರಿಸಂನಂತೆ ಅಲ್ಲ. ಅದು ನಕಾರಾತ್ಮಕ ಸೆಕ್ಯುಲರಿಸಂ ಎಂದು ವಾದ ಮಂಡಿಸಿದರು.

ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರಕ್ಕೆ ಮುಂದೂಡಿದೆ.

ಕೇಂದ್ರೀಯ ವಿದ್ಯಾಲಯಗಳು ಸಹ ತಮ್ಮ ಶಾಲಾ ಸಮವಸ್ತ್ರಕ್ಕೆ ಹೊಂದಿಕೆಯಾಗುವ ಬಣ್ಣಗಳಲ್ಲಿ ತಲೆ ಸ್ಕಾರ್ಪ್ ಧರಿಸಲು ಅನುಮತಿ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ದೇವದತ್ ಕಾಮತ್ ಹಾಜರಾಗಿ, ದಕ್ಷಿಣ ಭಾರತದಲ್ಲಿ ಬೇರು ಬಿಟ್ಟಿರುವ ಹಿಂದೂ ಹುಡುಗಿಯರು ಶಾಲೆಯಲ್ಲಿ ಮೂಗುತಿ ಧರಿಸಬಹುದೇ ಎಂಬ ವಿಷಯದ ಕುರಿತು ದಕ್ಷಿಣ ಆಫ್ರಿಕಾ ನ್ಯಾಯಾಲಯದ ತೀರ್ಪುನ್ನು ಉಲ್ಲೇಖಿಸಿದರು.

ಈ ಪ್ರಕರಣವು ಸಮವಸ್ತ್ರ ಬಗ್ಗೆ ಅಲ್ಲ, ನಮ್ಮ ಸಂವಿಧಾನವು ಸಕಾರಾತ್ಮಕ ಜಾತ್ಯತೀತತೆಯನ್ನು ಅನುಸರಿಸುತ್ತದೆ. ಟರ್ಕಿಯ ಸೆಕ್ಯುಲರಿಸಂನಂತೆ ಅಲ್ಲ. ಅದು ನಕಾರಾತ್ಮಕ ಸೆಕ್ಯುಲರಿಸಂ ಎಂದು ವಾದ ಮಂಡಿಸಿದರು.

ನಮ್ಮ ಜಾತ್ಯತೀತತೆಯು ಪ್ರತಿಯೊಬ್ಬರ ಧಾರ್ಮಿಕ ಹಕ್ಕುಗಳನ್ನು ಸಂರಕ್ಷಿಸುವುದನ್ನು ಖಚಿತಪಡಿಸುತ್ತದೆ ಎಂದರು. ಅರ್ಜಿದಾರರ ಪರ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ ಫೆಬ್ರವರಿ 16ರ ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ಮುಂದೂಡಿತು.

ಮುನ್ನೆಚ್ಚರಿಕೆ ಕ್ರಮವಾಗಿ ಉಡುಪಿ ಮತ್ತು ಮಂಗಳೂರಿನಲ್ಲಿ ಶನಿವಾರದವರೆಗೆ ಆರು ದಿನಗಳ ಕಾಲ ಕ್ಯಾಂಪಸ್ ಗಳ ಬಳಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಫೆಬ್ರವರಿ 19ರವರೆಗೆ ಎಲ್ಲಾ ಪ್ರೌಢಶಾಲೆಗಳ 200 ಮೀಟರ್ ಸುತ್ತಳತೆಯಲ್ಲಿ 144 ಸೆಕ್ಷನ್ ಜಾರಿಗಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular