Friday, November 22, 2024
Google search engine
Homeಮುಖಪುಟರಾಜ್ಯದ ಬೊಕ್ಕಸದಿಂದಲೇ ಅತಿವೃಷ್ಟಿ ಪರಿಹಾರ - ಬಿಎಸ್.ವೈ ಸಲಹೆಗೆ ಸಿದ್ದು ಸ್ವಾಗತ

ರಾಜ್ಯದ ಬೊಕ್ಕಸದಿಂದಲೇ ಅತಿವೃಷ್ಟಿ ಪರಿಹಾರ – ಬಿಎಸ್.ವೈ ಸಲಹೆಗೆ ಸಿದ್ದು ಸ್ವಾಗತ

ನಮ್ಮ ಸರ್ಕಾರದ ಅವಧಿಯ ಟೆಂಡರ್ ಪ್ರಕ್ರಿಯೆಗಳನ್ನೂ ಸೇರಿಸಿ ಕಳೆದ ಎಂಟೂವರೆ ವರ್ಷಗಳಲ್ಲಿ ನಡೆದಿರುವ ಎಲ್ಲಾ ಸರ್ಕಾರಿ ಕಾಮಗಾರಿಯ ಟೆಂಡರ್ ಗಳ ಬಗ್ಗೆ ಸೂಕ್ತ, ಪಾರದರ್ಶಕ ತನಿಖೆಯಾಗಲಿ. ತನಿಖೆಯನ್ನು ನ್ಯಾಯಮೂರ್ತಿಗಳು ಮಾಡಿದರೂ ಸರಿ, ಸದನ ಸಮಿತಿ ಮಾಡಿದರೂ ಸರಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರ ಕೇಂದ್ರದ ಪರಿಹಾರ ಹಣಕ್ಕಾಗಿ ಕಾಯದೆ, ರಾಜ್ಯದ ಬೊಕ್ಕಸದಿಂದ ಕೂಡಲೇ ಅತಿವೃಷ್ಟಿ ಪರಿಹಾರಧನ ವಿತರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಲಹೆ ನೀಡಿದ್ದು ಇದನ್ನು ಸ್ವಾಗತಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

2019 ರಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರದ ಹಣ ನೀಡಿಲ್ಲ. ಅದಾದ ಮೇಲೆ ನಾಲ್ಕೈದು ಬಾರಿ ಪ್ರವಾಹ ಬಂದಿದೆ. ಜನ ಈ ಸರ್ಕಾರವನ್ನು ಬಿಟ್ ಕಾಯಿನ್ ಸರ್ಕಾರ, 40% ಕಮಿಷನ್ ಸರ್ಕಾರ ಎಂದು ಕರೆಯುತ್ತಿದ್ದಾರೆ. ಬಿಜೆಪಿ ಕರ್ನಾಟಕ ಸರ್ಕಾರ ಭ್ರಷ್ಟಾಚಾರದ ಉತ್ತುಂಗ ತಲುಪಿದೆ ಎಂದು ಆರೋಪಿಸಿದ್ದಾರೆ.

ರಾಜ್ಯ ಗುತ್ತಿದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಪತ್ರದಲ್ಲಿ ಬಿಜೆಪಿ ಕರ್ನಾಟಕ ಸರ್ಕಾರವನ್ನು ಮಾತ್ರ ಉಲ್ಲೇಖಿಸಿ, 40% ಕಮಿಷನ್ ಆರೋಪ ಮಾಡಿದಾರೆಯೇ ವಿನಃ ನಮ್ಮ ಕಾಂಗ್ರೆಸ್ ಸರ್ಕಾರವನ್ನಲ್ಲ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರದ ಅವಧಿಯ ಟೆಂಡರ್ ಪ್ರಕ್ರಿಯೆಗಳನ್ನೂ ಸೇರಿಸಿ ಕಳೆದ ಎಂಟೂವರೆ ವರ್ಷಗಳಲ್ಲಿ ನಡೆದಿರುವ ಎಲ್ಲಾ ಸರ್ಕಾರಿ ಕಾಮಗಾರಿಯ ಟೆಂಡರ್ ಗಳ ಬಗ್ಗೆ ಸೂಕ್ತ, ಪಾರದರ್ಶಕ ತನಿಖೆಯಾಗಲಿ. ತನಿಖೆಯನ್ನು ನ್ಯಾಯಮೂರ್ತಿಗಳು ಮಾಡಿದರೂ ಸರಿ, ಸದನ ಸಮಿತಿ ಮಾಡಿದರೂ ಸರಿ ಎಂದು ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular