Friday, September 20, 2024
Google search engine
Homeಮುಖಪುಟಮೆಕ್ಸಿಕೋದಲ್ಲಿ ಟ್ರಕ್ ಪಲ್ಟಿ - 49 ವಲಸಿಗರ ಸಾವು

ಮೆಕ್ಸಿಕೋದಲ್ಲಿ ಟ್ರಕ್ ಪಲ್ಟಿ – 49 ವಲಸಿಗರ ಸಾವು

ಅಪಘಾತದಲ್ಲಿ 49 ಸಾವನ್ನಪ್ಪಿದ್ದು, 58 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಲೂಯಿಸ್ ಮ್ಯಾನುಯೆಲ್ ಗಾರ್ಸಿಯಾ ತಿಳಿಸಿದ್ದಾರೆ.

ದಕ್ಷಿಣ ಮೆಕ್ಸಿಕೋದಲ್ಲಿ ಟ್ರೈಲರ್ ಟ್ರಕ್ ಪಲ್ಟಿಯಾಗಿ ಕನಿಷ್ಠ 49 ಮಂದಿ ವಲಸಿಗರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯ ಅಮೆರಿಕಾದಿಂದ ವಲಸಿಗರನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಟ್ರೈಲರ್ ಗುರುವಾರ ದಕ್ಷಿಣ ಚಿಯಾಪಾಸ್ ರಾಜ್ಯದ ರಾಜಧಾನಿ ಟಕ್ಸ್ಲಾ ಗುಟೈರೆಜ್ ಬಳಿಯ ಹೆದ್ದಾರಿಯಲ್ಲಿ ಉರುಳಿಬಿದ್ದಿದೆ ಎಂದು ಸ್ಥಳೀಯ ಸುದ್ಧಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ದುರಂತದಲ್ಲಿ 58 ಮಂದಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಲೂಯಿಸ್ ಮ್ಯಾನುಯೆಲ್ ಗಾರ್ಸಿಯಾ ತಿಳಿಸಿದ್ದಾರೆ.

ಯಾಂತ್ರಿಕ ವೈಫಲ್ಯದಿಂದಾಗಿ ಟ್ರಕ್ ಪಾದಚಾರಿ ಸೇತುವೆಗೆ ಅಪ್ಪಳಿಸುವ ಮೊದಲು ಡಿವೈಡರ್ ಗೆ ಅಪ್ಪಳಿಸಿತು. ಸರಕು ಕಂಟೇನರ್ ಬೇರ್ಪಡಿಸಲು ಸಾಕಷ್ಟು ಶ್ರಮ ವಹಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular