Friday, September 20, 2024
Google search engine
Homeಮುಖಪುಟಮೊಟ್ಟೆ, ಮಾಂಸ ತಿಂದರೆ ನಿಮಗೆ ಸಮಸ್ಯೆ ಏನು- ಗುಜರಾತ್ ಹೈಕೋರ್ಟ್ ಪ್ರಶ್ನೆ

ಮೊಟ್ಟೆ, ಮಾಂಸ ತಿಂದರೆ ನಿಮಗೆ ಸಮಸ್ಯೆ ಏನು- ಗುಜರಾತ್ ಹೈಕೋರ್ಟ್ ಪ್ರಶ್ನೆ

ಅಧಿಕಾರದಲ್ಲಿರುವ ಪಕ್ಷವು ಜನರನ್ನು ನಿಯಂತ್ರಿಸುತ್ತದೆ. ಮೊಟ್ಟೆಗಳನ್ನು ತಿನ್ನಲು ಬಯಸುವುದಿಲ್ಲ. ಹಾಗಾಗಿ ನಾವು ಅವುಗಳನ್ನು ನಿಲ್ಲಿಸಲು ಬಯಸುತ್ತೇವೆ ಎನ್ನುತ್ತದೆ. ಆಗ ನೀವು ಅವುಗಳನ್ನು ಎತ್ತಿಕೊಂಡು ಹೋಗುತ್ತೀರಾ? ನೀವು ಏಕೆ ಅದನ್ನು ಮಾಡುತ್ತಿದ್ದೀರಿ? ನಿಮ್ಮ ಕಾರ್ಪೋರೇಷನ್ ಆಯುಕ್ತರನ್ನು ಇಲ್ಲಿಗೆ ಬರುವಂತೆ ಹೇಳಿ? ಜನರನ್ನು ಮನಬಂದಂತೆ ನಡೆಸಿಕೊಳ್ಳಬಾರದು ಎಂದು ತಾಕೀತು ಮಾಡಿದರು.

ಏನನ್ನು ತಿನ್ನಬೇಕು, ತಿನ್ನಬಾರದು ಎಂಬುದು ಅವರವರ ಇಷ್ಟಕ್ಕೆ ಬಿಟ್ಟದ್ದು. ತಾವು ಬಯಸಿದ್ದನ್ನು ತಿನ್ನಲು ಜನರಿಗೆ ಅಡ್ಡಿಪಡಿಸಬೇಡಿ ಕೆಲವು ಜನರ ಅಹಂ ಸಂತೃಪ್ತಿಗೊಳಿಸಬೇಡಿ ಎಂದು ಗುಜರಾತ್ ಹೈಕೋರ್ಟ್ ಅಹಮದಾಬಾದ್ ನಗರ ಪಾಲಿಕೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಮಾಂಸಾಹಾರ ಮಾರಾಟಕ್ಕೆ ಕೌನ್ಸಿಲರ್ ಗಳು ಆಕ್ಷೇಪ ವ್ಯಕ್ತಪಡಿಸಿ ಬೀದಿಬದಿ ವ್ಯಾಪಾರಿಗಳ ಗಾಡಿಗಳನ್ನು ವಶಪಡಿಸಿಕೊಂಡಿರುವ ಸಂಬಂಧ 25 ಮಂದಿ ಬೀದಿಬದಿ ವ್ಯಾಪಾರಿಗಳು ಸಲ್ಲಿಸಿದ್ದ ಮನವಿಯನ್ನು ಆಲಿಸಿದ ಗುಜರಾತ್ ಹೈಕೋರ್ಟ್ ಎಎಂಸಿ ಕ್ರಮವನ್ನು ತರಾಟೆಗೆ ತೆಗೆದುಕೊಂಡು ಅರ್ಜಿದಾರರ ಗಾಡಿಗಳನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆದೇಶಿಸಿದೆ.

ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಸರ್ಕಾರಿ ವಕೀಲರನ್ನು ಉದ್ಧೇಶಿಸಿ ಹಲವು ಪ್ರಶ್ನೆಗಳನ್ನು ಕೇಳಿದರು. ನಿಮ್ಮ ಸಮಸ್ಯೆ ಏನು? ನೀವು ಮಾಂಸಾಹಾರ ಇಷ್ಟಪಡುವುದಿಲ್ಲ ಎಂದರೆ ಬಿಟ್ಟುಬಿಡಿ. ನಾನು ಹೊರಗೆ ಏನು ತಿನ್ನುತ್ತೇನೆ ಎಂದು ನೀವು ಹೇಗೆ ನಿರ್ಧರಿಸುತ್ತೀರಿ?

ನಾನು ಮನೆಯ ಹೊರಗೆ ಏನು ತಿನ್ನಬೇಕೆಂದು ನಾಳೆ ನೀವು ನಿರ್ಧರಿಸುತ್ತೀರಿ. ಪಾಲಿಕೆ ಆಯುಕ್ತರಿಗೆ ಪೋನ್ ಮಾಡಿ ಏನು ಮಾಡುತ್ತಿದ್ದೀರಿ ಎಂದು ಕೇಳಿ. ಸಕ್ಕರೆ ಕಾಯಿಲೆ ಬರುವುದು ಎಂಬ ಕಾರಣಕ್ಕೆ ನಾಳೆ ಕಬ್ಬಿನ ರಸವನ್ನು ಸೇವಿಸಬಾರದು ಎಂದು ಹೇಳುತ್ತೀರಿ! ಕಾಫಿ ಆರೋಗ್ಯಕ್ಕೆ ಹಾನಿಕರ ಎಂದರೆ ಅದನ್ನು ನಿಷೇಧಿಸುತ್ತೀರಾ ಎಂದು ಪ್ರಶ್ನಿಸಿದರು.

ಪುಟ್ ಪಾತ್ ಅತಿಕ್ರಮಣವಾಗಿದ್ದರೆ ಅದನ್ನು ತೆರವುಗೊಳಿಸಿ, ಆದರೆ ಜಪ್ತಿ ಮಾಡಬೇಡಿ, ಯಾರಾದರೂ ನಾಳೆ ಬೆಳಗ್ಗೆ ನನ್ನ ಸುತ್ತಲು ಮೊಟ್ಟೆ ತಿನಿಸುಗಳು ಬೇಡವೆನ್ನುತ್ತಾರೆ. ಆಗ ಏನು ಮಾಡುತ್ತೀರಿ ಎಂದು ನ್ಯಾಯಮೂರ್ತಿ ವೈಷ್ಣವ್ ಪ್ರಶ್ನಿಸಿದರು.

ಅಧಿಕಾರದಲ್ಲಿರುವ ಪಕ್ಷವು ಜನರನ್ನು ನಿಯಂತ್ರಿಸುತ್ತದೆ. ಮೊಟ್ಟೆಗಳನ್ನು ತಿನ್ನಲು ಬಯಸುವುದಿಲ್ಲ. ಹಾಗಾಗಿ ನಾವು ಅವುಗಳನ್ನು ನಿಲ್ಲಿಸಲು ಬಯಸುತ್ತೇವೆ ಎನ್ನುತ್ತದೆ. ಆಗ ನೀವು ಅವುಗಳನ್ನು ಎತ್ತಿಕೊಂಡು ಹೋಗುತ್ತೀರಾ? ನೀವು ಏಕೆ ಅದನ್ನು ಮಾಡುತ್ತಿದ್ದೀರಿ? ನಿಮ್ಮ ಕಾರ್ಪೋರೇಷನ್ ಆಯುಕ್ತರನ್ನು ಇಲ್ಲಿಗೆ ಬರುವಂತೆ ಹೇಳಿ? ಜನರನ್ನು ಮನಬಂದಂತೆ ನಡೆಸಿಕೊಳ್ಳಬಾರದು ಎಂದು ತಾಕೀತು ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular