ಮ್ಯಾನ್ಮಾರ್ ನ ವಾಯುವ್ಯ ಭಾಗದ ಸಣ್ಣ ಹಳ್ಳಿಯೊಂದರ ಮೇಲೆ ದಾಳಿ ಮಾಡಿದ ಮ್ಯಾನ್ಮಾರ್ ಸರ್ಕಾರಿ ಪಡೆಗಳು ನಾಗರಿಕರನ್ನು ಸುತ್ತುವರೆದು, ಅವರ ಕೈಗಳನ್ನು ಬಂಧಿಸಿ ನಂತರ ಸಜೀವವಾಗಿ ಸುಟ್ಟುಹಾಕಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಂಗಳವಾರ ಈ ದಾಳಿ ನಡೆದಿದ್ದು ನಂತರ ಈ ಕುರಿತು ವಿಡಿಯೋವೊಂದು ವೈರಲ್ ಆಗಿದೆ. ಅದರಲ್ಲಿ 11 ಮಂದಿ ಸುಟ್ಟ ದೇಹಗಳನ್ನು ತೋರಿಸಲಾಗಿದೆ. ಇವರಲ್ಲಿ ಯುವಕರು ಸೇರಿದ್ದಾರೆ ಎಂದು ಹೇಳಲಾಗಿದೆ.
ಸಾಗಯಿಂಗ್ ಪ್ರದೇಶದ ಡನ್ ತಾವ್ ಗ್ರಾಮದಲ್ಲಿ ಗುಡಿಸಲಿನ ಅವಶೇಷಗಳು ವೃತ್ತಾಕಾರವಾಗಿ ಬಿದ್ದಿದೆ. ಈ ಪ್ರದೇಶ ಉದ್ದೇಶಿತ ನಿರ್ಬಂಧಗಳ ಪಟ್ಟಿಗೆ ಸೇರಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಹ್ಯೂಮನ್ ರೈಟ್ಸ್ ವಾಚ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮವಿ ಮಾಡಿದೆ.
ಇವರು ಹುಡುಗರು ಮತ್ತು ಯುವಕರು ಎಂದು ತಿಳಿದುಬಂದಿದೆ. ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿ ಯುವಕರು ಸಿಕ್ಕಿಬಿದ್ದಿದ್ದಾರೆ ಎಂದು ಗುಂಪಿನ ವಕ್ತಾರ ಮನ್ನಿ ಮೌಂಗ್ ಹೇಳಿದ್ದಾರೆ.
ಈ ಘಟನೆಯು ಸಾಕಷ್ಟು ನಾಚಿಕೆಗೇಡಿನದ್ದಾಗಿದೆ ಮತ್ತು ಇದು ಜನರನ್ನು ಹೆದರಿಸಲು ಸರ್ಕಾರಿ ಪಡೆಗಳಿಂದ ದಾಳಿ ನಡೆದಿದೆ. ಈ ಪ್ರದೇಶದಲ್ಲಿ ಜನರಲ್ಲಿ ಭಯ ಹುಟ್ಟಿಸುವುದು ದಾಳಿಯ ಉದ್ದೇಶವಾಗಿದೆ ಎಂದು ಆರೋಪಿಸಿದ್ದಾರೆ.
ಚಿತ್ರಗಳು ಸ್ಥಳೀಯ ಮ್ಯಾನ್ಮಾರ್ ಮಾಧ್ಯಮವು ಪ್ರಕಟಿಸಿರುವ ವಿವರಣೆಗಳಿಗೆ ಹೊಂದಿಕೆಯಾಗುತ್ತದೆ ಎಂದು ವರದಿಗಳು ತಿಳಿಸಿವೆ.