Friday, November 22, 2024
Google search engine
Homeಮುಖಪುಟಬಿಪಿನ್ ರಾವತ್ ಸಾವಿನ ಕುರಿತು ಜನರಲ್ಲಿ ಅನುಮಾನ - ಸಂಜಯ್ ರಾವತ್

ಬಿಪಿನ್ ರಾವತ್ ಸಾವಿನ ಕುರಿತು ಜನರಲ್ಲಿ ಅನುಮಾನ – ಸಂಜಯ್ ರಾವತ್

ಈ ಅಪಘಾತದಿಂದ ಇಡೀ ದೇಶ ಮತ್ತು ನಾಯಕತ್ವವು ಗೊಂದಲಕ್ಕೀಡಾಗಿದೆ. ಹಾಗಾಗಿ ರಕ್ಷಣಾ ಸಚಿವರು ಅಥವಾ ಪ್ರಧಾನಿ ಎಲ್ಲಾ ಅನುಮಾನಗಳನ್ನು ಹೋಗಲಾಡಿಸಬೇಕು ಎಂದು ರಾವುತ್ ಒತ್ತಾಯಿಸಿದರು.

ಸೇನಾ ಹೆಲಿಕಾಪ್ಟರ್ ಪತನದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸಾವನ್ನಪ್ಪಿರುವುದು ಜನರ ಮನಸ್ಸಿನಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

ಚೀನಾ, ಪಾಕಿಸ್ತಾನದ ವಿರುದ್ಧ ದೇಶದ ಮಿಲಿಟರಿ ಪ್ರತಿಕ್ರಿಯೆಯನ್ನು ರೂಪಿಸುವಲ್ಲಿ ಜನರಲ್ ರಾವತ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ರಾವತ್ ತಿಳಿಸಿದರು.

“ಇಂತಹ ಅಪಘಾತ ಸಂಭವಿಸಿದಾಗ, ಇದು ಜನರ ಮನಸ್ಸಿನಲ್ಲಿ ಅನುಮಾನವನ್ನು ಹುಟ್ಟುಹಾಕುತ್ತದೆ” ಎಂದು ಅವರು ಹೇಳಿದರು.

ಜನರಲ್ ರಾವತ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಎರಡು ಎಂಜಿನ್‌ಗಳಿಂದ ಚಾಲನೆಗೊಳ್ಳುವ ಆಧುನಿಕ ಯಂತ್ರವಾಗಿತ್ತು. “ನಾವು ಸಶಸ್ತ್ರ ಪಡೆಗಳನ್ನು ಆಧುನೀಕರಿಸಿದ್ದೇವೆ ಎಂದು ಹೇಳಿಕೊಳ್ಳುತ್ತೇವೆ. ಇದು ಹೇಗೆ ಸಂಭವಿಸಿತು?” ಎಂದು ಅವರು ಆಶ್ಚರ್ಯಪಟ್ಟರು.

ಈ ಅಪಘಾತದಿಂದ ಇಡೀ ದೇಶ ಮತ್ತು ನಾಯಕತ್ವವು ಗೊಂದಲಕ್ಕೀಡಾಗಿದೆ. ಹಾಗಾಗಿ ರಕ್ಷಣಾ ಸಚಿವರು ಅಥವಾ ಪ್ರಧಾನಿ ಎಲ್ಲಾ ಅನುಮಾನಗಳನ್ನು ಹೋಗಲಾಡಿಸಬೇಕು ಎಂದು ರಾವುತ್ ಒತ್ತಾಯಿಸಿದರು.

ಪುಲ್ವಾಮಾ ದಾಳಿಯ ನಂತರ ಭಾರತ ನಡೆಸಿದ ವೈಮಾನಿಕ ದಾಳಿಯಲ್ಲಿ ಜನರಲ್ ರಾವತ್ ಕೂಡ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶಿವಸೇನೆ ನಾಯಕರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular