Saturday, October 19, 2024
Google search engine
Homeಮುಖಪುಟಟೆನ್ನಿಸ್ ದಂತಕತೆ ಲಿಯಾಂಡರ್ ಪೇಸ್ ಟಿಎಂಸಿ ಸೇರ್ಪಡೆ

ಟೆನ್ನಿಸ್ ದಂತಕತೆ ಲಿಯಾಂಡರ್ ಪೇಸ್ ಟಿಎಂಸಿ ಸೇರ್ಪಡೆ

ಖ್ಯಾತ ಟೆನ್ನಿಸ್ ದಂತಕತೆ ಲಿಯಾಂಡರ್ ಪೇಸ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಗೋವಾದಲ್ಲಿ ಇಂದು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು.

“ಲಿಯಾಂಡ್ ಪೇಸ್ ತೃಣಮೂಲ ಕಾಂಗ್ರೆಸ್ ಸೇರ್ಪಡೆ ಮಾಹಿತಿ ಹಂಚಿಕೊಳ್ಳಲು ಸಂತೋಷವಾಗುತ್ತದೆ. ನನಗೂ ಕೂಡ ವೈಯಕ್ತಿಕವಾಗಿ ಸಂತೋಷವಾಗಿದೆ. ಲಿಯಾಂಡರ್ ಪೇಸ್ ನನ್ನ ಕಿರಿಯ ಸಹೋದರ. ನಾನು ಯುವ ಸಬಲೀಕರಣ ಸಚಿವರಾಗಿದ್ದ ಸಂದರ್ಭದಿಂದಲೂ ಅವರು ನನಗೆ ಗೊತ್ತು. ಅವರು ಅತ್ಯಂತ ಯುವಕರಾಗಿದ್ದಾರೆ” ಎಂದು ಹೇಳಿದ್ದಾರೆ.

ಟಿಎಂಸಿ ಸೇರ್ಪಡೆ ನಂತರ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಲಿಯಾಂಡರ್ ಪೇಸ್, ನಾನು ಬಂಗಾಳದಲ್ಲಿ ಜನಿಸಿದ್ದೇನೆ. ಈಗ ನಾನು ಗೋವಾದಲ್ಲಿ ವಾಸವಿದ್ದೇನೆ. ನಾನು ದೇಶದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇನೆ. ಕೊನೆಗೆ ದೇಶಭಕ್ತನಾಗಿದ್ದೇನೆ. ನಾನು ದೇಶಕ್ಕಾಗಿ ಏನನ್ನಾದರೂ ಮಾಡಬೇಕು ಮತ್ತು ಬದಲಾವಣೆಯನ್ನು ತರಬೇಕು. ಮಮತ ದೃಷ್ಟಿಕೋನ ಭಾರತವನ್ನು ಕಟ್ಟುವುದಾಗಿದೆ ಎಂದು ಹೇಳಿದ್ದಾರೆ.

ಲಿಯಾಂಡರ್ ಪೇಸ್ ತಂದೆ ವೆಸಿ ಹೈಲ್ಸ್ ದಕ್ಷಿಣ ಗೋವಾದ ವೆಲಿ ವಾಸಿಯಾಗಿದ್ದಾರೆ. ಹಾಗಾಗಿ ಲಿಯಾಂಡರ್ ಪೇಸ್ ಟಿಎಂಸಿ ಸೇರ್ಡಪೆ ಪಕ್ಷಕ್ಕೆ ಸಾಕಷ್ಟು ಬಲವನ್ನು ತಂದುಕೊಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲಿಯಾಂಡರ್ ಪೇಸ್ ಪಕ್ಷ ಸೇರ್ಪಡೆಗೂ ಒಂದು ಗಂಟೆ ಮೊದಲು ನಟ ಮತ್ತು ಕಾರ್ಯಕರ್ತ ನಫೀಸಾ ಅಲಿ ಟಿಎಂಸಿ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ “ದೆಹಲಿಯ ದಾದಾಗಿರಿ ತಪ್ಪಿಸಲು ನಾನು ಇಲ್ಲಿಗೆ ಬಂದಿದ್ದೇನೆ. ದೆಹಲಿಯ ದಾದಾಗಿರಿ ನಿಲ್ಲಬೇಕು ಎಂದು ನಾನು ಬಯಸುತ್ತೇನೆ. ಆದರೆ ಕೆಲವರು ನನ್ನನ್ನು ಪ್ರಶ್ನಿಸುತ್ತಾರೆ. ಮಮತ ಬಂಗಾಳದವರು. ಗೋವಾಕ್ಕೆ ಹೇಗೆ ಬರುತ್ತಾರೆ ಎಂದು? ಏಕೆ ಆಗಬಾರದು? ನಾನು ಭಾರತೀಯಳು. ಎಲ್ಲಿಗೆ ಬೇಕಾದರೂ ಹೋಗಬಹುದು” ಎಂದರು.

“ನಾನು ಇಲ್ಲಿಗೆ ಫಿಲ್ಮ್ ಫೆಸ್ಟಿವಲ್ ಉದ್ಘಾಟನೆಗೆ ಬಂದಾಗ ಯಾರೊಬ್ಬರೂ ಈ ಪ್ರಶ್ನೆ ಕೇಳಲಿಲ್ಲ. ಅಭಿವೃದ್ಧಿ ಕೆಲಸಗಳಿಗೆ ಬಂದಾಗಲೂ ಯಾರೂ ಈ ಪ್ರಶ್ನೆ ಕೇಳಲಿಲ್ಲ. ನಾನು ಹಿಂದೂ, ಮುಸ್ಲೀಂ, ಕ್ಯಾಥೋಲಿಕ್ ಎಂದು ನೀವು ಕೇಳುತ್ತೀರಾ? ನಾನು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ನಾನು ಐಕ್ಯತೆಯಲ್ಲಿ ನಂಬಿಕೆ ಹೊಂದಿದ್ದೇನೆ.” ಎಂದರು.

“ಭಾರತ ನನ್ನ ಮಾತೃಭೂಮಿ, ಪಶ್ಚಿಮಬಂಗಾಳ ನನ್ನ ಮಾತೃಭೂಮಿ ಹಾಗೆಯೇ ಗೋವಾ ಕೂಡ ನನ್ನ ಮಾತೃಭೂಮಿ” ಎಂದು ಕಾರ್ಯಕರ್ತರಿಗೆ ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular