Friday, September 20, 2024
Google search engine
Homeರಾಷ್ಟ್ರೀಯಗೌಪ್ಯ ಮಾಹಿತಿ ಸೋರಿಕೆ ಆರೋಪ - ನೌಕಾಪಡೆಯ ಅಧಿಕಾರಿ ಸೇರಿ ಮೂವರ ಬಂಧನ

ಗೌಪ್ಯ ಮಾಹಿತಿ ಸೋರಿಕೆ ಆರೋಪ – ನೌಕಾಪಡೆಯ ಅಧಿಕಾರಿ ಸೇರಿ ಮೂವರ ಬಂಧನ

ನೌಕಾಪಡೆಯ ಕಿಲೋ ಕ್ಲಾಸ್ ಸಬ್ ಮೆರಿನ್ ಉನ್ನತೀಕರಣಕ್ಕೆ ಸಂಬಂಧಿಸಿದ ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದ ಮೇರೆಗೆ ನೌಕಾಪಡೆಯ ಹಾಲಿ ಅಧಿಕಾರಿ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳನ್ನು ಸಿಬಿಐ ಬಂಧಿಸಿದೆ.

ನೌಕಾಪಡೆಯ ಸಬ್ ಮೆರಿನ್ ಬಗೆಗಿನ ಗೌಪ್ಯ ಮಾಹಿತಿ ಸೋರಿಕೆಯ ಪ್ರಕರಣದಲ್ಲಿ ವಿದೇಶಿ ಗುಪ್ತಚರ ಸಂಸ್ಥೆ ಭಾಗಿಯಾಗಿದೆ ಎಂಬ ಆರೋಪವಿದ್ದರೂ ಅದನ್ನು ಯಾರೂ ಖಚಿತಪಡಿಸಿಲ್ಲ.

ಆಡಳಿತಾತ್ಮಕ ಮಾಹಿತಿ ಸೋರಿಕೆ ಆರೋಪದ ಸಂಬಂಧ ತನಿಖೆ ನಡೆಯುತ್ತಿದೆ. ಕೆಲವು ಅನಧಿಕೃತ ವ್ಯಕ್ತಿಗಳು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು ಸರ್ಕಾರದ ಅಧಿಕೃತ ಸಂಸ್ಥೆ ತನಿಖೆ ನಡೆಯುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತೀಯ ನೌಕಾಪಡೆಯ ಸಂಪೂರ್ಣ ಬೆಂಬಲದೊಂದಿಗೆ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ. ಆಂತರಿಕ ವಿಚಾರಣೆಯೂ ಪ್ರಗತಿಯಲ್ಲಿದೆ ಎಂದು ನೌಕಾಪಡೆಯ ಹೇಳಿಕೆ ಸ್ಪಷ್ಟಪಡಿಸಿದೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.

ನೌಕಾಪಡೆಯ ವೈಸ್ ಅಡ್ಮಿರಲ್ ಮತ್ತು ರೀರ್ ಅಡ್ಮಿರಲ್ ನೇತೃತ್ವದಲ್ಲಿ ಗೌಪ್ಯ ಮಾಹಿತಿ ಸೋರಿಕೆ ಬಗ್ಗೆ ತನಿಖೆ ನಡೆಯುತ್ತಿದೆ. ಕಿಲೋ ಕ್ಲಾಸ್ ಸಬ್ ಮೆರಿನ್ ನ ಸ್ವರೂಪ ಮತ್ತು ನಿರ್ಮಾಣದ ಬಗ್ಗೆ ಮಾಹಿತಿ ಸೋರಿಕೆಯಾಗಿದೆ ಎಂದು ವರದಿಯಾಗಿದೆ.

ಭಾರತದಲ್ಲಿ ಈ ಜಲಾಂತರ್ಗಾಮಿ ನೌಕೆಗಳನ್ನು ಸಿಂಧುಘೋಷ್ ವರ್ಗದ ಅಡಿಯಲ್ಲಿ ವರ್ಗೀಕರಿಸಲಾಗಿದೆ. ಇಲ್ಲಿಯವರೆಗೆ ಸರ್ಕಾರವು ಅಂತಹ 10 ಜಲಾಂತರ್ಗಾಮಿ ನೌಕೆಗಳನ್ನು ಸ್ವಾಧೀನಪಡಿಸಿಕೊಂಡಿದೆ. ಇವೆಲ್ಲವೂ ವ್ಯಾಪಕವಾದ ಆಧುನೀಕರಣಗೊಂಡಿವೆ ಎಂದು ಮೂಲಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular