Thursday, October 10, 2024
Google search engine
HomeUncategorizedತುಮುಲ್ ನಲ್ಲಿ ಪ್ರತಿನಿತ್ಯ 9.40ಲಕ್ಷ ಲೀಟರ್ ಹಾಲು ಶೇಖರಣೆ

ತುಮುಲ್ ನಲ್ಲಿ ಪ್ರತಿನಿತ್ಯ 9.40ಲಕ್ಷ ಲೀಟರ್ ಹಾಲು ಶೇಖರಣೆ

ತುಮಕೂರು ಜಿಲ್ಲೆಯಲ್ಲಿ 1351 ಹಾಲು ಉತ್ಪಾದಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿನಿತ್ಯ 9.40 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ ಎಂದು ತುಮಕೂರು ಹಾಲು ಒಕ್ಕೂಟಕದ ಆಡಳಿತಾಧಿಕಾರಿ ಡಾ. ಜಿ. ಉಮೇಶ್ ಹೇಳಿದರು.

ತುಮಕೂರು ಹೊರವಲಯದ ಸಿದ್ದಾರ್ಥ ನಗರದಲ್ಲಿರುವ ಡಾ. ಎಚ್.ಎಂ. ಗಂಗಾಧರಯ್ಯ ಸ್ಮಾರಕ ಭವನದಲ್ಲಿ ನಡೆದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಒಕ್ಕೂಟ ನಿಯಮಿತದ 2023-24ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಜೂನ್ 28 ರಂದು ಜಿಲ್ಲೆಯಲ್ಲಿ 9,80,836 ಲೀಟರ್ ಹಾಲು ಶೇಖರಣೆಯಾಗಿದ್ದು, ಇದು ಸರ್ವಕಾಲಿಗೆ ದಾಖಲೆಯಾಗಿದೆ ಎಂದು ತಿಳಿಸಿದರು.

2023-24ನೇ ಸಾಲಿನಲ್ಲಿ 1053.80 ಕೋಟಿ ರೂ.ಗಳನ್ನು ಹಾಲು ಉತ್ಪಾದಕರುಗಳಿಗೆ ಬಟವಾಡೆ ರೂಪದಲ್ಲಿ ಪಾವತಿಸಲಾಗಿದೆ. ಪ್ರತಿ ಕೆ.ಜಿ. ಹಾಲಿಗೆ ವಾರ್ಷಿಕ ಸರಾಸರಿ 35.20 ರಂತೆ ಹಾಲಿಗೆ ಖರೀದಿ ದರ ನೀಡಲಾಗಿದೆ ಎಂದು ಹೇಳಿದರು.

ತುಮುಲ್ ವ್ಯವಸ್ಥಾಪಕ ನಿರ್ದೇಶ ಜಿ. ಶ್ರೀನಿವಾಸನ್ ಮಾತನಾಡಿ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಕನಸಿನ ಕೂಸಾದ ರೈತರಿಗೆ ಜಿಡ್ಡಿನ ಆಧಾರದ ಮೇಲೆ ಹಣವನ್ನು ಕೊಡುವ ಯೋಜನೆಯನ್ನು ಸಾಕಾರಗೊಳಿಸಲು ರಾಜ್ಯದ 14 ಒಕ್ಕೂಟಗಳ ಪೈಕಿ ತುಮಕೂರು ಹಾಲು ಒಕ್ಕೂಟವು ಮುಂಚೂಣಿಯಲ್ಲಿದೆ. ತಾಂತ್ರಿಕವಾಗಿ ಒಕ್ಕೂಟವು ಸದೃಢಗೊಳ್ಳುತ್ತಿದ್ದು, ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಪರ ಉತ್ಪಾದಕರ ವಿಶ್ವಾಸ ಹೆಚ್ಚಿಸುವ ಹಾಗೂ ಪಾರದರ್ಶಕತೆಗೆ ಪೂರಕವಾಗಿರುವ ಏಕರೂಪ ತಂತ್ರಾಂಶವನ್ನು ಒಕ್ಕೂಟದ ವ್ಯಾಪ್ತಿಯ ಎಎಂಸಿಯು ಘಟಕವಿರುವ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಅಳವಡಿಸಿ ಸಂಘಗಳು ಕಡ್ಡಾಯವಾಗಿ ಎರಡು ಸರತಿಗಳಲ್ಲಿ ಹಾಲಿನ ಪರೀಕ್ಷೆ ಮಾಡಿ ಜಿಡ್ಡಿನಾಧಾರದ ಮೇಲೆ ದರ ನೀಡಲು ಹಾಗೂ ಹಾಲು ಉತ್ಪಾದಕರಿಗೆ ವಾಸ್ತವ ಅವಧಿಯಲ್ಲಿ ಮಾಹಿತಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಒಕ್ಕೂಟದಿಂದ ಸಂಘದ ನಿರ್ವಹಣೆಗೆ ನೀಡುತ್ತಿದ್ದ ವಂತಿಕೆಯನ್ನು ಕಳೆದ ಜನವರಿ 16 ರಿಂದ 50 ಪೈಸೆಯಿಂದ 70 ಪೈಸೆಗೆ ಹೆಚ್ಚಿಸಲಾಗಿದೆ. 2024-25ನೇ ಸಾಲಿನಲ್ಲಿ ವಂತಿಕೆಯನ್ನು ಪುನಃ 20 ಪೈಸೆ ಹಾಗೂ ಎಎಂಸಿಎಸ್ಒ ತಂತ್ರಾಂಶದ ನಿರ್ವಹಣೆಗೆ 10 ಪೈಸೆ ಹೆಚ್ಚಿಸಿ ಒಟ್ಟು 1 ರೂ. ಗಳನ್ನು ಸಂಘದ ನಿರ್ವಹಣೆಗೆ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಹಾಲು ಒಕ್ಕೂಟದ ವತಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಸಾಮಾನ್ಯ ಸಂಘ, ಜಿಲ್ಲಾ ಮಟ್ಟದ ಅತ್ಯುತ್ತಮ ಮಹಿಳಾ ಸಂಘ, ಅತಿ ಹೆಚ್ಚು ಹಾಲು ಶೇಖರಿಸಿದ ತಾಲ್ಲೂಕು, ಅತಿ ಹೆಚ್ಚು ಗುಣಮಟ್ಟದ ಹಾಲು ಶೇಖರಿಸಿದ ತಾಲ್ಲೂಕು, ಅತಿ ಹೆಚ್ಚು ಹಾಲು ಶೇಖರಿಸಿದ ಹಾಲು ಉತ್ಪಾದಕರ ಸಹಕಾರ ಸಂಘ, ಅತಿ ಹೆಚ್ಚು ಗುಣಮಟ್ಟದ ಹಾಲು ಶೇಖರಿಸಿದ ಹಾಲು ಉತ್ಪಾದಕರ ಸಹಕಾರ ಸಂಘ, ತಾಲ್ಲೂಕು ಮಟ್ಟದ ಅತ್ಯುತ್ತಮ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳು, ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಮಹಿಳಾ ಸದಸ್ಯ, ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿದ ಪುರುಷ ಸದಸ್ಯ ಹಾಗೂ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಕ್ಕೂಟದ ಅಧಿಕಾರಿ, ಸಿಬ್ಬಂದಿ ಹಾಗೂ ಸದಸ್ಯರ ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೂ ಎ.ಎಂ.ಸಿ.ಎಸ್ ತಂತ್ರಾAಶವನ್ನು ತಾಲ್ಲೂಕುಗಳಲ್ಲಿ ಸಾಕಾರಗೊಳಿಸಿದ್ದಕ್ಕಾಗಿ ಕ್ಷೇತ್ರ ವಿಸ್ತರಣಾಧಿಕಾರಿಗಳು ಹಾಗೂ ಕೋರ್ ಕಮಿಟಿ ಮುಖ್ಯಸ್ಥರುಗಳಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನಿಸಲಾಯಿತು.

ಸಭೆಯಲ್ಲಿ ಹಾಲು ಒಕ್ಕೂಟದ ವ್ಯವಸ್ಥಾಪಕರುಗಳಾದ ತಿಮ್ಮನಾಯಕ್, ವಿದ್ಯಾನಂದ್, ಗಿರೀಶ್, ರಾಜು, ಚಂದ್ರಶೇಖರ್, ಶ್ರೀನಿವಾಸ್ ಸೇರಿದಂತೆ ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಟಗಳ ಅಧ್ಯಕ್ಷರು, ಸದಸ್ಯರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular