Thursday, October 10, 2024
Google search engine
Homeಜಿಲ್ಲೆವಿಶ್ವ ಸ್ಕೇಟಿಂಗ್ ಚಾಂಪಿಯನ್ ಶಿಫ್ ಗೆ ತುಮಕೂರಿನ ಜಯತೇಷ್ಣ ಆಯ್ಕೆ

ವಿಶ್ವ ಸ್ಕೇಟಿಂಗ್ ಚಾಂಪಿಯನ್ ಶಿಫ್ ಗೆ ತುಮಕೂರಿನ ಜಯತೇಷ್ಣ ಆಯ್ಕೆ

ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಸ್ಕೇಟಿಂಗ್ ಚಾಂಪಿಯನ್ ಶಿಫ್-2024ರಲ್ಲಿ ಭಾಗವಹಿಸಲು ತುಮಕೂರಿನ ಉದಯೋನ್ಮುಖ ಕ್ರೀಡಾ ಪ್ರತಿಭೆ ಜಯತೇಷ್ಣ.ಟಿ.ಜಿ., ಅವರು ಆಯ್ಕೆಯಾಗಿದ್ದಾರೆ.

ಇಟಲಿಯಲ್ಲಿ ಸೆಪ್ಟಂಬರ್ 23, 2024ರವರೆಗೆ ನಡೆಯಲಿರುವ ವಿಶ್ವ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕಲ್ಪತರು ನಾಡು ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿರುವ ಜಯತೇಷ್ಣ.ಟಿ.ಜಿ.ರವರು ಆರ್ಹತೆ ಪಡೆದಿದ್ದು, ಈಗಾಗಲೇ ವರ್ಲ್ಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಟಲಿಗೆ ತೆರಳಿದ್ದಾರೆ.

ಸ್ಕೇಟಿಂಗ್ ತರಬೇತುದಾರರಾದ ಮೋಹನಕುಮಾರ್ ಮತ್ತು ಪಟ್ನಾಕರ್ ಅವರ ಮಾರ್ಗದರ್ಶನದಲ್ಲಿ ಸ್ಕೇಟಿಂಗ್ ಅಭ್ಯಾಸ ಮಾಡುತ್ತಿರುವ ಜಯತೇಷ್ಣ.ಟಿ.ಜಿ, ಅವರು ತಾಹೇರ ಅವರ ಪುತ್ರಿಯಾಗಿದ್ದಾರೆ.

ಈ ಹಿಂದೆ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಪಡೆದಿದ್ದರು. ಆಗಸ್ಟ್ ತಿಂಗಳಲ್ಲಿ ನಡೆದ ರಾಷ್ಟ್ರೀಯ ಸ್ಕೇಟಿಂಗ್ ರೋರಲ್ ಡರ್ಬಿ ಚಾಂಪಿಯನ್ ಶಿಫ್‌ನಲ್ಲಿ ತೋರಿದ ಉತ್ತಮ ಪ್ರದರ್ಶನ ಜಯತೇಷ್ಣ ಅವರನ್ನು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular