Thursday, September 19, 2024
Google search engine
Homeಮುಖಪುಟಕಾಬೂನಲ್ಲಿ ಮುಚ್ಚಿದ ಬಾಲಕಿಯರ ಶಾಲೆಗಳು - ಬೀದಿಗೆ ಇಳಿದ ಮಹಿಳೆಯರ ಪ್ರತಿಭಟನೆ

ಕಾಬೂನಲ್ಲಿ ಮುಚ್ಚಿದ ಬಾಲಕಿಯರ ಶಾಲೆಗಳು – ಬೀದಿಗೆ ಇಳಿದ ಮಹಿಳೆಯರ ಪ್ರತಿಭಟನೆ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಅಸ್ತಿತ್ವಕ್ಕೆ ಬಂದ ಮೇಲೆ ಬಾಲಕಿಯರ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚಿದ್ದು ಇದನ್ನು ಖಂಡಿಸಿ ಕಾಬೂಲ್ ನಲ್ಲಿ ಮಹಿಳೆಯರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದರು.

ತಾಲಿಬಾನ್ ಸರ್ಕಾರ ಆಫ್ಘಾನಿಸ್ತಾನಲ್ಲಿ ಮಹಿಳೆಯರ ವಿರುದ್ಧ ನಡೆಸುತ್ತಿರುವ ಕ್ರೌರ್ಯ ಮತ್ತು ಕಾಬೂಲ್ ಬೆಳವಣಿಗೆಗಳ ಕುರಿತು ಅಂತಾರಾಷ್ಟ್ರೀಯ ಸಮುದಾಯ ಮೌನ ವಹಿಸಿರುವುದಕ್ಕೆ ಪ್ರತಿಭಟನಾನಿರತ ಮಹಿಳೆಯರು ತರಾಟೆಗೆ ತೆಗೆದುಕೊಂಡರು.

ಕಾಬೂಲ್ ನ ವಿಶ್ವಸಂಸ್ಯೆ ಅಸಿಸ್ಟೆಂಟ್ ಮಿಷನ್ ಮುಂದೆ ಸೇರಿದ ಮಹಿಳೆಯರು ತಾಲಿಬಾನ್ ಆಡಳಿತದ ವಿರುದ್ಧ ಘೋಷಣೆ ಹಾಕಿ ಪ್ರತಿಭಟನೆ ನಡೆಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಮಹಿಳೆಯರ ವಿರುದ್ಧ ಕಾನೂನುಗಳನ್ನು ಬಿಗಿಗೊಳಿಸುತ್ತಿದ್ದರೂ ಅಂತಾರಾಷ್ಟ್ರೀಯ ಸಮುದಾಯ, ಮಾನವಹಕ್ಕುಗಳ ಸಂಘಗಗಳು, ವಿಶ್ವಸಂಸ್ಥೆ ಏನೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆ ಮೌನ ವಹಿಸಿರುವುದು ನಾಚಿಕೆಗೇಡಿನ ಸಂಗತಿ. ಶಿಕ್ಷಣದ ಹಕ್ಕು, ಕೆಲಸದ ಹಕ್ಕು ನಮ್ಮ ಮೂಲಭೂತ ಹಕ್ಕುಗಳು ಎಂದು ಪ್ರತಿಭಟನಾನಿರತ ಮಹಿಳೆಯರು ಕೂಗಿ ಹೇಳಿದರು. ಇತಿಹಾಸದಲ್ಲಿ ಇಂತಹ ದಿನಗಳನ್ನು ಎಂದೂ ಕಂಡಿಲ್ಲ ಎಂದು ದೂರಲಾಗಿದೆ.

ತಾಲಿಬಾನ್ ಆಡಳಿತ ಬಂದ ಮೇಲೆ ಮಹಿಳೆಯರು ಕೆಲಸಕ್ಕೆ ಹೋಗದಂತೆ ನಿರ್ಬಂಧಿಸಲಾಗಿದೆ. ವಿದ್ಯಾರ್ಥಿನಿಯರು ಪ್ರತ್ಯೇಕ ಶಾಲೆಗಳಲ್ಲಿ ವ್ಯಾಸಂಗ ಮಾಡಬೇಕು ಎಂದು ಹೇಳಿದ್ದ ತಾಲಿಬಾನ್ ಇದೀಗ ಬಾಲಕಿಯರ ಶಾಲೆಗಳನ್ನು ಸಂಪೂರ್ಣ ಮುಚ್ಚಿದೆ. ಇದು ಅಲ್ಲಿನ ಮಹಿಳೆಯರ ವಿರೋಧಕ್ಕೆ ಕಾರಣವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular