Saturday, October 19, 2024
Google search engine
Homeಮುಖಪುಟರೈತರ ಹತ್ಯೆ ಪ್ರಕರಣ: ಸಾಕ್ಷಿಗಳಿಗೆ ಭದ್ರತೆ ನೀಡಲು ಯುಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ

ರೈತರ ಹತ್ಯೆ ಪ್ರಕರಣ: ಸಾಕ್ಷಿಗಳಿಗೆ ಭದ್ರತೆ ನೀಡಲು ಯುಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ

ಅಕ್ಟೋಬರ್ 3ರಂದು ನಡೆದ ಲಖಿಂಪುರ್ ಖೇರಿ ರೈತರ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳಾಗಿರುವವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಹೇಳಿದೆ.

ಲಖಿಪುರ್ ಖೇರಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಹತ್ಯಾ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಸಾಕ್ಷಿಗಳಿಗೆ ಭದ್ರತೆ ನೀಡಬೇಕು ಎಂದು ಸೂಚಿಸಿದೆ.

ರೈತರ ಹತ್ಯೆ ಪ್ರಕರಣದಲ್ಲಿ ಮತ್ತಷ್ಟು ಸಾಕ್ಷಿಗಳನ್ನು ಪತ್ತೆಮಾಡಲು ವಿಧಿವಿಜ್ಞಾನ ಪ್ರಯೋಗಾಲಯ ಡಿಜಿಟಲ್ ಡೇಟಾ ಪರಿಶೀಲನೆ ಪ್ರಕ್ರಿಯೆ ಚುರುಕುಗೊಳಿಸಬೇಕು. ವಿಡಿಯೋದಲ್ಲಿರುವ ಸಾಕ್ಷಿಗಳನ್ನು ಪತ್ತೆಹಚ್ಚಿದ ಮೇಲೆ ಪೊಲೀಸರು ಸಾಕ್ಷಿಗಳ ಹೇಳಿಕೆಯನ್ನು ಕೂಡಲೇ ದಾಖಲಿಸಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಹೇಳಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪ್ರಕರಣದ ಪ್ರಮುಖ ಆರೋಪಿ ಅಶಿಶ್ ಮಿಶ್ರಾ ಪರ ವಕೀಲ ಹರೀಶ್ ಸಾಳ್ವೆ, “68 ಸಾಕ್ಷಿಗಳಲ್ಲಿ 30 ಸಾಕ್ಷಿಗಳು ಮ್ಯಾಜಿಸ್ಟ್ರೇಟ್ ಮುಂದೆ ಸಿಆರ್.ಪಿ.ಸಿ ಸೆಕ್ಷನ್ 164ರಡಿ ಹೇಳಿಕೆ ನೀಡಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು 23 ಮಂದಿ ಇದ್ದು ಅವರ ಹೇಳಿಕೆ ಪಡೆದಿಲ್ಲ” ಎಂದು ನ್ಯಾಯಾಲಯದ ಗಮನ ಸೆಳೆದರು.

“ನಿಮ್ಮ ಪ್ರಕರಣ ಅಥವಾ ಯಾವುದೇ ಪ್ರಕರಣದಲ್ಲಿ ನೂರಾರು ರೈತರು ರ್ಯಾಲಿ ನಡೆಸುವ ವೇಳೆ ಕೇವಲ 23 ಮಂದಿ ಪ್ರತ್ಯಕ್ಷ ಸಾಕ್ಷಿಗಳಾ” ಎಂದು ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರು ಹರೀಶ್ ಸಾಳ್ವೆ ಅವರನ್ನು ಪ್ರಶ್ನಿಸಿದರು. ಆಗ ಹರೀಶ್ ಸಾಳ್ವೆ “ಈ ಸಾಕ್ಷಿಗಳು ವಾಹನದ ಬಳಿ ಇದ್ದವರು. ಬೇರೆಯವರು ಹೆಚ್ಚು ಮಂದಿ ಇದ್ದರೂ ಅವರು ವಾಹನದಲ್ಲಿದ್ದವರನ್ನು ಗುರುತಿಸಲು ಸಾಧ್ಯವಿಲ್ಲ” ಎಂದು ಹೇಳಿದರು.

ನ್ಯಾಯಮೂರ್ತಿ ಸೂರ್ಯಕಾಂತ್ “4-5 ಸಾವಿರ ಮಂದಿ ರೈತರು ಸ್ಥಳೀಯರು. ಆದ್ದರಿಂದ ಆರೋಪಿಗಳನ್ನು ಗುರುತಿಸುವುದು ದೊಡ್ಡ ಸಮಸ್ಯೆ ಏನಲ್ಲ” ಎಂದರು.

ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ “ಇಂತಹ ಪ್ರಕರಣದಲ್ಲಿ ಪ್ರತಿಯೊಂದು ಸಾಧ್ಯತೆಯೂ ಇರುತ್ತದೆ” ಎಂದು ಹೇಳಿದರು.

“ಇನ್ನುಳಿದ ಸಾಕ್ಷಿಗಳ ಬಗ್ಗೆ ನಿಮ್ಮ ಏಜೆನ್ಸಿಗೆ ಹೇಳಿ. ಈ ಘಟನೆ ಬಗ್ಗೆ ಏನು ಹೇಳುತ್ತಾರೆ. ಸಾಮಾನ್ಯ ಸಾಕ್ಷಿಗಳ ಹೇಳಿಕೆಗಿಂತ ಪ್ರತ್ಯಕ್ಷ ಸಾಕ್ಷಿಗಳ ಸಾಕ್ಷ್ಯ ಲಭ್ಯವಿದ್ದರೆ, ಅದಕ್ಕೆ ತುಂಬಾ ಮಹತ್ವ ಇರುತ್ತದೆ. ಇದನ್ನು ನೀವು ಗ್ರಹಿಸಿದ್ದೀರ” ಎಂದು ಸಿಐಜೆ ಎನ್.ವಿ.ರಮಣ ಅವರು ವಕೀಲ ಹರೀಶ್ ಸಾಳ್ವೆ ಅವರಿಗೆ ತಿಳಿಸಿದರು.

ನ್ಯಾಯಮೂರ್ತಿ ಸೂರ್ಯಕಾಂತ್ ಅವರು “ಎರಡು ಕೆಲಸಗಳನ್ನು ಸುಲಭವಾಗಿ ಮಾಡಬಹುದು” ಎಂದು ಹೇಳಿದರು. ಕೆಲ ಸಾಕ್ಷಿಗಳು ಬೇಲಿ ಹಾರುವವರಿರಬಹುದು, ಕೆಲವರು ಅಲ್ಲಿ ಹೋಗಿರಬಹುದು ಮತ್ತು ಅವರಲ್ಲಿ ಯಾರೂ ಗಂಭೀರ ಸಾಕ್ಷಿಯಾಗದೇ ಇರಬಹುದು ಎಂದು ತಿಳಿಸಿದರು. ಅದನ್ನು ನೋಡಿದವನೇ ಗಂಭೀರ ಸಾಕ್ಷಿಯಾಗಿರಬಹುದು ಮತ್ತು ಯಾರು ಮುಂದೆ ಬರುತ್ತಾರೆ ಅವರು ಹೆಚ್ಚಿನ ಸಾಕ್ಷಿ ಹೇಳಿಕೆಗಳನ್ನು ಪಡೆಯುವ ಅಗತ್ಯವಿದೆ ಎಂದು ಸೂಚಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular