Friday, November 22, 2024
Google search engine
Homeಮುಖಪುಟಯುಪಿ ಚುನಾವಣೆ - ಮಹಿಳೆಯರಿಗೆ ಶೇ 40ರಷ್ಟು ಸೀಟು ಮೀಸಲು - ಪ್ರಿಯಾಂಕಗಾಂಧಿ

ಯುಪಿ ಚುನಾವಣೆ – ಮಹಿಳೆಯರಿಗೆ ಶೇ 40ರಷ್ಟು ಸೀಟು ಮೀಸಲು – ಪ್ರಿಯಾಂಕಗಾಂಧಿ

ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡ 40ರಷ್ಟು ಸೀಟುಗಳನ್ನು ಮೀಸಲಿಡಲು ಕಾಂಗ್ರೆಸ್ ತೀರ್ಮಾನಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಹೇಳಿದ್ದಾರೆ.

2022ರ ವಿಧಾನಸಭೆ ಚುನಾವಣೆಯಲ್ಲಿ ಶೇಕಡ 40ರಷ್ಟು ಸೀಟುಗಳನ್ನು ಮಹಿಳೆಯರಿಗೆ ಮೀಸಲಿಡುತ್ತೇವೆ. ಇದು ನಮ್ಮ ಬದ್ದತೆ. ಮಹಿಳೆಯರನ್ನು ರಾಜಕೀಯದಲ್ಲಿ ಸಂಪೂರ್ಣವಾಗಿ ತೊಡಗಿಸುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ.

ಮಹಿಳೆಯರು ರಾಜಕೀಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ರಾಜಕೀಯ ಬದಲಾವಣೆಗೆ ನನ್ನೊಂದಿಗೆ ಹೋರಾಟ ನಡೆಸಬೇಕು. ಹಾಗಾಗಿ ಮಹಿಳೆಯರು ಟಿಕೆಟ್ ಬಯಸಿ ಅರ್ಜಿ ಸಲ್ಲಿಸಲು ನವೆಂಬರ್ 15ರ ವರೆಗೆ ಅವಕಾಶ ನೀಡಿದೆ. ಹೆಚ್ಚಿನ ಮಹಿಳೆಯರು ರಾಜಕೀಯ ಪ್ರವೇಶ ಮಾಡಬೇಕು ಬದಲಾವಣೆ ತರಬೇಕು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮಹಿಳೆಯರಿಗೆ ರಾಜಕೀಯದಲ್ಲಿ ಶೇ.50ರಷ್ಟು ಮೀಸಲಾತಿ ಕಲ್ಪಿಸಲು ಚಿಂತನೆ ನಡೆಸಲಾಗಿದೆ. ಇದರ ಭಾಗ ವಾಗಿ ಶೇ.40ರಷ್ಟು ಸೀಟುಗಳನ್ನು ಉತ್ತರ ಪ್ರದೇಶದ ಚುನಾವಣೆಯಲ್ಲಿ ನೀಡಲು ತೀರ್ಮಾನಿಸಿದೆ. ರಾಜ್ಯದ 403 ಸೀಟುಗಳಲ್ಲಿ ಶೇ.40ರಷ್ಟು ಮೀಸಲಿಟ್ಟರೆ ಮಹಿಳೆಯರಿಗೆ 160 ಟಿಕೆಟ್ ಗಳು ಲಭ್ಯವಾಗುತ್ತವೆ ಎಂದರು.

ಇದು ಆರಂಭ. ಮುಂದಿನ ಚುನಾವಣೆಯಲ್ಲಿ ಇದು ಶೇ.50ಕ್ಕೆ ಹೆಚ್ಚಳವಾಗಬಹುದು. ಇತರೆ ರಾಜ್ಯಗಳಲ್ಲಿ ಈ ಮಾದರಿಯನ್ನು ಅನುಸರಿಸಬೇಕು. ಕಾಂಗ್ರೆಸ್ ನಾಯಕರು ತಮ್ಮ ಪತ್ನಿಯರನ್ನು ಚುನಾವಣೆಗೆ ನಿಲ್ಲಿಸಬಹುದು. ಇದರಲ್ಲಿ ತಪ್ಪೇನು ಕಾಣುವುದಿಲ್ಲ. ಅರ್ಹತೆ ಆಧಾರದ ಮೇಲೆ ಮಹಿಳೆಯರನ್ನು ಆಯ್ಕೆ ಮಾಡಲಾಗುವುದು. ಜೊತೆಗೆ ಮಹಿಳಾ ಸಬಲೀಕರಣವೂ ಆಗಲಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶದಲ್ಲಿ ರಾಜಕೀಯ ಬದಲಾವಣೆ ತರಲು ಮಹಿಳೆಯರು ಒಗ್ಗೂಡಬೇಕು. ರಾಜಕೀಯವನ್ನು ಸಾಮಾಜಿಕ ಸೇವೆ ಎಂದು ಪರಿಗಣಿಸಬೇಕು. ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಬಹುದು. ನಿಮಗೆ ಬದಲಾವಣೆ ಬೇಕಿದ್ದರೆ, ಕಾಯಬೇಡಿ. ಯಾರೂ ನಿಮ್ಮನ್ನು ರಕ್ಷಿಸುವುದಿಲ್ಲ ಎಂದು ಹೇಳಿದರು.

ಜಾತಿ ಮತ್ತು ದರ್ಮ ರಾಜಕೀಯವನ್ನು ಬದಲಾಯಿಸಿ ಅಭಿವೃದ್ಧಿ ರಾಜಕಾರಣವನ್ನು ತರಬೇಕು. ಮಹಿಳೆಯರು ರಾಜಕೀಯಕ್ಕೆ ಬಂದರೆ ಮಹಿಳಾ ಸಬಲೀಕರಣವೂ ಆಗುತ್ತದೆ. ರಾಜಕೀಯ ಬದಲಾವಣೆಯೂ ಆಗುತ್ತದೆ. ದನಿ ಇಲ್ಲದವರ ದನಿಯಾಗಿ ಕೆಲಸ ಮಾಡಬೇಕು. ಇಲ್ಲಿ ಸೇವೆ ಮಾಡಲು ಅವಕಾಶವಿದೆ ಎಂದು ವಿವರಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular