Saturday, October 19, 2024
Google search engine
Homeಮುಖಪುಟಬಿಹಾರ ಉಪಚುನಾವಣೆ-ಆರ್.ಜೆಡಿ, ಜೆಡಿಯು ನಡುವೆ ತೀವ್ರ ಪೈಪೋಟಿ

ಬಿಹಾರ ಉಪಚುನಾವಣೆ-ಆರ್.ಜೆಡಿ, ಜೆಡಿಯು ನಡುವೆ ತೀವ್ರ ಪೈಪೋಟಿ

ಬಿಹಾರ ಉಪಚುನಾವಣೆಯಲ್ಲಿ ಆರ್.ಜೆಡಿ ಮತ್ತು ಜೆಡಿಯು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮಾಜಿ ಮೈತ್ರಿ ಪಕ್ಷಗಳ ನಡುವೆ ದೊಡ್ಡ ಪರೀಕ್ಷೆ ಎದುರಾಗಿದೆ. ಆರ್.ಜೆಡಿ ನಾಯಕ ತೇಜಸ್ವಿ ಯಾದವ್ ನಡೆಗೆ ಕೆಲವರು ಪಕ್ಷ ತೊರೆದಿದ್ದಾರೆ. ಹಾಗಾಗಿ ಯಾದವ್-ಮುಸ್ಲೀಂ ಸಂಯೋಜನೆ ಯಾವ ರೀತಿ ಕೆಲಸ ಮಾಡಲಿದೆ ಎಂಬುದು ಪ್ರಶ್ನೆಯಾಗಿದೆ.

ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಮಹಾಘಟಬಂಧನ್ ಭಾಗವಾಗಿದೆ. ಆದರೂ ಕಾಂಗ್ರೆಸ್ ಜೊತೆ ಚರ್ಚಿಸದೆ ಆರ್.ಜೆಡಿ ತಾರಾಪುರ ಮತ್ತು ಕುಶೇಶ್ವರ್ ಆಸ್ತಾನ ವಿಧಾನಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಇದರಿಂದ ಬೇಸರಗೊಂಡಿರುವ ಕೆಲ ಮುಖಂಡರು ಅರ್.ಜೆಡಿ ತೊರೆದಿದ್ದಾರೆ.

ಸಲೀಮ್ ಫರ್ವೇಜ್ ಆರ್.ಜೆಡಿ ಮುಖಂಡ. ನಿವಾನ್ ಕ್ಷೇತ್ರದ ದಿವಂಗತ ಮಾಜಿ ಸಂಸದ ಮೊಹಮದ್ ಶಹಬುದ್ದೀನ್ ಆಪ್ತರಲ್ಲಿ ಒಬ್ಬರು. ಆರ್.ಜೆಡಿ ನಡೆಯಿಂದ ಅಸಮಾಧಾನಗೊಂಡಿರುವ ಸಲೀಮ್ ಪರ್ವೇಜ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ. ಆಡಳಿತ ಪಕ್ಷ ಜೆಡಿಯು ಸೇರುವ ಸಿದ್ದತೆ ನಡೆಸಿದ್ದಾರೆ.

ಸಲೀಮ್ ಮಾತನಾಡಿ, ಪಕ್ಷದ ನಾಯಕ ತೇಜಸ್ವಿ ಯಾದವ್ ತೆಗೆದುಕೊಳ್ಳುತ್ತಿರುವ ತೀರ್ಮಾನಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಮಹಾಘಟಬಂಧನ್ ಪಕ್ಷಗಳನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ. ಹಾಗಾಗಿ ನಾನು ರಾಜಿನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.

ದಿವಂಗತ ಮೊಹಮ್ಮದ್ ಶಹಾಬುದ್ದೀನ್ ವಿಷಯದಲ್ಲಿ ತೇಜಸ್ವಿ ಯಾದವ್ ಅವರ ನಡೆ ಅತ್ಯಂತ ದುರದೃಷ್ಟಕರವಾಗಿತ್ತು. ಅವರು 1995 ಮತ್ತು 2000 ರಲ್ಲಿ ಲಾಲೂ ಪ್ರಸಾದ್ ಮತ್ತು ರಾಬ್ರಿ ದೇವಿ ಸರ್ಕಾರಗಳ ರಚನೆಗೆ ಸಾಕಷ್ಟು ಕೆಲಸ ಮಾಡಿದ್ದರು. ಶಹಬುದ್ದೀನ್ ಅನಾರೋಗ್ಯದಿಂದ ದೆಹಲಿಯಲ್ಲಿ ನಿಧನರಾದಾಗ ಯಾರೂ ಅವರನ್ನು ನೋಡಲಿಲ್ಲ ಎಂದು ತಿಳಿಸಿದ್ದಾರೆ.

ಬಿಹಾರದಲ್ಲಿ ಆರ್.ಜೆಡಿ ಪರವಾಗಿ ತನ್ನ ಸಮೀಕರಣವನ್ನು ಉಳಿಸಿಕೊಳ್ಳಲು ಶಹಾಬುದ್ದೀನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಆದರೆ ತೇಜಸ್ವಿ ಯಾದವ್ ಅವರ ಪ್ರಯತ್ನಗಳಿಗೆ ಗೌರವ ನೀಡಲಿಲ್ಲ. ಇದು ನನಗೆ ಮತ್ತು ಇತರ ಮುಸ್ಲೀಂ ನಾಯಕರಿಗೆ ಬೇಸರ ತರಿಸಿದೆ ಎಂದು ಹೇಳಿದ್ದಾರೆ.

ಆರ್.ಜೆಡಿಯ ಮುಸ್ಲೀಂ-ಯಾದವ್ ಸಮೀಕರಣ ರಾಜಕೀಯವು ಜಾತೀಯತೆ ಮತ್ತು ಮುಸ್ಲೀಮರ ತೃಷ್ಟೀಕರಣದ ರಾಜಕಾರಣ ಆಗಿತ್ತು. ಈ ರಾಜಕಾರಣದ ವಿರುದ್ಧ ಲಾಲೂ ಪ್ರಸಾದ್ ಅವರ ಕುಟುಂಬ ದ್ವೇಷ ಸಾಧಿಸಿತು. ಆದರೆ ಈ ರಾಜಕೀಯ ಸಮೀಕರಣ ಈಗ ಬಹಿರಂಗವಾಗಿದೆ. ಬಿಹಾರದಲ್ಲಿ ಎನ್.ಡಿ.ಎ ಸರ್ಕಾರ ಮತ್ತು ಜೆಡಿಯು ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಮಹಾಘಟಬಂಧನ್ ಜೊತೆಯಲ್ಲೇ ಹೋರಾಟ ನಡೆಸುವುದು ಉತ್ತಮವಾಗಿತ್ತು ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular