Friday, October 18, 2024
Google search engine
Homeಮುಖಪುಟಕನ್ಹಯ್ಯ, ಮೇವಾನಿ ಕಾಂಗ್ರೆಸ್ ಸೇರ್ಪಡೆ - ಹೋರಾಟಕ್ಕೆ ಕೈಜೋಡಿಸಲು ಮೇವಾನಿ ಮನವಿ

ಕನ್ಹಯ್ಯ, ಮೇವಾನಿ ಕಾಂಗ್ರೆಸ್ ಸೇರ್ಪಡೆ – ಹೋರಾಟಕ್ಕೆ ಕೈಜೋಡಿಸಲು ಮೇವಾನಿ ಮನವಿ

ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಸಿಪಿಐ ನಾಯಕ ಕನ್ಹಯ್ಯ ಕುಮಾ್ ಮತ್ತು ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಸೆಪ್ಟೆಂಬರ್ 28ರ ಭಗತ್ ಸಿಂಗ್ ಜನ್ಮದಿನದಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ದೆಹಲಿಯಲ್ಲಿ ಎಐಸಿಸಿ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಬ್ಬರು ಯುವ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಜಿಗ್ನೇಶ್ ಮೇವಾನಿ “ನಮ್ಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಪರ ಹೋರಾಟ ಮಾಡಲು ಎಲ್ಲರೂ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

“ನಾನು ದೇಶವನ್ನು ರಕ್ಷಿಸಬೇಕೆಂದರೆ ನನಗೆ ಪಕ್ಷದ ಅವಶ್ಯಕತೆ ಇದೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು. ನಾವು ಹಿಂದೆಂದು ಕಾಣದಂತಹ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ಹಲ್ಲೆ ನಡೆಯುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

“ದೇಶಕ್ಕೆ ಭಗತ್ ಸಿಂಗ ಅವರ ಧೈರ್ಯ ಮತ್ತು ಗಾಂಧೀಜಿ ಅವರ ಅಹಿಂಸೆ ಅವಶ್ಯಕತೆ ಇದೆ ರೈತ, ಕಾರ್ಮಿಕ, ಮಹಿಳೆ, ದಲಿತ, ಆದಿವಾಸಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಪ್ಪಿಸಬೇಕಿದೆ. ಹೊಸ ಆಂದೋಲನ ನಡೆಯಬೇಕಿದೆ. ಅಂತಹ ಒಂದು ಸ್ಥಿತಿಯನ್ನು ನಾವು ಸೃಷ್ಟಿಸಬೇಕಿದೆ. ಎಲ್ಲರೂ ಸೇರಿ ಪ್ರಜಾಪ್ರಭುತ್ವ ಉಳಿಸಬೇಕು”  ಎಂದು ಮೇವಾನಿ ತಿಳಿಸಿದ್ದಾರೆ.

ಕನ್ಹಯ್ಯ ಕುಮಾರ್ ಮಾತನಾಡಿ ” ಕಾಂಗ್ರೆಸ್ ಹಳೆಯ ಪಕ್ಷ. ಪ್ರಜಾಪ್ರಭುತ್ವವಾದಿ ಪಕ್ಷ. ಕಾಂಗ್ರೆಸ್ ಒಂದು ಪಕ್ಷವಲ್ಲ, ಅದೊಂದು ಆದರ್ಶ. ಪ್ರಜಾತಾಂತ್ರಿಕ ಪಕ್ಷವಾದ ಕಾಂಗ್ರೆಸ್ ಉಳಿಯದಿದ್ದರೆ, ಈ ದೇಶಕ್ಕೆ ಉಳಿಗಾಲವಿಲ್ಲ. ದೊಡ್ಡ ಪಕ್ಷವನ್ನು ಉಳಿಸದಿದ್ದರೇ, ಚಿಕ್ಕ ಚಿಕ್ಕ ಪಕ್ಷಗಳು ಉಳಿಯುವುದಿಲ್ಲ” ಎಂದು ಹೇಳಿದ್ದಾರೆ.

ಒಂದು ನಿರ್ದಿಷ್ಟ ಸಿದ್ದಾಂತವು ಭಾರತದ ಮೌಲ್ಯಗಳು, ಸಂಸ್ಕೃತಿ, ಇತಿಹಾಸ ಮತ್ತು ಭವಿಷ್ಯವನ್ನು ಹಾಳುಮಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಅನ್ನು ಉಳಿಸದೆ ದೇಶವನ್ನು ಉಳಿಸಲು ಸಾಧ್ಯವಿಲ್ಲ ಎಂದು ಕೋಟ್ಯಂತರ ಯುವಕರು ಭಾವಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಮಾತನಾಡಿ” ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಟ ಮಾಡಿದ್ದಾರೆ. ಬಡವರ ಪರ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ದೊಡ್ಡ ಮಟ್ಟದಲ್ಲಿ ದನಿ ಎತ್ತಿದ್ದಾರೆ” ಎಂದು ಶ್ಲಾಘಿಸಿದರು.

ಈ ಇಬ್ಬರು ಯುವ ನಾಯಕರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular