ಮೂರು ಜನ ಪಾತ್ರಧಾರಿಗಳು ಮಾಂಸ ತಿಂದರು ಎನ್ನುವ ಗುಮಾನಿಗೆ ಜಾತಿಯಸ್ತರ ಸಿಟ್ಟಿನ ಕಾರಣದಿಂದ ಹಂಚಿಕೊಂಡು ಇದ್ದಂತಹ ನಗರದ ಮನೆಯನ್ನು ತ್ಯಜಿಸಬೇಕಾದ ಪ್ರಸಂಗದ ಕಥೆಯಂತೆ ಕಂಡರು.
ಬೌದ್ಧಿಕ ಯಜಮಾನಿಕೆಯ ರಂಗದ ಸಿದ್ಧ ಮಾದರಿಗಳನ್ನು ಪ್ರಾರಂಭದಲ್ಲಿಯೇ ಮುರಿಯುತ್ತದೆ. ನಿರ್ದೇಶಕರು ಈ ರಂಗಕೃತಿಯ ಮೂಲಕ ಶೋಷಿತರು ಮಾತನಾಡುವ ಆಧುನಿಕ ಸಂಕಥಾನ ರೂಪಕವನ್ನು ಸೃಷ್ಟಿಸಿದ್ದಾರೆ. ಈ ದೇಶ ಪ್ರಮುಖವಾಗಿ ಜಾತಿಯ ದೇಶ… ಮೇಲು ಕೀಳಿನ ಅಹಂವಿಕೆಯ ದೇಶದಲ್ಲಿ ಧರ್ಮಕ್ಕಿಂತ ಜಾತಿಯನ್ನು ಮೀರಿ ನಿಂತದ್ದು ಯಾವುದು ಇಲ್ಲ! ಜಾತಿಯ ಇಲ್ಲಿ ಮುಖ್ಯ ಅಸ್ಮಿತೆ?
ಜೈಲಿನಲ್ಲಿರುವ ಕೈದಿ ಹಾಕಿಕೊಳ್ಳುವ ನಂಬರ್ ನಂತೆ, ಸಾವಿರಾರು ವರ್ಷಗಳಿಂದ ಶೋಷಿತ ಜನಾಂಗದ ನೋವಿನ ಬದುಕಿನ ಕಥನವನ್ನು ತಮ್ಮ ಕೃತಿಗಳ ಮೂಲಕ ಜಾತಿ ಮುನ್ನೆಲೆಗೆ ತಂದಿರುವ ತಮಿಳು ಸಿನಿಮಾದ ಪಾ ರಂಜಿತ್, ವೆಟ್ರಿ ಮಾರನ್, ಮಾರಿ ಸೆಲ್ವರಾಜ್ ರಂತೆ ಕನ್ನಡ ರಂಗಭೂಮಿಯಲ್ಲಿ ನಿರ್ದೇಶಕ ಲಕ್ಷ್ಮಣ್ ತಮ್ಮ ರಂಗಕೃತಿಗಳ ಮೂಲಕ ದಲಿತ ಅಸ್ಮಿತೆಯನ್ನು, ತಳ ಸಮುದಾಯದ ದಲಿತರನ್ನು ಮುನ್ನೆಲೆಗೆ ತಂದಿದ್ದಾರೆ. ಮೇಲ್ವರ್ಗದ ಪ್ರಮುಖ ಸಿನಿಮಾ ನಿರ್ದೇಶಕರುಗಳಾದ ಮಣಿರತ್ನಂ, ಆಡೂರು ಗೋಪಾಲಕೃಷ್ಣ, ಗಿರೀಶ್ ಕಾಸರವಳ್ಳಿ, ಕ್ರೈಂ ವರ್ಮಾ, ತೆಲುಗಿನ ಫೆವ್ಡಲ್ ಡೈರೆಕ್ಟರ್ ಗಳು, ನವ ಬ್ರಾಹ್ಮಣರಂತೆ ಕಾಣುವ ತಮಿಳು ನಿರ್ದೇಶಕ ಶಂಕರ್ ರಂತೆ…. ಕನ್ನಡ ರಂಗಭೂಮಿಯ ಪ್ರಮುಖ ನಿರ್ದೇಶಕರುಗಳು ಉತ್ತಮ ಕಸುಬು ದಾರಿಕೆಯ ಕೃತಿಕಾರರೇ ಹೊರತು ಸಂಕಟಗಳನ್ನು, ಜಾತಿಯ ಕಾರಣಕ್ಕೆ ಆಗುವ ಅವಮಾನಗಳನ್ನು ಮೀರಿ ನಿಂತು ತಮ್ಮ ಜಾತಿಯ ಅಸ್ಮಿತೆ ಮುನ್ನೆಲೆಗೆ ತರುವ ನಿರ್ದೇಶಕರ ಅನಿವಾರ್ಯತೆಯ ಮುಂದೆ, ಹೊಟ್ಟೆ ತುಂಬಿದ ಕಸುಬುದಾರಿಕೆಯ ಮತ್ತು ಉನ್ನತ ವರ್ಗದ ಸಾಂಸ್ಕೃತಿಕ ಯಜಮಾನಿಕೆಯ ಪ್ಯೂಡಲಿಸಂ ನಿರ್ದೇಶಕರುಗಳ…. ಶಾಸ್ತ್ರ, ಸಂಪ್ರದಾಯಗಳು ಕರ್ಮಠತನವನ್ನು ಬೌದ್ಧಿಕವಾಗಿ ಹೇಳುವ ಸನಾತನ ಸಾಂಸ್ಕೃತಿಕ ರಾಜಕಾರಣದ ಬುಡಕ್ಕೆ ನೀರು ತರಿಸುವಲ್ಲಿ ಕಾರ್ಯವನ್ನು ಜಂಗಮ ಕಲೆಕ್ಟೀವ್ಸ್ ಅಂತ ತಂಡಗಳು ಕಾರ್ಯ ಶ್ಲಾಗಿಸಲೇಬೇಕು.
ಆಹಾರ, ಸಂಸ್ಕೃತಿ, ಲಿಂಗ ಬೇಧಗಳನ್ನು ಪ್ರಶ್ನಿಸುತ್ತಾ ಸಾಗಿದ ಕಲಾವಿದರ ಬದುಕಿನ ಹೋರಾಟದ ಹಿನ್ನೆಲೆಗಳು ಹಾಗೆಯೇ ಇವೆ. ಸುಮಾರು 15-18 ವರ್ಷಗಳಿಗಿನ ಹಿಂದೆ ರಂಗಭೂಮಿ ಎಡೆಗೆ ಮುಖ ಮಾಡಿದ ಅನೇಕ ಹೋರಾಟದ ಸಂಗಾತಿಗಳು… ಹಲವು ಚಳುವಳಿಗಳು ಕಾವು ಕಳೆದುಕೊಂಡು ರಾಜಕೀಯ ಪಡಸಾಲೆ ಸೇರಿ ವೈಯಕ್ತಿಕ ಆಗುತ್ತಾ ಹೋಗುವ ಸಂದರ್ಭದಲ್ಲಿ ರಂಗ ಚಳುವಳಿಯ ಅವಶ್ಯಕತೆಯನ್ನು ಅಂದಿನ ಚರ್ಚಿತ ವಿಷಯ ಕಾಲ ನಮ್ಮದಾಗಿತ್ತು. ರಂಗಭೂಮಿಯಲ್ಲಿ ಅನಿವಾರ್ಯವಾಗಿ ಬದ್ಧವಾಗಿ ಉಳಿದು. ಪಕ್ವವಾದಂತೆ ತಮ್ಮ ರಂಗಕೃತಿಗಳ ಮೂಲಕ ಜಾತಿಯ ಅಸ್ಮಿತೆಯನ್ನು ಮಾತ್ರ ಹೇಳಿಕೊಳ್ಳದೆ… ತಮ್ಮ ತಳ ಸಮುದಾಯದ ಕರಾಳ ಇತಿಹಾಸವನ್ನು ತೆರೆದಿಡುತ್ತಿದ್ದಾರೆ ಯುವ ನಿರ್ದೇಶಕರು.
ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿಯನ್ನು ಸ್ಥಾಯಿ ಭಾವದಲ್ಲಿ ನೋಡುತ್ತಾ ಸಂಚಾರಿಯಾಗಿ ಹಾದುಹೋದ ಕೃತಿಗಳು & ಘಟನೆಗಳು :- ವೇಟಿಂಗ್ ಫಾರ್ ದಿ ಗಾಡೊ, ನೂರು ವರ್ಷದ ಏಕಾಂತ, ಜನಪದ, ಜಾತಿಯ ಕೂಪದ ಹಳ್ಳಿಗಳು, ದೂರದರ್ಶನ, ನಾವೆಲ್ಲ ವಿಜೃಂಭಣೆ ಯಿಂದ ಆಚರಿಸುವ ಮಾರಮ್ಮನ ಹಬ್ಬ.
ಮಾದಿಗರು ಮತ್ತು ಬ್ರಾಹ್ಮಣರ ಬಗ್ಗೆ ಇರುವ ಐತಿಹ್ಯದ ಆಡು ಮಾತುಗಳು. ಬ್ರಾಹ್ಮಣರದು ತಿಂದರೆ ಶಾಪ ನಿಶ್ಚಿತ, ಬಣ್ಣದ ಬಗ್ಗೆ ….. ಕರಿ ಬ್ರಾಹ್ಮಣ- ಬಿಳಿ ದಲಿತ ಮಧ್ಯ ಕುಣಿಯುವ ಮಧ್ಯಮ ಶೂದ್ರ & ಬಾಬಾ ಸಾಹೇಬರು ಕೊಟ್ಟ ಸಂವಿಧಾನದ ಶಕ್ತಿ.
ಗುರು ಪರಂಪರೆಯ ಹೆಣ ಭಾರವನ್ನು ಇಳಿಸಿ ತಮ್ಮ ದಾರಿಯನ್ನು ಕಂಡುಕೊಂಡಿರುವ ಜಂಗಮ ತಂಡದ ಕಲಾವಿದರಾದ…. ನಟನೆ ಭಾಷೆಯನ್ನು ಮೀರಿ ಹಲವು ಬಣ್ಣಗಳನ್ನು ನೀಡುವ ಪ್ರತಿಭಾವಂತ ಬಾಬ್ ಮಾರ್ಲಿ ಚಂದ್ರಶೇಖರ್ ಯುರೋಪಿನ ಕಪ್ಪು ವರ್ಣಿಯ ಕಲಾವಿದರು ಸಂಗೀತದ ಮೂಲಕ ಕಂಡುಕೊಂಡ ಸಾಮಾಜಿಕ ಘನತೆಯನ್ನು ನಮ್ಮ ನೆಲದ ನಟರಾಗಿ ಹಾಡುಗಾರರಾಗಿ ಪಡೆಯುವ ದಾರಿಯಲ್ಲಿ ಯಶಸ್ಸು ಸಿಗಲಿ. ಹೋರಾಟದ ಹಿನ್ನೆಲೆಯ ನಟಿ ನಿರ್ದೇಶಕಿ ಶ್ವೇತಾ ರಾಣಿ, ನರಸಪ್ಪರಂತಹ ಲೆಜೆಂಡ್ ಕಲಾವಿದರ ಪ್ರತಿಭಾನ್ವಿತ ಪುತ್ರರಾದ ನಗುಮುಖದ ರಿದಮಸ್ಟ್ ಮತ್ತು ನಟ ಭರತ್ ಮಾಸ್ಟರ್, vln ನರಹಮೂರ್ತಿ ಮೇಷ್ಟ್ರು ಹೀಗೆ ರಂಗದ ಜೀವಾಳವೆ ಗಟ್ಟಿ ನಟರು.
ಬಾಬ್ ಮಾರ್ಲಿ ಫ್ರಂ ಕೋಡಿಹಳ್ಳಿ
ಅಂತಹ ರಂಗಕೃತಿಗಳು ಹಜಾರದ ಜಗಲಿ ಸಂಸ್ಕಾರವಂತ ಯಜಮಾನಿಕೆಗಳು, ಪಂಚಾಯಿತಿಗಳು ಈಗ ಬೀದಿಗೆ ಬಂದು…. ಸಂವಿಧಾನದ ಆಶಯದಂತೆ ದಲಿತರು ಬಂದರು ದಾರಿ ಬಿಡಿ ಎನ್ನುವ ಮೂಲಕ…. ಇದರಿಂದ ಗಾಸಿಕೊಂಡಂತೆ ಕಾಣುವ ಸಾಂಸ್ಕೃತಿಕ ಯಜಮಾನರಿಗೆ…. ಅವರ ಮೇಲಿನ ಅಟ್ರಾಸಿಟಿ ಅಲ್ಲ ಇದು … ನಾಟಕದಲ್ಲಿ ಬರುವ ಕುಲಕಸುಬಿನ ವೃತ್ತವನ್ನು ಮೀರಿ ಕಲೆಯಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗುವ…. ಪರಂಪರೆಯ ರಂಗಭೂಮಿಯ ವೃತ್ತವನ್ನು ಜಿಗಿದು ತಮ್ಮ ತಮ್ಮ ಕಲೆಗೆ ವೇದಿಕೆಗಳನ್ನು ನಿರ್ಮಿಸಿಕೊಳ್ಳುತ್ತಿರುವ ಸ್ನೇಹಿತರಿಗೆ ಸ್ವಾಗತಅರ್ಹ. ಈ ರಂಗ ಚಳುವಳಿ ಅಸಮಾನತೆಯ ವಿರುದ್ಧ ಪ್ರಾರಂಭವಾಗಿರುವ ಪ್ರತಿಭಟನೆಯ ರೂಪ.
ರವಿಶಂಕರ, ಲೇಖಕರು, ಚಳ್ಳಕೆರೆ