ತುಮಕೂರು ಜಿಲ್ಲೆಯು ಬೆಂಗಳೂರಿಗೆ ಕೇವಲ 60 ಕಿಲೋಮೀಟರ್ ದೂರವಿದ್ದು ಬೆಂಗಳೂರು ನಗರಕ್ಕೆ ಪರ್ಯಾಯವಾಗಿ ತುಮಕೂರನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತುಮಕೂರು ಬೆಳೆಯುತ್ತಿರುವ ನಗರವಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ನಗರವನ್ನು ಗ್ರೇಟರ್ ಬೆಂಗಳೂರು ಎಂದು ಕರೆಯಬೇಕಾಗುತ್ತದೆ, ಈ ಕಾರಣಕ್ಕಾಗಿ ಡಿ. 2ರಂದು ತುಮಕೂರು ನಗರದಲ್ಲಿ ನಡೆಯುವ ಸರ್ಕಾರ ಮಟ್ಟದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ತುಮಕೂರು ಜಿಲ್ಲೆಗೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನೀಡುವಂತೆ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ 26 ಜಿಲ್ಲೆಗಳಿಗೆ ತುಮಕೂರು ಜಿಲ್ಲೆ ಹೆಬ್ಬಾಗಿಲಿನಂತೆ ಇದ್ದು ಮಧುಗಿರಿ, ಶಿರಾ, ಕೊರಟಗೆರೆ ಭಾಗದಲ್ಲಿ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳವಿದ್ದು ಹತ್ತು ಹಲವು ವೈಶಿಷ್ಟತೆ ವಿಶೇಷತೆಗಳನ್ನ ಹೊಂದಿರುವ ತುಮಕೂರು ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನೀಡಿದರೆ ಬೆಂಗಳೂರಿಗೆ ಇರುವ ಒತ್ತಡವನ್ನು ತಗ್ಗಿಸುವಂತಹಾಗುತ್ತದೆ ಎಂದರು.
ಮೊದಲಿನಿಂದಲೂ ತುಮಕೂರು ಜಿಲ್ಲೆ ವ್ಯವಹಾರಿಕವಾಗಿ ಇರುವ ಸ್ಥಳವಾಗಿದ್ದು ಇಲ್ಲಿ ಶೈಕ್ಷಣಿಕ ಸಂಸ್ಥೆಗಳು ಲಕ್ಷಾಂತರ ವಿದ್ಯಾರ್ಥಿಗಳು ಅತ್ಯಾಧುನಿಕ ಕೈಗಾರಿಕೆಗಳು ಕಾರ್ಮಿಕರು ಇದ್ದಾರೆ. ಅನೇಕ ಮೊದಲುಗಳಿಗೆ ಕಾರಣವಾಗಿರುವ ತುಮಕೂರನ್ನು ಅಭಿವೃದ್ಧಿಪಡಿಸುವುದು ನನ್ನ ಧ್ಯೇಯವಾಗಿದೆ, ಗುರಿಯಾಗಿದೆ ಎಂದು ತಿಳಿಸಿದರು.