ಪಟಾಕಿ, ಪ್ಲಾಸ್ಟಿಕ್ ಮತ್ತು ಗ್ರಂಧಿಗೆ ಅಂಗಡಿಯ ಗೋದಾಮು ಬೆಂಕಿಗೆ ಸುಟ್ಟು ಭಸ್ಮವಾಗಿರುವ ಘಟನೆ ತುಮಕೂರು ನಗರದ ಮಂಢಿಪೇಟೆಯಲ್ಲಿ ಸಂಭವಿಸಿದೆ.
ತುಮಕೂರು ನಗರದ ಹೃದಯ ಭಾಗ ಮಂಡಿ ಪೇಟೆಯ ಮೆಟ್ರೋ ಮುಂಭಾಗ ಇರುವ ನೇತಾಜಿ ಸ್ಟೋರ್ ನ ಗೋದಾಮುಗೆ ಬೆಂಕಿ ಬಿದ್ದಿದ್ದು, ಪಟಾಕಿ, ಗ್ರಂಧಿಗೆ, ಸ್ಟೇಷನರಿ ಪ್ಲಾಸ್ಟಿಕ್ ವಸ್ತುಗಳು ಸುಟ್ಟು ಹೋಗಿವೆ.
ಬೆಳಗ್ಗೆ 8 ಗಂಟೆಗೆ ಬೆಂಕಿ ಬಿದ್ದಿದ್ದು, ನಿರಂತರವಾಗಿ ಪಟಾಕಿಗಳು ಸ್ಪೋಟಗೊಂಡವು ಎಂದು ಹೇಳಲಾಗಿದೆ. ಗೋದಾಮಿಗೆ ಹೊಂದಿಕೊಂಡಂತೆ ವಾಸದ ಮನೆಗಳಿದ್ದು, ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
ಪಟಾಕಿ ಸ್ಪೋಟದಿಂದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಗೋಡೌನ್ ನಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದೆ.
ಮಂಡಿಪೇಟೆಯಲ್ಲಿ ರಾಮಕೃಷ್ಣ ಎಂಬುವರಿಗೆ ಸೇರಿದ ಪಟಾಕಿ ಮಳಿಗೆಗೆ (ಸೆ.2) ಇಂದು ಮುಂಜಾನ ಪಟಾಕಿ ಮಳಿಗೆ ಬೆಂಕಿ ಬಿದ್ದು ಹೊತ್ತಿ ಉರಿದಿದೆ.
ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಪಟ್ಟರು.
ಗೋಡೌನ್ ನಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಿಸಿಟ್ಟಿದ್ದರು ಎಂದು ಹೇಳಲಾಗಿದ್ದು, ಬೆಂಕಿ ಅವಘಡಕ್ಕೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
ಮಂಡಿಪೇಟೆ ರಸ್ತೆಯಲ್ಲಿ ಎರಡು ಕಡೆ ಬಂದ್ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಬೆಂಕಿ ನಂದಿಸಲು ಯತ್ನ ಮುಂದುವರೆದಿದೆ>