Monday, September 16, 2024
Google search engine
Homeಮುಖಪುಟಕಾಡುಗೊಲ್ಲರನ್ನು ಎಸ್.ಟಿ ಪಟ್ಟಿಗೆ ಸೇರಿಸಿ

ಕಾಡುಗೊಲ್ಲರನ್ನು ಎಸ್.ಟಿ ಪಟ್ಟಿಗೆ ಸೇರಿಸಿ

ಅಪ್ಪಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾಡುಗೊಲ್ಲರು ಇತರೆ ರಾಜ್ಯಗಳಲ್ಲಿ ಇರುವಂತೆ ಕರ್ನಾಟಕದಲ್ಲಿಯೂ ಎಸ್.ಟಿ. ಸಮುದಾಯಕ್ಕೆ ಸೇರಬೇಕಿದೆ ಎಂದು ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಜಿ.ಎಂ.ಸಣ್ಣಮುದ್ದಯ್ಯ ಒತ್ತಾಯಿಸಿದ್ದಾರೆ.

ತುಮಕೂರು ನಗರದ ಬಾಲಭವನದಲ್ಲಿ ಕಾಡುಗೊಲ್ಲರ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ.ಎಂ.ಗುರುಲಿಂಗಯ್ಯ ಮಾತನಾಡಿ, ವಿದೇಶಿ ತಜ್ಞರಲ್ಲದೆ, ನಮ್ಮ ದೇಶದ ಕುಲಶಾಸ್ತ್ರೀಯ ಅಧ್ಯಯನಕಾರರ ಅಭಿಪ್ರಾಯದಂತೆ ಕಾಡುಗೊಲ್ಲ ಜನಾಂಗ ಬುಡಕಟ್ಟು ಸಮುದಾಯವಾಗಿದ್ದು, ಬುಡಕಟ್ಟಾಗದ ಸಮುದಾಯಗಳಲ್ಲಿ ಒಂದಾಗಿದೆ. 2005-06ರಲ್ಲಿ ಕಾಡುಗೊಲ್ಲರ ಸಂಘಟನೆಗಳು ಹುಟ್ಟಿಕೊಂಡ ನಂತರ ಹಲವಾರು ಹೋರಾಟಗಳ ನಂತರ ಕಾಡುಗೊಲ್ಲರು ಸಂಘಟಿತರಾಗಿ, ಹೋರಾಟ ನಡೆಸಿದ ಫಲವಾಗಿ ಕಾಡುಗೊಲ್ಲರ ಕುಲಶಾಸ್ತ್ರೀಯ ಅಧ್ಯಯನ ಆರಂಭವಾಗಿ 2012 ರಲ್ಲಿ ವರದಿ ಸಲ್ಲಿಸಲಾಗಿದೆ. ಅದರೆ ಇದುವರೆಗೂ ಎಸ್ಟಿ ಜಾತಿ ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆದಿಲ್ಲ. ನಮ್ಮ ಎತ್ತಪ್ಪ, ಜುಂಜಪ್ಪ ದೇವರುಗಳ ಪಟ್ಟಿಯಲ್ಲಿ, ಸಮುದಾಯಕ್ಕಾಗಿ ಹೋರಾಡಿದ ಜನರು ದೇವರಾಗಿ ಸೇರ್ಪಡೆಯಾಗಲಿದೆ ಎಂದರು.

ಈ ಸಂದರ್ಭದಲ್ಲಿ ಚಿಕ್ಕಣಸ್ವಾಮಿ ದೇವಾಲಯದ ಆರ್ಚಕ ಪಾಪಣ್ಣ, ತುಮಕೂರು ಜಿಲ್ಲಾ ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ, ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಕೆ.ವೀರೇಶ್, ಕೇಶವಮೂರ್ತಿ, ಶೇಷಕುಮಾರ್, ಶ್ರೀನಿವಾಸ್, ಬಿ.ಕೆ.ಜಯಣ್ಣ, ಕಲ್ಪನ ಗೋವಿಂದರಾಜು, ನೀಲಾಲೋಚನ ಪ್ರಭು, ಭವಿಷ ದಾಸ್, ಕೆಂಕೆರೆ ಮಲ್ಲಿಕಾರ್ಜುನ್, ಬಿಳಿಗೆರೆ ಜಯಣ್ಣ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular