ಹಲವು ವರ್ಷಗಳಿಂದ ದೇಶದ ಹೈಕೋರ್ಟ್ ಗಳಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೊಲಿಜಿಯಂ ಸ್ಪಷ್ಟ ಶಿಫಾರಸುಗಳನ್ನು ಮಾಡಿದ್ದರೂ ಒಕ್ಕೂಟ ಸರ್ಕಾರ ಧಿಕ್ಕರಿಸುತ್ತಲೇ ಬಂದಿರುವ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ದಿ ವೈರ್ ವರದಿ ಮಾಡಿದೆ.
ನ್ಯಾಯಮೂರ್ತಿ ಸಂಜಯ್ ಕೃಷ್ಣಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ವಿಭಾಗೀಯ ಪೀಠ ಸರ್ಕಾರ ವಾಸ್ತತೆಯನ್ನು ಅರ್ಥಮಾಡಿಕೊಳ್ಳಬೇಕು. ವಾಣಿಜ್ಯ ವ್ಯಾಜ್ಯಗಳ ತೀರ್ಪು ಬೇಗ ಹೊರಬರಬೇಕಾದರೆ ಅಗತ್ಯ ಸಂಖ್ಯೆಯ ನ್ಯಾಯಮೂರ್ತಿಗಳ ಅವಶ್ಯಕತೆ ಇದೆ. ಹೈಕೋರ್ಟ್ ಗಳಲ್ಲಿ ಇರುವ ನ್ಯಾಯಾಧೀಶರು ಪ್ರಕರಣಗಳ ವಿಚಾರಣೆ ನಡೆಸಿ ತೀರ್ಪು ನೀಡಬೇಕಿದ್ದು ಪ್ರಮುಖ ಪ್ರಕರಣಗಳ ತೀರ್ಪು ಬೇಗ ನೀಡುವುದು ಕಷ್ಟವಾಗುತ್ತಿದೆ ಎಂದು ವರದಿಯಲ್ಲಿ ತಿಳಿಸಿದೆ.
ದೇಶದ ಹೈಕೋರ್ಟ್ ಗಳಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳ ಭರ್ತಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವ ಒಕ್ಕೂಟ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಸಿಡಿಮಿಡಿ ವ್ಯಕ್ತಪಡಿಸುತ್ತಿರುವುದು ಇದೇ ಮೊದಲೇನೂ ಅಲ್ಲ.
ಹೈಕೋರ್ಟ್ ಗಳಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ನ ಮೂವರು ನ್ಯಾಯಮೂರ್ತಿಗಳ ಪೀಠವು ಏಪ್ರಿಲ್ 20ರಂದು ಒಕ್ಕೂಟ ಸರ್ಕಾರವು ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 18 ವಾರಗಳ ಕಾಲಾವಧಿಯನ್ನು ನಿಗದಿಗೊಳಿಸಿತ್ತು ಎಂದು ದಿ ವೈರ್ ವರದಿಯಲ್ಲಿ ಹೇಳಿದೆ.
ನೇಮಕಾತಿ ಪ್ರಕ್ರಿಯೆಯ ಪ್ರತಿ ಹಂತಕ್ಕೂ ಉನ್ನತ ನ್ಯಾಯಾಲವು ಒಂದು ಕಾಲಮಿತಿಯನ್ನು ತನ್ನ ಆದೇಶದಲ್ಲಿ ಸೂಚಿಸಿದೆ.
- ಹೈಕೋರ್ಟ್ ಕೊಲಿಜಿಯಂ ಒಕ್ಕೂಟ ಸರ್ಕಾರಕ್ಕೆ ಶಿಫಾರಸು ಮಾಡಿದ ದಿನಾಂಕದಿಂದ 4-6 ವಾರಗಳ ಒಳಗೆ ಗುಪ್ತಚರ ಇಲಾಖೆ ತನ್ನ ವರದಿ/ಆಂತರಿಕ ಮಾಹಿತಿಯನ್ನು ಸಲ್ಲಿಸಬೇಕು.
- ಕೇಂದ್ರ ಸರ್ಕಾವು ರಾಜ್ಯದಿಂದ ವೀಕ್ಷಣೆ ಸ್ವೀಕರಿಸಿದ ದಿನಾಂಕ ಮತ್ತು ಗುಪ್ತಚರ ಇಲಾಖೆಯ ವರದಿಯ ದಿನಾಂಕದಿಂದ 8 ರಿಂದ 12 ವಾರದೊಳಗೆ ಕಡತ/ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಗೆ ರವಾನಿಸುವುದು ಅಪೇಕ್ಷಣೀಯವಾಗಿದೆ.
- ನಂತರ ಸರ್ಕಾರ ಮೇಲಿನ ಪರಿಗಣನೆಯ ಮೇಲೆ ತಕ್ಷಣವೇ ನೇಮಕಾತಿಯನ್ನು ಮಾಡಲು ಮುಂದುವರಿಯುತ್ತದೆ ಮತ್ತು ನಿಸ್ಸಂದೇಹವಾಗಿ ಸರ್ಕಾರವು ಸೂಕ್ತ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮೇಲೆ ಯಾವುದೇ ಮೀಸಲಾತಿಯನ್ನು ಹೊಂದಿದ್ದರೆ, ಅದೇ ಅವಧಿಯಲ್ಲಿ ಅದನ್ನು ಸುಪ್ರೀಂಕೋರ್ಟ್ ಕೊಲಿಜಿಯಂಗೆ ಕಳಿಸಬಹುದು. ಮೀಸಲಾತಿಗಾಗಿ ನಿರ್ದಿಷ್ಟ ಕಾರಣಗಳೊಂದಿಗೆ ದಾಖಲಿಸಲಾಗಿದೆ.