ಚಂದ್ರಯಾನ-3ರ ಉಡ್ಡಯನದ ನಂತರ ಅಂತರಿಕ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರವಾಹ, ಚಂಡಮಾರುತ ಸೇರಿದಂತೆ ಪ್ರಾಕೃತಿಕ ವಿಕೋಪದ ವಾತಾವರಣ ಉಂಟಾಗುವ ಏರುಪೇರುಗಳ ಮಾಹಿತಿಯನ್ನು ಪಡೆಯಲಾಗುತ್ತಿದ್ದು, ಹೆಚ್ಚಿನ ಅನಾಹುತ ತಪ್ಪಿಸಲು ಸಹಕಾರಿಯಾಗುತ್ತಿದೆ ಎಂದು ಇಸ್ರೋ ಕೇಂದ್ರದ ಟೆಲಿಮಿಟ್ರಿ, ಟ್ರಾಕೀಂಗ್ ಕಮಾಂಡ್ ನೆಟ್ವರ್ಕನ ನಿರ್ದೇಶಕ ಡಾ. ಬಿ.ಎನ್.ರಾಮಕೃಷ್ಣ ಅಭಿಪ್ರಾಯಪಟ್ಟರು.
ತುಮಕೂರು ನಗರದ ಹೊರವಲಯದ ನೂತನ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರ್ ಕಾಲೇಜಿನ ಕ್ಯಾಂಪಸ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚಂದ್ರಯಾನ 3ರಲ್ಲಿ ಉಡ್ಡಯನದ ನಂತರದಲ್ಲಿ ಇಸ್ರೋ ತನ್ನದೇ ಸಾಧನೆ ಮಾಡಿದೆ. ಅದೇ ರೀತಿ ರಾಕೆಟ್ ನಿರ್ಮಾಣ ಕಾರ್ಯಗಳಲ್ಲಿ ಅನೇಕ ಸಂಶೋಧನೆ ನಡೆಸಿ ಇಡೀ ವಿಶ್ವಕ್ಕೆ ಅವಶ್ಯಕತೆ ಇರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಲಾಗಿದೆ. ಇಸ್ರೋದ ಚಂದ್ರಯಾನ ಯಶಸ್ವಿಯಾಗಿದ್ದನ್ನು ಇಡೀ ವಿಶ್ವ ಗಮನಿಸಿದೆ. ಸ್ಪೇಸ್ ಅಂದರೆ ಅನಂತವೆಂದು ಇದಕ್ಕೆ ಕೊನೆಯಿಲ್ಲ. ಅಂತರಿಕ್ಷ ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳವಣಿಗೆಗಳ ಬಗ್ಗೆ ಅನೇಕ ದೇಶಗಳು ಮಾಹಿತಿ ಪಡೆಯುತ್ತಿವೆ ಎಂದರು.
ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸಂಶೋಧನಾತ್ಮಕ ಅಧ್ಯಯನ ನಡೆಸಿ, ಮುಂದೆ ಸಂಭವಿಸುವ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬಹುದು. ಟ್ರಾಫಿಕ್, ರಸ್ತೆ ಸಂಚಾರದಲ್ಲಿನ ದಟ್ಟಣೆ ಘಟನೆಗಳ ಬಗ್ಗೆ ಮಾಹಿತಿಯನ್ನು ತಕ್ಷಣದಲ್ಲಿ ಪಡೆಯುವ ತಂತ್ರಜ್ಞಾನ ಅವಿಷ್ಕಾರವಾಗುತ್ತಿದ್ದು, ಇದನ್ನು ವಾಹನ ತಯಾರಿಕಾ ಕಂಪನಿಗಳು ಅಳವಡಿಸಬಹುದು. ಪ್ರತಿ ಸಮಸ್ಯೆಗೂ ಒಂದಲ್ಲಾ ಒಂದು ಹೊಸ ರೀತಿಯಲ್ಲಿ ಸಂಶೋಧನಾತ್ಮಕ ಉತ್ತರ ಕಂಡುಕೊಳ್ಳಬಹುದು ಎಂದು ಹೇಳಿದರು.
ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ, ಸಾಹೇ ಕುಲಾಧಿಪತಿ, ಗೃಹಸಚಿವ ಡಾ.ಜಿ.ಪರಮೇಶ್ವರ ಮಾತನಾಡಿ, ಭಾರತ ಎಂದಿಗೂ ಕೂಡಾ ಮುಂಚೂಣಿಯಲ್ಲಿರುವ ರಾಷ್ಟç. ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ಸಾಮಾನ್ಯ ಶಿಕ್ಷಣಕಿಂತ ತಂತ್ರಜ್ಞಾನದ ಶಿಕ್ಷಣದ ಬೇಡಿಕೆ ಹೆಚ್ಚಿದ್ದು, ಈ ಕಾಂತ್ರಿಯಿAದ ಬಾಹ್ಯಾಕಾಶ ಕ್ಷೇತ್ರದಲ್ಲಿ ಆಮೂಲಾಗ್ರ ಬೆಳವಣಿಗೆ ಆಗಿವೆ. ಈ ಸಾಧನೆಯನ್ನು ವಿದೇಶಗಳ ತಿರುಗಿ ನೋಡುವಂತೆ ಮಾಡಿದೆ. ತಂತ್ರಜ್ಞಾನ ಮತ್ತು ಮಾಹಿತಿ ಕ್ಷೇತ್ರದಲ್ಲಿ ಅಮೇರಿಕಾ ಸೇರಿದಂತೆ ಇತರೆ ದೇಶಗಳಿಗೆ ಮೀರಿದ ಬೆಳವಣಿಗೆಯಾಗಿದೆ ಎಂದರು.
ಹೆಚ್ಎಂಎಸ್ ಎಜುಕೇಷನ್ ಸೊಸೈಟಿಯ ಸದಸ್ಯ, ಮಾಜಿ ಶಾಸಕ ರಫೀಕ್ ಅಹಮ್ಮದ್, ಸಾಹೇ ವಿವಿ ಕುಲಪತಿ ಡಾ. ಕೆ.ಬಿ.ಲಿಂಗೇಗೌಡ ಮಾತನಾಡಿದರು. ಡಾ. ಎಂ.ಝಡ್. ಕುರಿಯನ್, ಡಾ.ಗುರುಶಂಕರ್, ನಂಜುಂಡಪ್ಪ, ಕುಲಾಧಿಪತಿ ಸಲಹೆಗಾರ ಡಾ.ವಿವೇಕ್ ವೀರಯ್ಯ, ಪ್ರಾಂಶುಪಾಲರಾದ ಡಾ. ಎಂ.ಎಸ್. ರವಿಪ್ರಕಾಶ್, ಡಾ.ಎಲ್.ಸಂಜೀವ್ ಕುಮಾರ, ಡಾ. ಸಾನಿಕೊಪ್ಪ, ಡಾ.ದಿವಾಕರ್, ಡಾ.ಪ್ರವೀಣ್ ಕುಡುವಾ ಇದ್ದರು.