ಪಕ್ಷದ ಅಭ್ಯರ್ಥಿ ಸುಜಾತಾ ದೊಡ್ಡಮನಿ ಅವರಿಗೆ ಮತನೀಡಿ ಆಶೀರ್ವದಿಸುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬಂದರೆ, ನಿರುದ್ಯೋಗಿ ಯುವಕರಿಗೆ 3 ಸಾವಿರ ರೂಪಾಯಿ ನೀಡುತ್ತೇವೆ. 200 ಯುನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುತ್ತೇವೆ ಎಂದರು.
ಪಠ್ಯ ಪರಿಷ್ಕರಣೆಯ ಹೆಸರಲ್ಲಿ ನಾಡಿನ ಶರಣರು, ದಾರ್ಶನಿಕರು, ಸಾಹಿತಿಗಳು, ಕವಿಗಳ ವಿಚಾರಗಳನ್ನು ತಿರುಚಿ, ಅವರ ಜೀವನ ಸಾಧನೆಗಳನ್ನು ತುಚ್ಛೀಕರಿಸಿ ಅವಮಾನಿಸಿದ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಕಾಲ ಬಂದಿದೆ ಎಂದು ಹೇಳಿದರು.
ಬಹುತ್ವದ ಭಾರತ ಇನ್ನಷ್ಟು ಸದೃಢವಾಗಿ, ನಿಮ್ಮ ಮಕ್ಕಳ ಭವಿಷ್ಯ ಉಜ್ವಲವಾಗಲು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ. ಈ ನೆಲದ ಸಂಸ್ಕೃತಿ, ಸಂವಿಧಾನ ಮತ್ತು ಆದರ್ಶಗಳನ್ನು ಗೌರವಿಸಿ, ಅವುಗಳನ್ನು ಉಳಿಸಿ ಬೆಳೆಸುವ ಬದ್ಧತೆಯಿರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದು ತಿಳಿಸಿದರು.