Tuesday, November 3, 2026
Google search engine
Homeಮುಖಪುಟಹೆಚ್ಚುತ್ತಿರುವ ವಕೀಲರ ಮೇಲಿನ ಹಲ್ಲೆ, ಹತ್ಯೆ ಖಂಡಿಸಿ ತುಮಕೂರಿನಲ್ಲಿ ವಕೀಲರ ಪ್ರತಿಭಟನೆ

ಹೆಚ್ಚುತ್ತಿರುವ ವಕೀಲರ ಮೇಲಿನ ಹಲ್ಲೆ, ಹತ್ಯೆ ಖಂಡಿಸಿ ತುಮಕೂರಿನಲ್ಲಿ ವಕೀಲರ ಪ್ರತಿಭಟನೆ

ಹೆಚ್ಚುತ್ತಿರುವ ವಕೀಲರ ಮೇಲಿನ ಹಲ್ಲೆ, ಹತ್ಯೆ ಪ್ರಕರಣಗಳನ್ನು ತಡೆಯಬೇಕು. ರಾಜ್ಯದಲ್ಲಿ ವಕೀಲರ ಸುರಕ್ಷತೆ ಮತ್ತು ವಕೀಲರ ರಕ್ಷಣಾ ಕಾಯ್ದೆಯನ್ನು ಕಟ್ಟುನಿಟಾಗಿ ಜಾರಿಗೊಳಿಸಿ ಬಲಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ಮಂಗಳವಾರ ತುಮಕೂರು ಜಿಲ್ಲಾ ವಕೀಲರ ಭವನದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು

ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಹೆಚ್.ಕೆಂಪರಾಜಯ್ಯ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ವಕೀಲರ ಮೇಲೆ ನಡೆಯುತ್ತಿರುವ ಸರಣಿ ಭೀಕರ ಹತ್ಯೆ ಮತ್ತು ಮಾರಣಾಂತಿಕ ಹತ್ಯಾಯತ್ನದ ಘಟನೆಗಳು ವಕೀಲರ ಸಮುದಾಯದಲ್ಲಿ ತೀವ್ರ ಆತಂಕ ಹಾಗೂ ಅಭದ್ರತೆಯನ್ನು ಸೃಷ್ಟಿಸಿವೆ. ನ್ಯಾಯವಾದಿಗಳಾದ ವಕೀಲರ ಮೇಲಿನ ಹಲ್ಲೆ ಖಂಡನೀಯ. ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಇತ್ತಿಚೆಗೆ ಬೆಂಗಳೂರಿನ ವೈಟ್ ಫೀಲ್ಡ್ನ ವಕೀಲರಾದ ಮಂಜುನಾಥ್ ಹಾಗೂ ಅನ್ನಪೂಣೇಶ್ವರಿ ನಗರದ ರಾಮ್‌ಅವರ ಕೊಲೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಮಣ ಸಣ್ಣಕ್ಕಿ ಅವರ ಕೊಲೆಯತ್ನದ ಘಟನೆಗಳು ನಡೆದಿವೆ. ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಕೀಲರ ರಕ್ಷಣೆಗೆ ಅಗತ್ಯ ಕಾನೂನು ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್. ಮಹೇಶ್ ಮಾತನಾಡಿ, ವಕೀಲರು ನಿರಾತಂಕವಾಗಿ ಕೆಲಸ ಮಾಡುವ ವಾತಾವರಣ ನಿರ್ಮಾಣ ಮಾಡಬೇಕು. ಭದ್ರತೆಯನ್ನು ಖಚಿತಪಡಿಸಲು ವಕೀಲರ ರಕ್ಷಣಾ ಕಾಯ್ದೆ ಬಲಪಡಿಸಬೇಕು. ವಕೀಲರ ಮೇಲಿನ ದೌರ್ಜನ್ಯ ಮತ್ತು ದಾಳಿಗಳನ್ನು ತಡೆಯಲು ವಕೀಲರ ರಕ್ಷಣಾ ಕಾಯ್ದೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಮತ್ತು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕರ್ತವ್ಯನಿರತ ವಕೀಲರಿಗೆ ಸೂಕ್ತ ಪೊಲೀಸ್ ರಕ್ಷಣೆ ಮತ್ತು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಒದಗಿಸಬೇಕು. ತ್ವರಿತ ನ್ಯಾಯ ಮತ್ತು ಪರಿಹಾರ ಸಂತ್ರಸ್ತ ವಕೀಲರ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರವನ್ನು ಘೋಷಿಸಬೇಕು ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ತನಿಖೆಯನ್ನು ತ್ವರಿತಗೊಳಿಸಬೇಕು. ನ್ಯಾಯದ ಪರವಾಗಿ ಧ್ವನಿ ಎತ್ತುವ ವಕೀಲರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ಆತಂಕಕಾರಿ. ಮುಖ್ಯಮಂತ್ರಿಗಳು, ಕಾನೂನು ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಎಂ.ಎಲ್. ರವಿಗೌಡ, ಜಂಟಿ ಕಾರ್ಯದರ್ಶಿ ಟಿ.ಎಂ.ಧನಂಜಯ, ಖಜಾಂಚಿ ಬಿ.ಎಂ. ಸಿಂಧೂ, ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ಕೆ.ವಿ. ಶ್ರೀನಿವಾಸಮೂರ್ತಿ, ಎಸ್. ಸುರೇಶ್, ಪಿ.ಗೋವಿಂದರಾಜು, ವಿ.ಕೆ. ಶ್ರೀನಿವಾಸಮೂರ್ತಿ, ಸಿ.ಆರ್.ಪದ್ಮಶ್ರೀ, ಜೆ.ಎಸ್. ಸೇವಾಪ್ರಿಯಾ, ವಕೀಲರಾದ ಟಿ.ಎನ್.ಗುರುರಾಜ್, ಡಿಎ ಜಗದೀಶ್, ರೇಖಾ ರಾಜ್, ಎಸ್.ಎಂ. ಶ್ವೇತ, ವಿ.ಆರ್.ವೆಂಕಟೇಶ್, ತಿಪ್ಪೇಸ್ವಾಮಿ, ಈ.ಶಿವಣ್ಣ, ಅರುಣ, ರಘು, ಟಿ.ಎನ್.ಮಧು, ರಂಗಧಾಮಯ್ಯ, ಎ.ರವಿಕಿರಣ್,ಗೌರಿಶಂಕರ್, ರಮೇಶ್, ಗೌರಿಶಂಕರ್, ಕೆ.ಶ್ರೀನಿವಾಸ್ ದ್ವಾರನಕುಂಟೆ, ಶಾಂತಕುಮಾರ್, ಮಮತ, ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular