ಸಾಹಿತ್ಯ ಕ್ಷೇತ್ರದಲ್ಲಿ ಸಾಹಿತಿಗಳಾದ ಡಾ.ಶಿವಣ್ಣ ತಿಮ್ಲಾಪುರ್ ಹಾಗೂ ರಂಗಮ್ಮ ಹೊದೇಕಲ್ ಅವರು ಸೇರಿದಂತೆ ಆರು ಮಂದಿ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ತುಮಕೂರು ಕುವೆಂಪು ನಗರದ ಕೆ.ಎಚ್.ವೆಂಕಟೇಶ್, ಕೊರಟಗೆರೆಯಿಂದ ರುದ್ರಮೂರ್ತಿ ಎಲೆರಾಂಪುರ, ತಿಪಟೂರಿನ ಡಾ.ಪಿ.ಶಂಕರಪ್ಪ, ಪಾವಗಡದ ಹೊ.ಮ.ನಾಗರಾಜು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಿಂದ ಮಧುಗಿರಿಯ ಜಿ.ನಾರಾಯಣರಾಜು, ಚಿಕ್ಕನಾಯಕನಹಳ್ಳಿಯಿಂದ ಸಿ.ಬಿ.ಲೋಕೇಶ್, ತುಮಕೂರಿನಿಂದ ಯೋಗೀಶ್, ಕುಣಿಗಲ್ ನಿಂದ ಸಿದ್ದಲಿಂಗಸ್ವಾಮಿ, ತುಮಕೂರಿನಿಂದ ದಾದಾಪೀರ್ ಎನ್. ದೇವರಾಯ ಪಟ್ಟಣದ ಕುಮಾರಸ್ವಾಮಿ, ಟಿ.ಎಲ್.ನರಸಿಂಹಯ್ಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


