Thursday, October 29, 2026
Google search engine
Homeಮುಖಪುಟತುರುವೇಕೆರೆ ಕರ್ನಾಟಕ ಬ್ಯಾಂಕ್ ವಿರುದ್ಧ ಪ್ರತಿಭಟನೆ

ತುರುವೇಕೆರೆ ಕರ್ನಾಟಕ ಬ್ಯಾಂಕ್ ವಿರುದ್ಧ ಪ್ರತಿಭಟನೆ

ನಿಯಮಬಾಹಿರವಾಗಿ ರೈತನ ಭೂಮಿಯನ್ನು ಬ್ಯಾಂಕ್ ಅಧಿಕಾರಿಗಳು ಮತ್ತು ಬಿಡ್ಡುದಾರ ಸೇರಿ ಕಬಳಿಸಲು ಹೊರಟಿರುವ ಕರ್ನಾಟಕ ಬ್ಯಾಂಕ್ ತುರುವೇಕೆರೆ ಶಾಖೆಯ ಕ್ರಮವನ್ನು ವಿರೋಧಿಸಿ, ರೈತನ ಭೂಮಿಯನ್ನು ವಾಪಸ್ ನೀಡಬೇಕು. ಆನ್‌ಲೆನ್ ಹರಾಜು ರದ್ದು ಮಾಡಬೇಕೆಂದು ಆಗ್ರಹಿಸಿ ನವೆಂಬರ್ 2ರ ಸೋಮವಾರ ರೈತ ಸಂಘದ ವತಿಯಿಂದ ತುರುವೇಕೆರೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, 11.53 ಲಕ್ಷ ಸಾಲದ ಬಾಕಿಗೆ ಸುಮಾರು 4 ಕೋಟಿ ರೂಗಳ ಭೂಮಿಯನ್ನು ಕೇವಲ 34.80 ಲಕ್ಷ ರೂಗಳಿಗೆ ಹರಾಜು ಮಾಡಿ, ಉಳಿದ ಹಣವನ್ನು ರೈತನಿಗೂ ನೀಡದೆ ಮೋಸ ಮಾಡಿರುವ ತುರುವೇಕೆರೆಯ ಕರ್ನಾಟಕ ಬ್ಯಾಂಕ್ ವಿರುದ್ದದ ಪ್ರತಿಭಟನೆಯಲ್ಲಿ ಇಡೀ ರಾಜ್ಯದ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಇ ಹರಾಜು ಹೆಸರಿನಲ್ಲಿ ರೈತರ ಹೆಚ್ಚು ಬೆಲೆ ಬಾಳುವ ಭೂಮಿಯನ್ನು ಕಡಿಮೆಗೆ ಹರಾಜು ಮಾಡಿ, ಕಬಳಿಸುವ ಬ್ಯಾಂಕ್ ಅಧಿಕಾರಿಗಳ ಈ ಹುನ್ನಾರವನ್ನು ತೆಡೆಯುವ ನಿಟ್ಟಿನಲ್ಲಿ ನವೆಂಬರ್ 02 ಈ ಹೋರಾಟ ಮಹತ್ವದ ಹೆಜ್ಜೆಯಾಗಿದೆ ಎಂದರು.

ತುರುವೇಕೆರೆ ಕಸಬಾ ಹೋಬಳಿ ತಾಳೆಕೆರೆ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಚಂದ್ರಯ್ಯ, ಕೃಷ್ಣಪ್ಪ, ನಾಗರಾಜು ಮತ್ತು ಆನಂದ ಎಂಬುವವರಿಗೆ ಸೇರಿದ ಸುಮಾರು 4.14 ಎಕರೆ ಭೂಮಿಯನ್ನು ಅಡಮಾನ ಇಟ್ಟು 2005ರಲ್ಲಿ ಟ್ಯಾಕ್ಟರ್ ಸಾಲ ಮತ್ತು ಬೆಳೆ ಸಾಲ ಪಡೆದಿದ್ದರು. ಹಲವಾರು ಕಂತುಗಳನ್ನು ಕಟ್ಟಿದ್ದು, ಕುಟುಂಬದ ಹಿರಿಯರ ಸಾವಿನಿಂದ ಮತ್ತು ಬರದಿಂದಾಗಿ 2013ರ ನಂತರ ಸಾಲದ ಕಂತು ಕಟ್ಟಲು ಸಾಧ್ಯವಾಗಿಲ್ಲ. ಬ್ಯಾಂಕ್ ಇವರ ವಿರುದ್ದ 11.58 ಲಕ್ಷ ರೂಗಳಿಗೆ ಟ್ರಬ್ಯುನಲ್‌ನಿಂದ ಡಿಕ್ರಿ ಪಡೆದು ಸುಮಾರು 09 ವರ್ಷಗಳ ಕಾಲ ಯಾವ ಕ್ರಮವನ್ನು ಕೈಗೊಳ್ಳದೆ, 2024ರಲ್ಲಿ ಸದರಿ ಭೂಮಿಯನ್ನು ಆನ್‌ಲೈನ್ ಬಿಡ್ ಮೂಲಕ 34.80 ಲಕ್ಷ ರೂಗಳಿಗೆ ಹರಾಜು ಮಾಡಿದೆ.

ಈ ಕುರಿತು ಭೂಮಿಯ ಮಾಲೀಕರಿಗೆ ಮಾಹಿತಿಯನ್ನೇ ನೀಡಿಲ್ಲ. ಬ್ಯಾಂಕಿನ ಸಾಲದ ಹೆಚ್ಚುವರಿ ಹಣಕ್ಕೆ ಹರಾಜು ಮಾಡಿದ ಹಣವನ್ನು ಕುಟುಂಬಕ್ಕೆ ನೀಡಿಲ್ಲ. ರೈತ ಮುಖಂಡರೊAದಿಗೆ ಬ್ಯಾಂಕಿನ ಅಧಿಕಾರಿಗಳು ಮಾಡಿಕೊಂಡ ದ್ವಿಪಕ್ಷಿಯ ಒಪ್ಪಂದದAತೆ 9 ಲಕ್ಷ ರೂಗಳ ಸಾಲ ಕಟ್ಟಲು ಕುಟುಂಬ ಒಪ್ಪಿ, ಐದು ಲಕ್ಷ ರೂಗಳ ಡಿಡಿ ನೀಡಿದ್ದರೂ ಸಹ ಭೂಮಿಯನ್ನು ಹಿಂದಿರುಗಿಸದೆ, ಬಿಡ್ಡುದಾರರಿಗೆ ಸ್ವಾಧೀನ ಮಾಡಲು ಮುಂದಾಗಿದೆ. ಬ್ಯಾಂಕಿನ ಈ ರೈತ ವಿರೋಧಿ ಕೃತ್ಯ ವಿರುದ್ದ ಕ್ರಮ ಕೈಗೊಳ್ಳಬೇಕು. ಲೀಡ್ ಬ್ಯಾಂಕ್ ರೈತರ ಹೋರಾಟಗಾರರ ಜೊತೆಗೆ ಮಾತುಕತೆ ನಡೆಸಿ, ಆಗಿರುವ ಅನ್ಯಾಯವನ್ನು ಸರಿಪಡಿಸಬೇಕೆಂಬುದು ನಮ್ಮಗಳ ಒತ್ತಾಯವಾಗಿದೆ ಎಂದು ಎ.ಗೋವಿಂದರಾಜು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ ಮಾತನಾಡಿ, ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ಶೇ90 ರಷ್ಟು ಬೆಳೆ ನಾಶವಾಗಿ, ಜನ, ಜಾನುವಾರಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಉಂಟಾಗಿದೆ. ಹಾಗಾಗಿ ಸರಕಾರ ಕೂಡಲೇ ರೈತರ ಸಾಲ ಮನ್ನಾಗೆ ಮುಂದಾಗಬೇಕು. ಹಾಗೂ ರೈತರಿಗೆ ಎಕರೆಗೆ ಇಂತಿಷ್ಟು ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ರೈತ ಸಂಘದ ತುಮಕೂರು ತಾಲೂಕು ಅಧ್ಯಕ್ಷ ಚಿಕ್ಕಬೋರೇಗೌಡ. ತುರುವೇಕೆರೆ ತಾಲೂಕು ಅಧ್ಯಕ್ಷ ಶ್ರೀನಿವಾಸಗೌಡ, ಯುವ ಘಟಕ ಮಂಜುನಾಥ್, ಲೋಕೇಶ್, ಸಿದ್ದಗಂಗಣ್ಣ, ಉದಯ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular