Wednesday, November 4, 2026
Google search engine
Homeಮುಖಪುಟಸರ್ಕಾರಿ ಬಸ್ ಪ್ರಯಾಣ ದರ ಏರಿಕೆ-ಬಿಎಂಟಿಸಿ ಟಿಕೆಟ್ ದರವೂ ಹೆಚ್ಚಳ:ತುಮಕೂರು-ಬೆಂಗಳೂರಿಗೆ 100ರೂ ಚಾರ್ಜ್

ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ-ಬಿಎಂಟಿಸಿ ಟಿಕೆಟ್ ದರವೂ ಹೆಚ್ಚಳ:ತುಮಕೂರು-ಬೆಂಗಳೂರಿಗೆ 100ರೂ ಚಾರ್ಜ್

ಸರ್ಕಾರಿ ಬಸ್ ಪ್ರಯಾಣ ದರ ಏರಿಕೆ ಮಾಡಿದ್ದು, ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಕೆಎಸ್ಆರ್ ಟಿಸಿ, ಎನ್ ಡಬ್ಲ್ಯುಕೆಆರ್ ಟಿಸಿ, ಕೆಕೆಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಬುಧವಾರ 12ಗಂಟೆಯಿಂದಲೇ ಪರಿಸ್ಕೃತ ದರ ಜಾರಿಗೊಳ್ಳಲಿದೆ ಎಂದರು.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ನಿಗಮಗಳ ವ್ಯಾಪ್ತಿಯಲ್ಲಿ ಸಂಚರಿಸುವ ಸರ್ಕಾರಿ ಬಸ್ ಪ್ರಯಾಣ ದರವನ್ನು ಸ್ಟೇಜ್ ವೈಸ್ ರೂ.9ರವರೆಗೆ ಹೆಚ್ಚಳ ಮಾಡಲಾಗಿದೆ. ಬಿಎಂಟಿಸಿ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಹೇಳಿದರು.

ಶಕ್ತಿ ಯೋಜನೆಯಿಂದ ಸಾರಿಗೆ ಇಲಾಖೆಗೆ ಯಾವುದೇ ನಷ್ಟವಾಗಿಲ್ಲ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಹಣವನ್ನು ಸರ್ಕಾರ ಭರಿಸುತ್ತಿದೆ. ನಾಲ್ಕು ನಿಗಮಗಳಲ್ಲಿ 1,03,600 ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿಸೆಲ್ ದರ ಹೆಚ್ಚಳವಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

ಅತುಲ್ ತಿವಾರಿ ನೇತೃತ್ವದ ಕಮಿಟಿ ಕಾಲಕಾಲಕ್ಕೆ ಟಿಕೆಟ್ ದರ ಏರಿಸಬೇಕು ಎಂದು ವರದಿ ಕೊಟ್ಟಿದೆ. ಹೀಗಾಗಿ ಟಿಕೆಟ್ ದರ ಹೆಚ್ಚಳ ಮಾಡುವುದಕ್ಕೆ ನಿಗಮಗಳಿಗೆ ಅವಕಾಶ ನೀಡಲಾಗಿದೆ ಕಳೆದ ಹತ್ತು ವರ್ಷಗಳಲ್ಲಿ ಕೇವಲ ಒಂದು ಬಾರಿ ಸಾರಿಗೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗಿದ್ದು. ಬಸ್ ಪ್ರಯಾಣ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದರು.

ಬೆಂಗಳೂರಿನಿಂದ ತುಮಕೂರಿಗೆ 81 ರೂ ಇದ್ದ ಪ್ರಯಾಣ ದರವನ್ನು 100 ರೂಗಳಿಗೆ ಹೆಚ್ಚಿಸಲಾಗಿದೆ. ಮೆಜೆಸ್ಟಿಕ್ ನಿಂದ ನೆಲಮಂಗಲಕ್ಕೆ 35 ರೂಗಳಿದ್ದ ದರವನ್ನು 44 ರೂಗಳಿಗೆ ಏರಿಕೆ ಮಾಡಿದೆ. ವಾಯುವಜ್ರ ಬಸ್ ಪ್ರಯಾಣ ದರವನ್ನು ಕೊನೆಯ ಸ್ಟೇಜ್ ಗೆ 90 ರೂ ಹೆಚ್ಚಿಸಲಾಗಿದೆ.

ಬೆಂಗಳೂರಿನಿಂದ ದೊಡ್ಡಬಳ್ಳಾಪುರಕ್ಕೆ 38 ರೂ ಇದ್ದ ಟಿಕೆಟ್ ದರವನ್ನು 47 ರೂಗಳಿಗೆ ಹೆಚ್ಚಿಸಿದೆ. ಬೆಂಗಳೂರಿನಿಂದ ಆನೇಕಲ್ ಗೆ 38 ರೂ ಇದ್ದ ಟಿಕೆಟ್ ದರ ಇದೀಗ 47ರೂಗೆ ಏರಿಕೆ ಮಾಡಲಾಗಿದೆ.

ಬೆಂಗಳೂರು-ತುಮಕೂರು 81 ರಿಂದ ರೂ. 100

ಬೆಂಗಳೂರು-ಕೋಲಾರ 81 ರಿಂದ ರೂ.100

ಬೆಂಗಳೂರು-ಮಂಡ್ಯ 110 ರಿಂದ ರೂ. 136

ಬೆಂಗಳೂರು-ಮೈಸೂರು 160 ರಿಂದ ರೂ.197

ಬೆಂಗಳೂರು-ಹಾಸನ 219 ರಿಂದ ರೂ.270

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular