Thursday, September 19, 2024
Google search engine
Homeಮುಖಪುಟಶರದ್ ಪವರ್ ರಾಷ್ಟ್ರಪತಿ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ - ಎನ್.ಸಿ.ಪಿ

ಶರದ್ ಪವರ್ ರಾಷ್ಟ್ರಪತಿ ಚುನಾವಣೆಯ ಸ್ಪರ್ಧೆಯಲ್ಲಿ ಇಲ್ಲ – ಎನ್.ಸಿ.ಪಿ

ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ. ಕೆಲವು ವಿರೋಧ ಪಕ್ಷಗಳು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ಅವರ ಉಮೇದುವಾರಿಕೆಯನ್ನು ಬೆಂಬಲಿಸಿರುವ ನಡುವೆಯೇ ಶರದ್ ಪವಾರ್ ಸ್ಪರ್ಧೆಯಲ್ಲಿ ಇಲ್ಲ ಎಂಬ ಹೇಳಿಕೆ ಹೊರಬಂದಿದೆ.

ಎನ್.ಸಿಪಿ ಸಚಿವರನ್ನು ಪವಾರ್ ಭೇಟಿ ಮಾಡಿದ ನಂತರ ಈ ವಿಷಯ ಚರ್ಚೆಗೆ ಬಂದಿದೆ. ಸಭೆಯಲ್ಲಿ ಭಾಗವಹಿಸಿದ್ದ ಎನ್.ಸಿ.ಪಿ ಸಚಿವರೊಬ್ಬರು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಭಾನುವಾರ ಪವಾರ್ ಅವರನ್ನು ಭೇಟಿಯಾಗಿ ಜುಲೈ 18ರಂದು ನಡೆಯಲಿರುವ ಮುಂದಿನ ರಾಷ್ಟ್ರಪತಿ ಚುನಾವಣೆಗೆ ಎನ್.ಸಿ.ಪಿ ಮುಖ್ಯಸ್ಥರಿಗೆ ತಮ್ಮ ಪಕ್ಷದ ಬೆಂಬಲವನ್ನು ದೃಢಪಡಿಸಿದ್ದರು.

ಕಳದ ವಾರ ರಾಜ್ಯಸಭಾ ಚುನಾವಣೆಗೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮುಂಬೈನಲ್ಲಿದ್ದಾಗ, ರಾಷ್ಟ್ರಪತಿ ಚುನಾಔಣೆಗೆ ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಪವಾರ್ ಅವರ ಹೆಸರನ್ನು ಸೂಚಿಸಿದರು.

ಪವಾರ್ ಅವರ ಉಮೇದುವಾರಿಕೆ ಬಗ್ಗೆ ಕಾಂಗ್ರೆಸ್ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂತ್ರೆಸ್ ಜೊತೆ ಸಮಾಲೋಚನೆ ನಡೆಸಿದೆ ಎಂದು ಖರ್ಗೆ ಹೇಳಿಕೆಯನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಆದರೆ ಅವರು ಅದರಲ್ಲಿ ಉತ್ಸುಕರಾಗಿದ್ದಾರೆಂದು ನಾನು ಭಾವಿಸುವುದಿಲ್ಲ. ಪವಾಋ್ ಜನರನ್ನು ಭೇಟಿಯಾಗಲು ಇಷ್ಟಪಡುವ ವ್ಯಕ್ತಿ. ಅವರು ರಾಷ್ಟ್ರಪತಿ ಭವನಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳುವುದಿಲ್ಲ ಎಂದು ಎನ್.ಸಿ.ಪಿಯ ಸಚಿವರು ಹೇಳಿದರು.

ಅದಕ್ಕಿಂತ ಮುಖ್ಯವಾಗಿ 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ಪವಾರ್ ನಿರತರಾಗಿದ್ದಾರೆ ಎಂದು ಹೇಳಿದರು.

ರಾಷ್ಟ್ರಪತಿ ಚುನಾವಣೆಗೆ ಸಾಮಾನ್ಯ ಅಭ್ಯರ್ಥಿಗಾಗಿ ಕಾಂಗ್ರೆಸ್ ಇತರ ವಿರೋಧ ಪಕ್ಷಗಳನ್ನು ತಲುಪುತ್ತಿದೆ. ಬಿಜೆಪಿ ನೇತೃತ್ವದ ಎನ್.ಡಿ.ಎ ರಾಷ್ಟ್ರಪತಿ ಚುನಾವಣೆಯನ್ನು ಗೆಲ್ಲಲು ಅನುಕೂಲಕರವಾಗದೆ. ಆದರ ಮತ ಹಂಚಿಕೆಯು ಒಟ್ಟು ಮತದಾರರಲ್ಲಿ ಶೇಕಡಾ 50ರಷ್ಟುನ್ನು ಮುಟ್ಟುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ 776 ಸಂಸದರಿದ್ದು, ತಲಾ 700 ಮತಗಳನ್ನು ಹೊಂದಿದ್ದಾರೆ. ವಿವಿಧ ಮತಗಳನ್ನು ಹೊಂದಿರುವ ರಾಜ್ಯಗಳಲ್ಲಿ 4,033 ಶಾಸಕರು ಮುಂದಿನ ರಾಷ್ಟ್ರಪತಿಯನ್ನು ಆಯ್ಕೆ ಮಾಡುತ್ತಾರೆ.

ಮತದಾರರ ಅಂತಿಮ ಪಟ್ಟಿಯನ್ನು ಇನ್ನೂ ಅಧಿಸೂಚನೆ ಮಾಡಲಾಗಿಲ್ಲವಾದರೂ ಎನ್.ಡಿ.ಎ ತನ್ನ ಪರವಾಗಿ 440 ಸಂಸದರನ್ನು ಹೊಂದಿದ್ದರೆ, ಪ್ರತಿಪಕ್ಷ ಯುಪಿಎ ಸುಮಾರು 180 ಸಂಸದರನ್ನು ಹೊಂದಿದೆ. ಜೊತೆಗೆ ಟಿಎಂಸಿ 36 ಸಂಸದರು ಸಾಮಾನ್ಯವಾಗಿ ವಿರೋಧ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular