Saturday, October 19, 2024
Google search engine
Homeಮುಖಪುಟಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ - ಇಬ್ಬರು ಅಪ್ರಾಪ್ತರು ಸೇರಿ ನಾಲ್ವರ ಬಂಧನ

ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ – ಇಬ್ಬರು ಅಪ್ರಾಪ್ತರು ಸೇರಿ ನಾಲ್ವರ ಬಂಧನ

ಪೊಲೀಸರು ಮಂಗಳವಾರ ಇಬ್ಬರು ಅಪ್ರಾಪ್ತ ಚಾಲಕರು ಸೇರಿ ಐದು ಜನರಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಕದ್ದ ನಗದು ಹಣ, ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವೆಲ್ಲೂರಿನಲ್ಲಿ ಮಹಿಳೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರನ್ನು ಪೋಲಿಸರು ಬಂಧಿಸಿದ್ದಾರೆ.

ಮಾರ್ಚ್ 17ರಂದು ವೆಲ್ಲೂರಿನಲ್ಲಿ ಐವರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದರು. ಮಹಿಳೆಯ ಆನ್ ಲೈನ್ ದೂರಿನ ಆಧಾರದ ಮೇಲೆ ಐಪಿಸಿ 147 ಗಲಭೆ, 148 ಮಾರಕ ಆಯುಧದಿಂದ ದಂಗೆ, 342 ಅಪಹರಣ, 368 ತಪ್ಪಾಗಿ ಮರೆಮಾಚುವುದು ಅಥವಾ ಇರಿಸುವುದು ಸೆಕ್ಷನ್ ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಅಲ್ಲದೆ 376 ಡಿ, 376 ಇ ಅಡಿಯಲ್ಲಿ ಪುನರಾವರ್ತಿತ ಅತ್ಯಾಚಾರ ಅಪರಾಧಿಯು ತನ್ನ ಜೀವಿತಾವಧಿಯವರೆಗೆ ಜೈಲಿನಲ್ಲಿರಬೇಕಾಗುತ್ತದೆ ಅಥವಾ ಮರಣದಂಡನೆಗೆ ಗುರಿಯಾಗಬೇಕಾಗುತ್ತದೆ. 395 ದಂಗೆ, 397 ಮಾರಕ ಆಯುಧ ಬಳಸಿ ದರೋಡೆ ಮಾಡುವುದು ಮತ್ತು ಗಂಭೀರ ಗಾಯ ಉಂಟು ಮಾಡುವುದು, 506 ಕ್ರಿಮಿನಲ್ ಬೆದರಿಕೆ ಮೊದಲಾದ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ.

ಹಿನ್ನೆಲೆ : ಮಹಿಳೆ ಮತ್ತು ಆಕೆಯ ಸ್ನೇಹಿತ ಮಾರ್ಚ್ 16ರಂದು ಕಟಪಾಡಿಯಲ್ಲಿ ಚಲನಚಿತ್ರಕ್ಕೆ ಹೋಗಿದ್ದರು. ಮನೆಗೆ ಹಿಂದಿರುಗುವಾಗ ಅವರು ಶೇರ್ ಆಟೋವನ್ನು ಬಾಡಿಗೆಗೆ ಪಡೆದು ಮಧ್ಯಾಹ್ನ 1 ಗಂಟೆಗೆ ಖಾಸಗಿ ಆಸ್ಪತ್ರೆ ಬಳಿ ಇಳಿಸಬೇಕಿದ್ದ ಆಟೋ ರಿಕ್ಷಾ ಚಾಲಕ ಬೇರೆ ದಾರಿಯಲ್ಲಿ ಸಾಗಿದ್ದ ಎನ್ನಲಾಗಿದೆ.

ನೀವು ಯಾಕೆ ರಾಂಗ್ ರೂಟ್ ತೆಗೆದುಕೊಳ್ಳುತ್ತಿದ್ದೀರಿ ಎಂದು ಇಬ್ಬರೂ ಕೇಳಿದಾಗ ಅವರು ವಾಹನವನ್ನು ವೇಗವಾಗಿ ಓಡಿಸಿ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದರು. ಆಟೋರೀಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಸೇರಿ ಐವರು ಇವರಿಬ್ಬರ ಬಳಿಯಿದ್ದ 40 ಸಾವಿರ ನಗದು, ಎರಡು ಪವನ್ ಚಿನ್ನಾಭರಣ ದೋಚಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು ಎಂದು ಹೇಳಲಾಗಿದೆ.

ಪೊಲೀಸರು ಮಂಗಳವಾರ ಇಬ್ಬರು ಅಪ್ರಾಪ್ತ ಚಾಲಕರು ಸೇರಿ ಐದು ಜನರಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಕದ್ದ ನಗದು ಹಣ, ಸಾಕ್ಷ್ಯಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular