ರಷ್ಯಾ 2389 ಉಕ್ರೇನಿಯನ್ ಮಕ್ಕಳನ್ನು ಅಪಹರಿಸಿದೆ ಎಂದು ಉಕ್ರೇನ್ ವಿದೇಶಾಂಗ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿ ಅಮೆರಿಕಾ ರಾಯಭಾರಿ ಕಚೇರಿ ಹೇಳಿದೆ.
ರಷ್ಯಾದ ನಿಯಂತ್ರಿತ ಪ್ರದೇಶಗಳಾ ಲುಹಾಸ್ಕ್ ಮತ್ತು ಡೊನೆಟ್ ಸ್ಕ್ ಪ್ರದೇಶಗಳಿಂದ ಇಷ್ಟೊಂದು ಮಕ್ಕಳನ್ನು ರಷ್ಯಾಕ್ಕೆ ಕರೆದೊಯ್ಯಲಾಗಿದೆ. ಇದು ಸಹಾಯವಲ್ಲ. ಇದು ಅಪಹರಣ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮುತ್ತಿಗೆ ಹಾಕಿದ ದಕ್ಷಿಣ ನಗರವಾದ ಮಾರಿಯುಪೋಲ್ ಗೆ ಮಾನವೀಯ ಪೂರೈಕೆಯನ್ನು ಅನುಮತಿಸಲು ಮತ್ತು ನಾಗರಿಕರನ್ನು ಬಿಡಲು ಉಕ್ರೇನ್ ಮಂಗಳವಾರ ರಷ್ಯಾಕ್ಕೆ ಹೊಸದಾಗಿ ಮನವಿ ಮಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ನಾಗರಿಕರಿಗೆ ಮಾನವೀಯ ಕಾರಿಡಾರ್ ತೆರೆಯಲು ನಾವು ಒತ್ತಾಯಿಸುತ್ತೇವೆ ಎಂದು ಉಪ ಪ್ರಧಾನಿ ಐರಿನಾ ವೆರೆಶ್ಚುಕ್ ಉಕ್ರೇನಿಯನ್ ದೂರದರ್ಶನದ ಮೂಲಕ ಹೇಳಿಕೆ ನೀಡಿದ್ದಾರೆ.
ರಷ್ಯಾದ ಸಶಸ್ತ್ರ ಪಡೆಗಳು ದಕ್ಷಿಣ ನಗರವಾದ ಖೆರ್ಸನ್ ನಿವಾಸಿಗಳಿಗೆ ಮಾನವೀಯ ಪೂರೈಕೆಗಳನ್ನು ತಲುಪದಂತೆ ತಡೆಯುತ್ತಿವೆ ಎಂದು ವೆರೆಶ್ಚುಕ್ ಹೇಳಿದ್ದಾರೆ.
ರಷ್ಯಾದ ಬಾಂಬ್ ದಾಳಿಯು ಉಕ್ರೇನ್ ನ ಇತರೆ ನಗರಗಳ ಮೇಲೆಯೂ ಮುಂದುವರಿಸಿದೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಇಟಾಲಿಯನ್ ಸಂಸತ್ತಿಗೆ ತಿಳಿಸಿದರು.
ರಷ್ಯಾದ ಪಡೆಗಳಿಗೆ ಉಕ್ರೇನ್ ಯುರೋಪಿನ ದ್ವಾರವಾಗಿದೆ. ಅವರು ಇಲ್ಲಿಂದ ಪ್ರವೇಶಿಸಲು ಬಯಸುತ್ತಾರೆ. ಆದರೆ ಅನಾಗರಿಕವಾಗಿ ನಡೆದುಕೊಳ್ಳಲು ಅನುಮತಿಸಬಾರದು ಎಂದು ಹೇಳಿದ್ದಾರೆ.
ಮಾರಿಯುಪೋಲ್ ರಷ್ಯಾದ ಬಾಂಬ್ ದಾಳಿಗಳಿಂದ ಧ್ವಂಸಗೊಂಡಿದೆ. ಇಲ್ಲಿ ಆಹಾರ, ಔಷಧ, ವಿದ್ಯುತ್ ಮತ್ತು ನೀರು ಸಿಗುತ್ತಿಲ್ಲ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ.


