Friday, October 18, 2024
Google search engine
Homeಮುಖಪುಟಸ್ಥಳೀಯ ಸಂಸ್ಥೆಗಳ ಚುನಾವಣೆ - ಟಿಎಂಸಿಗೆ ಭರ್ಜರಿ ಜಯ

ಸ್ಥಳೀಯ ಸಂಸ್ಥೆಗಳ ಚುನಾವಣೆ – ಟಿಎಂಸಿಗೆ ಭರ್ಜರಿ ಜಯ

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಚುನಾವಣೆ ಶಾಂತಿಯುತವಾಗಿ ನಡೆದಿದೆ. ಜನರು ಪಕ್ಷಕ್ಕೆ ಮತ ನೀಡಿದ್ದಾರೆ. ಎಲ್ಲಿಯೂ ತೊಂದರೆಯಾಗದಂತೆ ಜನರ ಮತದಾನ ಪ್ರಕ್ರಿಯಲ್ಲಿ ಪಾಲ್ಗೊಂಡು ಟಿಎಂಸಿ ಗೆಲುವಿಗೆ ನಾಂದಿ ಹಾಡಿದ್ದಾರೆ ಎಂದರು.

ಪಶ್ಚಿಮಬಂಗಾಳದಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ.

ಬಿದನ್ ನಗರ, ಸಿಲಿಗುರಿ, ಚಂದರ್ ನಾಗೂರು ಮತ್ತು ಅಸನ್ಸೋಲ್ ಮುನಿಸಿಪಲ್ ಕಾರ್ಪೋರೇಷನ್ ಗಳಲ್ಲಿ ಟಿಎಂಸಿ ಗೆಲುವಿನ ನಗೆ ಬೀರಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಚುನಾವಣೆ ಶಾಂತಿಯುತವಾಗಿ ನಡೆದಿದೆ. ಜನರು ಪಕ್ಷಕ್ಕೆ ಮತ ನೀಡಿದ್ದಾರೆ. ಎಲ್ಲಿಯೂ ತೊಂದರೆಯಾಗದಂತೆ ಜನರ ಮತದಾನ ಪ್ರಕ್ರಿಯಲ್ಲಿ ಪಾಲ್ಗೊಂಡು ಟಿಎಂಸಿ ಗೆಲುವಿಗೆ ನಾಂದಿ ಹಾಡಿದ್ದಾರೆ ಎಂದರು.

ಫೆಬ್ರವರಿ 27 ರಂದು ನಡೆಯಲಿರುವ ಪಶ್ಚಿಮಬಂಗಾಳದ ಪುರಸಭೆ ಚುನಾವಣೆಗೆ ಕೇಂದ್ರ ಪಡೆಗಳನ್ನು ಕರ್ತವ್ಯಕ್ಕೆ ಹಾಜರುಪಡಿಸುವಂತೆ ಕಲ್ಕತ್ತಾ ಹೈಕೋರ್ಟಿಗೆ ಬಿಜೆಪಿ ಅರ್ಜಿ ಸಲ್ಲಿಸಿದೆ.

ಟಿಎಂಸಿ 41 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಧಾನ ನಗರವನ್ನು ಉಳಿಸಿಕೊಂಡಿದೆ. ಪ್ರತಿಪಕ್ಷ ಬಿಜೆಪಿ ಮತ್ತು ಸಿಎಂ ಖಾತೆಯನ್ನು ತೆರೆಯಲು ಸಂಪೂರ್ಣ ವಿಫಲವಾಗಿವೆ.

ಕಾಂಗ್ರೆಸ್ ಪಕ್ಷ ಒಂದು ಸ್ಥಾನ ಗಳಿಸಿದೆ. ಒಂದು ವಾರ್ಡ್ ನಲ್ಲಿ ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಚಂದರ್ ನಾಗೂರು ನಲ್ಲಿ 32 ಸ್ಥಾನಗಳಲ್ಲಿ ಟಿಎಂಸಿ 31 ಸ್ಥಾನಗಳನ್ನು ಗೆದ್ದಿದೆ. ಸಿಪಿಎಂ ಒಂದು ವಾರ್ಡ್ ನಲ್ಲಿ ಗೆದ್ದಿದೆ. ಸಿಲಿಗುರಿಯಲ್ಲಿ ಟಿಎಂಸಿಯ ಮತ ಹಂಚಿಕೆ ಪ್ರಮಾಣ 78.72 ಆಗಿದ್ದರೆ, ಬಿಜೆಪಿ ಮತ್ತು ಸಪಿಎಂ ಕ್ರಮವಾಗಿ 10.64 ಮತ್ತು ಶೇ.8.5ರಷ್ಟು ಮತಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ವಿಶ್ಲೇಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular