ತುಮಕೂರಿನ ಝೆನ್ ಟೀಮ್ ಗೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಅ.18 ಮತ್ತು 19 ರಂದು ಎಂ.ಜಿ. ರಸ್ತೆಯ ಬಾಲಭವನದಲ್ಲಿ ನೀನಾಸಂ ನಾಟಕೋತ್ಸವವನ್ನು ಆಯೋಜಿಸಲಾಗಿದೆ.
18 ರಂದು ಶುಕ್ರವಾರ ಸಂಜೆ 6.45 ಕ್ಕೆ ಮಾಲತೀ ಮಾಧವ ನಾಟಕ ಪ್ರದರ್ಶನವಿದೆ. ಸಂಸ್ಕೃತ ನಾಟಕಕಾರÀ ಭವಭೂತಿಯ ಕೃತಿಯನ್ನು ಕೆ.ವಿ. ಅಕ್ಷರ ನಿರ್ದೇಶಿಸಿದ್ದಾರೆ.
19 ರಂದು ಶನಿವಾರ ಸಂಜೆ 6.45 ಕ್ಕೆ ಅಂಕದ ಪರದೆ ನಾಟಕ ಪ್ರದರ್ಶನವಿದೆ. ಅಭಿರಾಮ್ ಭಡ್ಕಮ್ಕರ್ ಅವರು ರಚಿಸಿರುವ ಈ ನಾಟಕವನ್ನು ಜಯಂತ ಕಾಯ್ಕಿಣಿ ಅನುವಾದಿಸಿದ್ದು ನಿರ್ದೇಶನವನ್ನು ವಿದ್ಯಾನಿಧಿ ವನಾರಸೆ ಮಾಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸಹಕಾರದಲ್ಲಿ ನಡೆಯುವ ನಾಟಕೋತ್ಸವಕ್ಕೆ ಉಚಿತ ಪ್ರವೇಶವಿದೆ ಎಂದು ಝೆನ್ ಟೀಮ್ ನ ಉಗಮ ಶ್ರೀನಿವಾಸ್ ತಿಳಿಸಿದ್ದಾರೆ.
18 ರಂದು ನಾಟಕೋತ್ಸವದ ಉದ್ಘಾಟನೆಯನ್ನು ಕೈಗಾರಿಕೋದ್ಯಮಿ ಎಚ್.ಜಿ. ಚಂದ್ರಶೇಖರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚೇತನಕುಮಾರ್ ಎಂ.ಎನ್. ಹಾಗೂ ಸಮಾಜ ಸೇವಕ ಮತ್ತು ಕಾಂಗ್ರೆಸ್ ಮುಖಂಡ ಎಸ್.ಬಿ. ಶ್ರೀನಿವಾಸ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಡಿಸಿ ಡಾ.ಎನ್. ತಿಪ್ಪೇಸ್ವಾಮಿ ವಹಿಸಲಿದ್ದಾರೆ.
ಅಕ್ಟೋಬರ್ 19 ಶನಿವಾರ ಸಮಾರೋಪ ಸಮಾರಂಭ ನಡೆಯಲಿದ್ದು ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ಚಾಲನೆ ನೀಡಲಿದ್ದಾರೆ. ಸಮಾರೋಪ ಭಾಷಣ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀದೇವಿ ಶಿಕ್ಷಣ ಸಂಸ್ಥೆಯ ಡಾ. ಎಂ.ಆರ್. ಹುಲಿನಾಯ್ಕರ್ ವಹಿಸಲಿದ್ದಾರೆ.
ತುಮಕೂರಿನಲ್ಲಿ ಅ.18, 19ಕ್ಕೆ ನಿನಾಸಂ ನಾಟಕೋತ್ಸವ
RELATED ARTICLES