Friday, October 18, 2024
Google search engine
Homeಮುಖಪುಟಬಿಜೆಪಿ ವಿರುದ್ಧ ರಾಷ್ಟ್ರೀಯ ಮೈತ್ರಿಕೂಟಕ್ಕೆ ಚಾಲನೆ

ಬಿಜೆಪಿ ವಿರುದ್ಧ ರಾಷ್ಟ್ರೀಯ ಮೈತ್ರಿಕೂಟಕ್ಕೆ ಚಾಲನೆ

ಟಿಎಂಸಿ ಮುಖ್ಯಸ್ಥೆ ಮಮತ ಬ್ಯಾನರ್ಜಿ ಅವರು ಮುಖ್ಯಮಂತ್ರಿಗಳಾದ ಎಂ.ಕೆ.ಸ್ಟಾಲಿನ್ ಮತ್ತು ಕೆ. ಚಂದ್ರಶೇಖರ ರಾವ್ ಜೊತೆ ಮಾತನಾಡಿದ ನಂತರ ತಮಿಳುನಾಡು ಮತ್ತು ತೆಲಂಗಾಣ ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆಗಳು ಹೊರಬಂದಿವೆ.

ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯದ ಮುಖ್ಯಮಂತ್ರಿಗಳ ಸಭೆ ಕರೆಯುವ ಪ್ರಸ್ತಾಪನೆಯೊಂದಿಗೆ ಬಿಜೆಪಿ ವಿರುದ್ಧ ರಾಷ್ಟ್ರೀಯ ಮೈತ್ರಿಕೂಟವನ್ನು ಬಲಪಡಿಸುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೆಲಸ ಮಾಡುತ್ತಿದ್ದಾರೆ.

ಟಿಎಂಸಿ ಮುಖ್ಯಸ್ಥೆ ಮಮತ ಬ್ಯಾನರ್ಜಿ ಅವರು ಮುಖ್ಯಮಂತ್ರಿಗಳಾದ ಎಂ.ಕೆ.ಸ್ಟಾಲಿನ್ ಮತ್ತು ಕೆ. ಚಂದ್ರಶೇಖರ ರಾವ್ ಜೊತೆ ಮಾತನಾಡಿದ ನಂತರ ತಮಿಳುನಾಡು ಮತ್ತು ತೆಲಂಗಾಣ ಮುಖ್ಯಮಂತ್ರಿಗಳಿಂದ ಪ್ರತಿಕ್ರಿಯೆಗಳು ಹೊರಬಂದಿವೆ.

ತಮಿಳುನಾಡು ಮತ್ತು ತೆಲಂಗಾಣ ಮುಖ್ಯಮಂತ್ರಿಗಳು ಬಿಜೆಪಿ ವಿರುದ್ಧ ತೀವ್ರ ಸ್ವರೂಪದ ಹೋರಾಟ ಗಟ್ಟಿಗೊಳಿಸು ತೀರ್ಮಾನ ಕೈಗೊಂಡಿದ್ದಾರೆ.

ಪ್ರೀತಿಯ ದೀದಿ ಮಮತಾ ಅವರು ನನಗೆ ದೂರವಾಣಿ ಕರೆ ಮಾಡಿ ಬಿಜೆಪಿ ಹೊರತಾದ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರು ಸಾಂವಿಧಾನಿಕ ಅತಿಕ್ರಮಣ ಮತ್ತು ಅಧಿಕಾರದ ಲಜ್ಜೆಗೆಟ್ಟ ದುರುಪಯೋಗದ ಬಗ್ಗೆ ಸ್ಟಾಲಿನ್ ಕಳವಳ ವ್ಯಕ್ತಪಡಿಸಿದ್ದು ಪ್ರತಿಪಕ್ಷಗಳ ಸಿಎಂಗಳ ಸಭೆ ನಡೆಸುವಂತೆ ಸೂಚಿಸಿದರು ಎಂದು ಟ್ವಿಟರ್ ನಲ್ಲಿ ಬರೆದುಕೊಡಿದ್ದಾರೆ.

ಅವರು ವಿರೋಧ ಪಕ್ಷದ ಸಿಎಂಗಳ ಸಭೆಯನ್ನು ಸೂಚಿಸಿದರು. ರಾಜ್ಯದ ಸ್ವಾಯತ್ತತೆಯನ್ನು ಎತ್ತಿಹಿಡಿಯಲು ಡಿಎಂಕೆಯ ಬದ್ದತೆ ಬಗ್ಗೆ ನಾನು ಅವರಿಗೆ ಭರವಸೆ ನೀಡಿದ್ದೇನೆ. ದೆಹಲಿಯಿಂದ ಶೀಘ್ರವೇ ಸಿಎಂಗಳ ಸಮಾವೇಶ ನಡೆಯಲಿದೆ ಎಂದು ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ಎಲ್ಲಾ ನಾಯಕರು ಅವರ ಹಿಂದೆ ಹೋಗಬೇಕಾಗುತ್ತದೆ. ಅಗತ್ಯವಿದ್ದರೆ ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ರಚಿಸಲು ಸಿದ್ಧ ಎಂದು ಹೇಳಿದರು. ಒಂದು ಅಥವಾ ಎರಡು ದಿನಗಳಲ್ಲಿ, ನಾನು ಮುಂಬೈಗೆ ಭೇಟಿ ನೀಡುತ್ತೇನೆ ಮತ್ತು ಉದ್ಧವ್ ಠಾಕ್ರೆ ಅವರೊಂದಿಗೆ ಸಮಸ್ಯೆ ಕುರಿತು ಚರ್ಚಿಸುತ್ತೇನೆ ಎಂದು ಹೇಳಿದ್ದಾರೆ ರಾವ್.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular