Thursday, November 21, 2024
Google search engine
Homeಜಿಲ್ಲೆತುಮಕೂರು ವಿವಿಯ ನೂತನ ಕ್ಯಾಂಪಸ್ ನಲ್ಲಿ ಫಿಲ್ಮ್ ಇನ್ಸಿಟಿಟ್ಯೂಟ್ ಆರಂಭಕ್ಕೆ ಸಿದ್ದತೆ

ತುಮಕೂರು ವಿವಿಯ ನೂತನ ಕ್ಯಾಂಪಸ್ ನಲ್ಲಿ ಫಿಲ್ಮ್ ಇನ್ಸಿಟಿಟ್ಯೂಟ್ ಆರಂಭಕ್ಕೆ ಸಿದ್ದತೆ

ಪುಣೆ ಹೊರತುಪಡಿಸಿ ಉಳಿದ ಕಡೆ ಫಿಲ್ಮ್ ಇನ್ಸ್ಟಿಟ್ಯೂಟ್ ಇಲ್ಲ, ಈ ಹಿನ್ನೆಲೆಯಲ್ಲಿ ತುಮಕೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ನೂತನವಾಗಿ ಫಿಲ್ಮ್ ಇನ್ಸ್ಟಿಟ್ಯೂಟ್ ಪ್ರಾರಂಭ ಮಾಡಲು ರಾಜೇಂದ್ರಬಾಬು ಅವರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತುಮಕೂರು ವಿವಿಯ ಕುಲಪತಿ ವೆಂಕಟೇಶ್ವರಲು ತಿಳಿಸಿದರು.

ತುಮಕೂರು ನಗರದ ಹೊರವಲಯದಲ್ಲಿರುವ ವಿವಿಯ ನೂತನ ಕ್ಯಾಂಪಸ್ ನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ವಿಶ್ವವಿದ್ಯಾಲಯ ಕ್ಯಾಂಪಸ್ ನಲ್ಲಿ 30 ಎಕರೆ ಭೂಮಿಯನ್ನು ಫಿಲ್ಮ್ ಇನ್ಸಿಟಿಟೂಟ್ ನಿರ್ಮಾಣ ಮಾಡಲು ನೀಡಲಾಗುವುದು. ಮುಂದಿನ ದಿನಗಳಲ್ಲಿ ಈ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ನೂತನ ಕ್ಯಾಂಪಸ್ 240 ಎಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು, 99 ವರ್ಷಗಳ ಲೀಸ್ ಗೆ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ರೂಸಾದಿಂದ ಅನುದಾನಕ್ಕೆ ಕೋರಿದ್ದೇವೆ. ಯುಜಿಸಿಯಿಂದ ಸದ್ಯಕ್ಕೆ ಯಾವುದೆ ಅನುದಾನ ಬಂದಿಲ್ಲ. ತುಮಕೂರು ವಿಶ್ವವಿದ್ಯಾಲಯದಲ್ಲಿ ಈಗ ಮೂವತ್ತು ಕೋರ್ಸ್‌ಗಳು ನಡೆಯುತ್ತಿವೆ ಎಂದರು.

ಸ್ನಾತಕ ಮತ್ತು ಸ್ನಾತಕೋತ್ತರ ಸೇರಿ 175 ಮಂದಿ ಪ್ರಾಧ್ಯಾಪಕರಿದ್ದಾರೆ. 150 ಅತಿಥಿ ಉಪನ್ಯಾಸಕರು  ಕೆಲಸ ಮಾಡುತ್ತಿದ್ದಾರೆ. ಖಾಯಂ ಭೋದಕ ಹಾಗೂ ಬೋದಕೇತರರ ನೇಮಕದ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದರು.

ಅನುದಾನ ಪಡೆಯುವ ಸಂಬಂಧ ಕೇಂದ್ರ ಸಚಿವ ವಿ ಸೋಮಣ್ಣ ಅವರ ಜೊತೆ ಮಾತುಕತೆ ನಡೆಸಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದಿಂದಲೂ ಅನುದಾನ ನಿರೀಕ್ಷೆ ಮಾಡಲಾಗಿದೆ, ಐವತ್ತು ಕೋಟಿ ವೆಚ್ಚದಲ್ಲಿ ಉದ್ಯೋಗಸ್ಥ ಮಹಿಳೆಯರಿಗೆ ಪಿಜಿ ಪ್ರಾರಂಭಿಸಲು ‌ಸರ್ಕಾರ ಚಿಂತನೆ ನಡೆಸಿದೆ. ಇದರಿಂದಲೂ ವಿವಿಗೆ ಅನುಕೂಲವಾಗಲಿದೆ ಎಂದರು.

ಮುಂದಿನ ವಾರ ವಿಜ್ಞಾನ ವಿಭಾಗ ಸ್ಥಳಾಂತರ

ನೂರು ಕೋಟಿಗೂ ರೂಗಳಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಿರುವ ತುಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್ ಗೆ ಮುಂದಿನ ವಾರದಿಂದ ವಿಜ್ಞಾನ ವಿಭಾಗದ ತರಗತಿಗಳನ್ನು ನಗರ ಕ್ಯಾಂಪಸ್ ನಿಂದ ನೂತನ ಕ್ಯಾಂಪಸ್ ಗೆ ಸ್ಥಳಾಂತರ ಮಾಡಲಾಗುವುದು ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular