ವಿಶೇಷ ಆರ್ಥಿಕ ವಲಯಗಳ ಕಾಯ್ದೆಯನ್ನು ಉದ್ಯಮ ಮತ್ತು ಹಬ್ ಗಳ ಅಭಿವೃದ್ಧಿಗಾಗಿ ಹೊಸ ಶಾಸನದೊಂದಿಗೆ ಬದಲಾಯಿಸಲಾಗುತ್ತಿದೆ. ಇದು ಅಸ್ತಿತ್ವದಲ್ಲಿರುವ ಕೈಗಾರಿಕಾ ಪ್ರದೇಶಗಳನ್ನು ಒಳಗೊಳ್ಳುತ್ತದೆ ಮತ್ತು ರಫ್ತುಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂದು 2022-23ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಕೇಂದ್ರ ಸರ್ಕಾರದ ಪರಿಣಾಮಕಾರಿ ಬಂಡವಾಳ ವೆಚ್ಚವು 2022-23ರಲ್ಲಿ 10.68 ಲಕ್ಷ ಕೋಟಿ ರೂಗಳೆಂದು ಅಂದಾಜಿಸಲಾಗಿದೆ. ಇದು ಜಿಡಿಪಿಯ 4.1ರಷ್ಟಾಗಿದೆ.
ಬಂಡವಾಳ ವೆಚ್ಚವನ್ನು 35.4ರಷ್ಟು ಇಂದ 7.5 ಲಕ್ಷ ಕೋಟಿಗೆ ಏರಿಕೆಯಾಗಿದೆ. ಹಸಿರು ಮೂಲಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಕ್ರೂಢೀಕರಿಸಲು ಸಾರ್ವಭೌಮ ಹಸಿರು ಬಾಂಡ್ ಗಳನ್ನು ನೀಡಲಾಗುವುದು ಎಂದು ಹೇಳಿದರು.
ಬ್ಲಾಕ್ ಚೈನ್ ಮತ್ತು ಇತರ ತಂತ್ರಜ್ಞಾನವನ್ನು ಬಳಸಿಕೊಂಡು ಡಿಜಿಟಲ್ ರೂಪಾಯಿಯನ್ನು ನೀಡಲಾಗುವುದು. 2022-23 ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಡಿಜಿಟಲ್ ಕರೆನ್ಸಿಯನ್ನು ನೀಡಲಾಗುವುದು. ಇದು ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.
2022-23ರ ಒಟ್ಟು ವೆಚ್ಚವನ್ನು ರೂ.39.45 ಲಕ್ಷ ಕೋಟಿಗಳಾಗಿದ್ದು ಒಟ್ಟು ಸ್ವೀಕೃತಿಗಳು 22.84 ಲಕ್ಷ ಕೋಟಿಗೆ ಇಳಿಕೆ ಮಾಡಿದೆ. ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ಸೇವೆಗಳು ಪ್ರಾರಂಭವಾಗಲಿವೆ ಎಂದರು.
ಮಹಾಭಾರತವನ್ನು ಉಲ್ಲೇಖಿಸಿದ ಸಚಿವರು ರಾಜನು ಯಾವುದೇ ಸಡಿಲಿಕೆಯನ್ನು ಬಿಟ್ಟು ಧರ್ಮದ ಸಾಲಿನಲ್ಲಿ ರಾಜ್ಯವನ್ನು ಆಳುವ ಮೂಲಕ ಜನರ ಕಲ್ಯಾಣಕ್ಕಾಗಿ ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿದರು.
ದೋಷವನ್ನು ಸರಿಪಡಿಸಲು ಅವಕಾಶವನ್ನು ಒದಗಿಸಲು , ತರಿಗೆದಾರರು ಇದೀಗ ಸಂಬಂಧಿತ ಮೌಲ್ಯಮಾಪನ ವರ್ಷದಿಂದ 2 ವರ್ಷಗಳಲ್ಲಿ ನವೀಕರಿಸಿದ ರಿಟರ್ನ್ ಸಲ್ಲಿಸಬಹುದಾಗಿದೆ ಎಂದು ಸಚಿವರು ತಿಳಿಸಿದರು.
ಸಾರ್ವಜನಿಕ ಹೂಡಿಕೆಯು ಪ್ರಮುಖ ಖಾಸಗಿ ಹೂಡಿಕೆ ಮತ್ತು ಬೆಂಬಲ ಬೇಡಿಕೆಗೆ ಕಾರಣವಾಗುತ್ತದೆ. GDP ಯ 6.9ರಷ್ಟು ಇದ್ದು ಪರಿಷ್ಕೃತ ವಿತ್ತೀಯ ಕೊರತೆಯಾಗಿದೆ ಎಂದರು.