Thursday, September 19, 2024
Google search engine
Homeಮುಖಪುಟಬಿಜೆಪಿಯಿಂದ ದ್ವೇಷದ ಕಾರ್ಖಾನೆ ಸ್ಥಾಪನೆ - ರಾಹುಲ್

ಬಿಜೆಪಿಯಿಂದ ದ್ವೇಷದ ಕಾರ್ಖಾನೆ ಸ್ಥಾಪನೆ – ರಾಹುಲ್

ಬುಲ್ಲಿಬಾಯಿ ಆಪ್ ಪ್ರಕರಣದ ಆರೋಪಿಗಳ ಚಿಕ್ಕ ವಯಸ್ಸನ್ನು ನೋಡಿದರೆ ಇಷ್ಟೊಂದು ದ್ವೇಷ ಎಲ್ಲಿಂದ ಬಂತು ಎಂದು ಇಡೀ ದೇಶವೇ ಕೇಳುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಬಿಜೆಪಿ ಹಲವಾರು ದ್ವೇಷದ ಕಾರ್ಖಾನೆಗಳನ್ನು ಸ್ಥಾಪಿಸಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವುಗಳಲ್ಲಿ ಟೆಕ್ ಫಾಗ್ ಅಪ್ಲಿಕೇಶನ್ ಒಂದು ಎಂದು ತಿಳಿಸಿದರು.

ನಿರ್ದಿಷ್ಟ ಧರ್ಮದ ಮಹಿಳೆಯರನ್ನು ಟಾರ್ಗೆಟ್ ಮಾಡಿದ ಬುಲ್ಲಿ ಬಾಯಿ ಆಪ್ ಪ್ರಕರಣದ ಆರೋಪಿಗಳ ವಯಸ್ಸಿಗೆ ಹೋದಂತೆ ಇಷ್ಟೊಂದು ದ್ವೇಷ ಎಲ್ಲಿಂದ ಬರುತ್ತಿದೆ ಎಂದು ಇಡೀ ದೇಶವೇ ಅಚ್ಚರಿಪಡುತ್ತಿದೆ ಎಂದು ಟೀಕಿಸಿದರು.

ಬುಲ್ಲಿಬಾಯಿ ಆಪ್ ಪ್ರಕರಣದ ಆರೋಪಿಗಳ ಚಿಕ್ಕ ವಯಸ್ಸನ್ನು ನೋಡಿದರೆ ಇಷ್ಟೊಂದು ದ್ವೇಷ ಎಲ್ಲಿಂದ ಬಂತು ಎಂದು ಇಡೀ ದೇಶವೇ ಕೇಳುತ್ತಿದೆ ಎಂದು ತಿಳಿಸಿದರು.

ವಾಸ್ತವವಾಗಿ ಬಿಜೆಪಿ ದ್ವೇಷದ ಹಲವು ಕಾರ್ಖಾನೆಗಳನ್ನು ಸ್ಥಾಪಿಸಿದೆ. ಅದರಲ್ಲಿ ಟೆಕ್ ಫಾಗ್ ಕೂಡ ಒಂದು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಟೆಕ್ ಫಾಗ್ ಬಿಜೆಪಿಯ ಸಹಾಯಕ ಆಪ್ ಆಗಿದ್ದು ಇದು ಸೈಬರ್ ಆರ್ಮಿಗೆ ಶಕ್ತಿಯನ್ನು ನೀಡಿದೆ ವರದಿಯನ್ನು ಟ್ಯಾಗ್ ಮಾಡಿದ್ದಾರೆ.

ಆಪ್ ಕುರಿತು ಕಾಂಗ್ರೆಸ್ ಈಗಾಗಲೇ ಸರ್ಕಾರದಿಂದ ಉತ್ತರವನ್ನು ಕೋರಿದೆ. ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.

ಬುಲ್ಲಿಬಾಯಿ ಪ್ರಕರಣದಲ್ಲಿ ಮುಕ್ತ ಮೂಲ ಸಾಫ್ಟ್ ವೇರ್ ಪ್ಲಾಟ್ ಫಾರ್ಮ್ ಗಿಟ್ ಹಬ್ ನಲ್ಲಿ ಹೋಸ್ಟ್ ಮಾಡಲಾದ ಬುಲ್ಲಿಬಾಯಿ ಎಂಬ ಅಪ್ಲಿಕೇಶನ್ ನಲ್ಲಿ ನೂರಾರು ಮುಸ್ಲಿಂ ಮಹಿಳೆಯರ ತಿರುಚಿದ ಪೋಟೋಗಳನ್ನು ಹರಾಜಿಗೆ ಅಪ್ ಲೋಡ್ ಮಾಡಲಾಗಿದೆ. ಇದನ್ನು ಟ್ವಿಟರ್ ನಿರ್ಬಂಧಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular