Friday, November 22, 2024
Google search engine
Homeಮುಖಪುಟಸಾಹಿತಿ, ಸಮಾಜವಾದಿ ಚಿಂತಕ ಚಂಪಾ ಇನ್ನಿಲ್ಲ

ಸಾಹಿತಿ, ಸಮಾಜವಾದಿ ಚಿಂತಕ ಚಂಪಾ ಇನ್ನಿಲ್ಲ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ತಮ್ಮ ಭಾಷಣಗಳಿಂದ ಸಾಕಷ್ಟು ವಿವಾದಗಳನ್ನು ಮೇಲೆಳೆದುಕೊಂಡವರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಚಂಪಾ ಮುಡಿಗೇರಿವೆ.

ಕವಿ, ನಾಟಕಕಾರ, ಸಂಪಾದಕ, ಕನ್ನಡಪರ ಹೋರಾಟಗಾರ ಹಾಗೂ ಸಮಾಜವಾದಿ ಚಿಂತಕ ಚಂದ್ರಶೇಖರ್ ಪಾಟೀಲ್ ಅವರು ಇಂದು ಬೆಳಗ್ಗೆ ನಿಧನರಾದರು. ತೀಕ್ಷ್ಣಮತಿಯಾಗಿದ್ದ ಚಂಪಾ ತನ್ನ ಎದುರಾಳಿಗಳನ್ನು ಕುಟುಕಿ ಚಾಟಿ ಬೀಸುತ್ತಿದ್ದರು. ಅವರಿಗೆ 83 ವರ್ಷ ವಯಸ್ಸಾಗಿತ್ತು.

1957ರಲ್ಲಿ ಚಂಪಾ ಹೊಂಗನಸ ಹಡಗು, ನಾಳಿಗಿದೋ ಸ್ವಾಗತ, ಚರಿಪನಾದವೊ ಹಾಡು ಹಕ್ಕಿಯೋ ಮುಂತಾದ ಕವನಗಳು ಪ್ರಕಟವಾಗಿವೆ.

ಕಾವ್ಯದ ಜೊತೆಗೆ ನಾಟಕಗಳನ್ನು ರಚಿಸಿದ್ದಾರೆ. ಕುಂಟ ಕುಂಟ ಕುರುವತ್ತಿ, ಅಪ್ಪ, ಕೊಡೆಗಳು, ಗುರ್ತಿನವರು, ಟಿಂಗರಬುಡ್ಡಣ್ಣ, ಕತ್ತಲರಾತ್ರಿ, ಗೌಡಸಾನಿ, ಜಗದಂಬೆಯ ಬೀದಿ ನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ ಮೊದಲಾದ ಉತ್ತಮ ನಾಟಕಗಳನ್ನು ರಚಿಸಿ ನಾಟಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.

ಸಂಕ್ರಮಣ ಕಾವ್ಯ, ಗಾಂಧಿ ಗಾಂಧಿ, ಬಂಡಾಯ ಮತ್ತು ಸಾಹಿತ್ಯ, ನೆಲ್ಸನ್ ಮಂಡೇಲಾ, ಕನ್ನಡನಾಡಿಗೊಂದು ಪ್ರಾದೇಶಿಕ ಪಕ್ಷ ಮೊದಲಾದ ಕೃತಿಗಳನ್ನು ಸಂಗ್ರಹಿಸಿದ್ದಾರೆ.

ಸಾಹಿತ್ಯ ಪತ್ರಿಕೆಯ ಮಹತ್ವವನ್ನು ಮನಗಂಡ ಚಂಪಾ ಸಮಾನ ಮನಸ್ಕರೊಡನೆ ಸೇರಿಕೊಂಡು ಸಂಕ್ರಮಣ ಪತ್ರಿಕೆಯನ್ನು 1964ರಲ್ಲಿ ಪ್ರಾರಂಭಿಸಿದರು. ಗಿರಡ್ಡಿ ಗೋವಿಂದರಾಜು, ಸಿದ್ದಲಿಂಗ ಪಟ್ಟಣ ಶೆಟ್ಟಿ ಪತ್ರಿಕೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನವ್ಯ ಮತ್ತು ಬಂಡಾಯ ಸಾಹಿತ್ಯ ಚಳವಳಿಗೆ ಸಂಕ್ರಮಣದ ಕೊಡುಗೆ ಅಪಾರವಾದುದು.

ಬಂಡಾಯ ಸಾಹಿತ್ಯ ಸಂಘಟನೆಯ ಸಂಚಾಲಕರಾಗಿ, ಗೋಕಾಕ್ ಚಳವಳಿಯಲ್ಲಿ ಭಾಗವಹಿಸಿದರು. ಅಷ್ಟೇ ಅಲ್ಲ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 26 ದಿನ ಜೈಲುವಾಸ ಅನುಭವಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ತಮ್ಮ ಭಾಷಣಗಳಿಂದ ಸಾಕಷ್ಟು ವಿವಾದಗಳನ್ನು ಮೇಲೆಳೆದುಕೊಂಡವರು. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಚಂಪಾ ಮುಡಿಗೇರಿವೆ.

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939ರ ಜೂನ್ 18ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣ ಹಾವೇರಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಇಂಗ್ಲೀಷ್ ಎಂ.ಎ. ಪದವಿ ವ್ಯಾಸಂಗ ಮಾಡಿ, ಇಂಗ್ಲೆಂಡಿನ ಲೀಡ್ಸ್ ವಿಶ್ವವಿದ್ಯಾಲಯದಿಂದ ಭಾಷಾ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರಾಗಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular