Thursday, September 19, 2024
Google search engine
Homeಮುಖಪುಟಎಸ್.ಡಿಪಿಐ ಮುಖಂಡನ ಹತ್ಯೆ ಪ್ರಕರಣ - ಇಬ್ಬರು ಆರ್.ಎಸ್.ಎಸ್ ಕಾರ್ಯಕರ್ತರ ಬಂಧನ

ಎಸ್.ಡಿಪಿಐ ಮುಖಂಡನ ಹತ್ಯೆ ಪ್ರಕರಣ – ಇಬ್ಬರು ಆರ್.ಎಸ್.ಎಸ್ ಕಾರ್ಯಕರ್ತರ ಬಂಧನ

ಬಂಧಿತರಿಬ್ಬರು ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ವಾಹನ ವ್ಯವಸ್ಥೆ ಮಾಡಿದ್ದರು. ಹತ್ಯೆಗೈದವರು ಸೇರಿ ಎಂಟು ಮಂದಿಯನ್ನು ಬಂಧಿಸಬೇಕಾಗಿದೆ ಎಂದು ಹೇಳಿದ್ದಾರೆ.

ಕೇರಳದ ಅಲಪ್ಪುಳದಲ್ಲಿ ಶನಿವಾರ ನಡೆದ ಎಸ್.ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್.ಶಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರ್.ಎಸ್.ಎಸ್ ಕಾರ್ಯಕರ್ತರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪ್ರಸಾದ್ ಮತ್ತು ರತೀಶ್ ಮನ್ನಂಚೇರಿ ಮೂಲದವರಾಗಿದ್ದು, ಕೊಲೆಯ ಹಿಂದಿನ ಸಂಚಿನಲ್ಲಿ ಅವರ ಪಾತ್ರವಿದೆ ಎಂದು ಪೊಲೀಸ್ಲರು ತಿಳಿಸಿದ್ದಾರೆ.

ಬಂಧಿತರಿಬ್ಬರು ಎಸ್‌ಡಿಪಿಐ ಮುಖಂಡನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳಿಗೆ ವಾಹನ ವ್ಯವಸ್ಥೆ ಮಾಡಿದ್ದರು. ಹತ್ಯೆಗೈದವರು ಸೇರಿ ಎಂಟು ಮಂದಿಯನ್ನು ಬಂಧಿಸಬೇಕಾಗಿದೆ ಎಂದು ಹೇಳಿದ್ದಾರೆ.

ಅಲಪ್ಪುಳದಲ್ಲಿ ನಡೆದ ಇಬ್ಬರು ರಾಜಕೀಯ ಮುಖಂಡರ ಹತ್ಯೆಯ ಹಿನ್ನೆಲೆಯಲ್ಲಿ ಅಲಪ್ಪುಳ ಸೇರಿ ರಾಜ್ಯಾದ್ಯಂತ ಮೂರು ದಿನ ಕಟ್ಟೆಚ್ಚರ ಬಲಪಡಿಸುವಂತೆ ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಸೂಚನೆ ನೀಡಿದ್ದಾರೆ.

ಮುಂದಿನ ಮೂರು ದಿನಗಳವರೆಗೆ ಮೆರವಣಿಗೆ ಮತ್ತು ಧ್ವನಿವರ್ಧಕಗಳ ಬಳಕೆ ನಿರ್ಬಂಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular