ಖಾಸಗಿ ವೈದ್ಯಕೀಯ ಕಾಲೇಜಿಗೆ ಅನುಕೂಲಕರ ಆದೇಶ ನೀಡಲು ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಲಹಾಬಾದ್ ಹೈಕೋರ್ಟ್ ಮಾಜಿ ನ್ಯಾಯಮೂರ್ತಿ ನಾರಾಯಣ ಶುಕ್ಲಾ ಅವರು ವಿರುದ್ಧ ಸಿಬಿಐ ಸೋಮವಾರ ಆರೋಪಪಟ್ಟಿ ಸಲ್ಲಿಸಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಶುಕ್ಲಾ ಅವರಲ್ಲದೆ, ಛತ್ತೀಸ್‌ಗಢ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ಐ.ಎಂ. ಖುದ್ದುಸಿ ಮತ್ತು ಮೂವರು ಖಾಸಗಿ ವ್ಯಕ್ತಿಗಳ ವಿರುದ್ಧವೂ ಚಾರ್ಜ್‌ಶೀಟ್ ಸಲ್ಲಿಸಿದ್ದು, ಖಚಿತ ಸಾಕ್ಷ್ಯಗಳ ಮೂಲಕ ದೃಢಪಡಿಸಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ತಿಂಗಳು, ಶುಕ್ಲಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ನಂತರ ಖುದ್ದಸಿಯನ್ನು ಸಹ ಬಂಧಿಸಿತ್ತು. ಡಿಸೆಂಬರ್ 4, 2019 ರಂದು ದಾಖಲಾದ ಎಫ್‌ಐಆರ್‌ನಲ್ಲಿ ಪ್ರಕರಣ ದಾಖಲಿಸುವ ಸಮಯದಲ್ಲಿ ಸಿಟ್ಟಿಂಗ್ ನ್ಯಾಯಾಧೀಶರಾಗಿದ್ದ ಶುಕ್ಲಾ ಅವರ ಜೊತೆ ಇತರ ಆರು ಮಂದಿ ಆರೋಪಿಗಳೆಂದು ಘೋಷಿಸಲಾಯಿತು.
ಖುದ್ದುಸಿ ಜೊತೆಗೆ ಸಹವರ್ತಿ ಭಾವನಾ ಪಾಂಡೆ, ಪ್ರಸಾದ್ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಲಕ್ನೋ ಮೂಲದ ವೈದ್ಯಕೀಯ ಕಾಲೇಜು ಪ್ರಸಾದ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮಾಲೀಕ ಬಿಪಿ ಯಾದವ್ ಮತ್ತು ಪ್ರಸಾದ್ ಯಾದವ್ ಮತ್ತು ಮೀರತ್‌ನ ವೆಂಕಟೇಶ್ವರ ವೈದ್ಯಕೀಯ ಕಾಲೇಜಿನ ಮಾಲೀಕ ಸುಧೀರ್ ಗಿರಿ ಆರೋಪಿಗಳು.
ಕಾಲೇಜು ಆಡಳಿತ ಮಂಡಳಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋದಾಗ, ನ್ಯಾಯಮೂರ್ತಿ ಖುದ್ದುಸಿ ಮತ್ತು ಭಾವನಾ ಪಾಂಡೆ ಅವರೊಂದಿಗೆ ಸಂಪರ್ಕದಲ್ಲಿದ್ದು ವಿಷಯವನ್ನು ಇತ್ಯರ್ಥಪಡಿಸುವ ಭರವಸೆ ನೀಡಿದರು ಎಂದು ಹೇಳಲಾಗಿದೆ.
ಬಿಪಿ ಯಾದವ್, ಖುದ್ದುಸಿ, ಪಾಂಡೆ ಮತ್ತು ಗಿರಿ ನಡುವೆ ಭ್ರಷ್ಟ ಮತ್ತು ಕಾನೂನುಬಾಹಿರ ವಿಧಾನಗಳಿಂದ ಲಕ್ನೋ ಪೀಠದಲ್ಲಿ ಅಲಹಾಬಾದ್‌ನ ಹೈಕೋರ್ಟ್‌ನ ನ್ಯಾಯಮೂರ್ತಿ ನಾರಾಯಣ ಶುಕ್ಲಾ ಅವರಿಂದ ಅನುಕೂಲಕರ ಆದೇಶ ಪಡೆಯುವ ಸಲುವಾಗಿ ಪಿತೂರಿ ನಡೆಸಲಾಗಿದೆ ಎಂದು ಎಫ್ಐಆರ್ ನಲ್ಲಿ ಆರೋಪಿಸಲಾಗಿದೆ.