ಜಪಾನಿನ ಒಸಾಕಾ ನಗರ ಶಾಪಿಂಗ್ ಜಿಲ್ಲೆಯ ವಾಣಿಜ್ಯ ಕಟ್ಟಡದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ.
ಎಂಟು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು 27 ಜನರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಸಾರ್ವಜನಿಕ ಬ್ರಾಡ್ಕಾಸ್ಟರ್ ಎನ್.ಎಚ್.ಕೆನಲ್ಲಿನ ವೀಡಿಯೊ ನಾಲ್ಕನೇ ಮಹಡಿಯ ಕಿಟಕಿಗಳಿಂದ ಹೊಗೆ ಸುರಿಯುವುದನ್ನು ತೋರಿಸಿದೆ.