Friday, September 20, 2024
Google search engine
Homeಮುಖಪುಟಕುಟುಂಬದ ಒಪ್ಪಿಗೆಯಿಲ್ಲದ ಮದುವೆ - ಅಕ್ಕನ ಶಿರಚ್ಛದನ ಮಾಡಿದ ಸಹೋದರ

ಕುಟುಂಬದ ಒಪ್ಪಿಗೆಯಿಲ್ಲದ ಮದುವೆ – ಅಕ್ಕನ ಶಿರಚ್ಛದನ ಮಾಡಿದ ಸಹೋದರ

ಕುಟುಂಬದ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣಕ್ಕೆ 19 ವರ್ಷದ ಯುವತಿಯನ್ನು ಆಕೆಯ ಕಿರಿಯ ಸಹೋದರ ತನ್ನ ತಾಯಿ ಜೊತೆ ಸೇರಿಕೊಂಡು ಶಿರಚ್ಛೇದನ ಮಾಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಯುವತಿಯ ಮದುವೆ ಮನೆಯಲ್ಲಿ ಕೊಲೆ ನಡೆದಿದೆ. ಕೊಲೆ ಮಾಡಿದ ನಂತರ ಆಕೆಯ ಕಿರಿಯ ಸಹೋದರ ಮತ್ತು ಅವನ ತಾಯಿ ಕತ್ತರಿಸಿದ ತಲೆಯನ್ನು ತೆಗೆದುಕೊಂಡು ಅಕ್ಕಪಕ್ಕದವರಿಗೆ ತೋರಿಸಿ ಅದರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಶೋಭಾ ಸಂಜಯ್ ಮೋಟೆ (38) ಮತ್ತು ಸಂಕೇತ್ ಸಂಜಯ್ ಮೋಟೆ (18) 19 ವರ್ಷದ ಯುವತಿ ತಮ್ಮ ಒಪ್ಪಿಗೆ ಪಡೆಯದೆ ವಿವಾಹವಾದ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ.

ಭಾನುವಾರ, ತಾಯಿ ಮತ್ತು ಮಗ ಲಾಡ್‌ಗಾಂವ್‌ನಲ್ಲಿ ಗಂಡನ ಮನೆಯಲ್ಲಿ ಯುವತಿಯನ್ನು ಭೇಟಿ ಮಾಡಿದ್ದಾರೆ. ಯುವತಿ ಚಹಾ ಮಾಡುತ್ತಿದ್ದ ವೇಳೆ ತಾಯಿ ಆಕೆಯ ಕಾಲುಗಳನ್ನು ಹಿಡಿದುಕೊಂಡಿದ್ದು, ಆಕೆಯ ಸಹೋದರ ಕುಡಗೋಲಿನಿಂದ ಶಿರಚ್ಛೇದ ಮಾಡಿದ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಮಾಡಿದ ನಂತರ ಆರೋಪಿ ವಿರ್ಗೋನ್ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular