Friday, September 20, 2024
Google search engine
Homeಮುಖಪುಟಡೆಲ್ಟಾ, ಆಲ್ಪಾಗಳಂತೆ ಒಮಿಕ್ರಾನ್ ಅಪಾಯಕಾರಿ ಅಲ್ಲ - ಇಸ್ರೇಲಿ ವಿಜ್ಞಾನಿ ಪ್ರೊ.ಡಾರ್ ಹೇಳಿಕೆ

ಡೆಲ್ಟಾ, ಆಲ್ಪಾಗಳಂತೆ ಒಮಿಕ್ರಾನ್ ಅಪಾಯಕಾರಿ ಅಲ್ಲ – ಇಸ್ರೇಲಿ ವಿಜ್ಞಾನಿ ಪ್ರೊ.ಡಾರ್ ಹೇಳಿಕೆ

ಒಮಿಕ್ರಾನ್ ರೂಪಾಂತರ ಡೆಲ್ಟಾ, ಆಲ್ಪಾ ಮತ್ತು ಕೊರೊನ ಸೋಂಕಿನ ಇತರೆ ರೂಪಾಂತರಗಳಂತೆ ಅಪಾಯಕಾರಿ ಆಗಿರುವುದಿಲ್ಲ. ಆದರೆ ಒಮಿಕ್ರಾನ್ ರೂಪಾಂತರ ಸೋಂಕು ವೇಗವಾಗಿ ಹರಡುತ್ತಿದೆ ಎಂದು ಇಸ್ರೇಲ್ ನ ಹಡಸ್ಸಾ-ಹೀಬ್ರೂ ವಿಶ್ವವಿದ್ಯಾಲಯದ ವೈದ್ಯಕೀಯ ಕೇಂದ್ರದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

ಒಮಿಕ್ರಾನ್ ವಿಶ್ವದ 38 ದೇಶಗಳಿಗೆ ಹರಡಿದೆ. ಆದರೆ ಯಾವುದೇ ಸಾವುಗಳು ಇದುವರೆಗೂ ವರದಿಯಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

“ನಮಗೆ ಪ್ರಸ್ತುತ ಲಭ್ಯವಿರುವ ಮಾಹಿತಿ ಪ್ರಕಾರ ಒಮಿಕ್ರಾನ್ ರೂಪಾಂತರವು ವೇಗವಾಗಿ ಹರಡುತ್ತಿದೆ ಎಂದು ನಂಬಲು ಕಾರಣವಿದೆ. ಆದರೆ ಇದು ತುಂಬಾ ಅಪಾಯಕಾರಿ ಅಲ್ಲ” ಎಂದು ಹಿರಿಯ ವೈದ್ಯ ಪ್ರೊ. ಡಾರ್ ಮೆವೊರಾಜ್ ಜೆರುಸಲೇಮ್ ಪೋಸ್ಟ್ ಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದ ಶ್ವಾನೆ ಡಿಸ್ಟ್ರಿಕ್ಟ್ ಒಮಿಕ್ರಾನ್ ರೂಪಾಂತರ ರೋಗಿಗಳ ವಿವರದಂತೆ ‘ ಹಿಂದಿನ ಎರಡು ವಾರಗಳಲ್ಲಿ ಆಸ್ಪತ್ರೆಗೆ ದಾಖಲಾದ 80ರಷ್ಟು ರೋಗಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಹೇಳಿದೆ. ಅವರಲ್ಲಿ ಹೆಚ್ಚಿನವರಿಗೆ ಆಮ್ಲಜನಕ ಬೆಂಬಲದ ಅಗತ್ಯವಿಲ್ಲ ಎಂಬುದನ್ನು ಒತ್ತಿ ಹೇಳಿದೆ.

ಒಮಿಕ್ರಾನ್ ವ್ಯಾಪಕವಾಗಿ ಹರಡು ಸಾಂಕ್ರಾಮಿಕ. ಆದರೆ ಅದು ಸೌಮ್ಯವಾಗಿರುತ್ತದೆ ಎಂದು ಮೆವೊರಾಚ್ ಹೇಳಿದ್ದಾರೆ. ಇದು ನಿಜವಾಗಿಯೂ ಜಗತ್ತಿಗೆ ಒಳ್ಳೆಯ ಸುದ್ದಿ. ಲಸಿಕೆ ಹಾಕಿದ ಜನರು ಸೋಂಕಿಗೆ ಒಳಗಾಗುವ ಸೂಚನೆಗಳು ಇವೆ. ಆದರೆ ಸೋಂಕು ಸೌಮ್ಯ ಸ್ವರೂಪದಲ್ಲಿದೆ ಎಂದು ತಿಳಿಸಿದ್ದಾರೆ.

ಕೆಲವರು ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಇದನ್ನು ನಾವು ಒಪ್ಪಿಕೊಳ್ಳಬೇಕು. ಹಾಗಾಗಿ ಲಭ್ಯವಿರುವ ಆಂಟಿವೈರಲ್ ಚಿಕಿತ್ಸೆಯನ್ನು ಅವರಿಗೆ ನೀಡಬೇಕಾಗಬಹುದು. ಲಸಿಕೆಗಳು ಪರಿಣಾಮಕಾರಿ ಏನಲ್ಲ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular